Advertisement
ಮೂರು ರೀತಿಯ ಸವಾಲು1962ರಲ್ಲಿ ಪ್ರಕಟವಾದ ಹಿಸ್ಟರಿ ಆಫ್ ದ ಕಾನ್‌ಫ್ಲಿಕ್ಟ್ ವಿತ್ ಚೀನ ಪುಸ್ತಕವು, ಲಡಾಖ್‌ನಲ್ಲಿ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ಬಣ್ಣಿಸುತ್ತದೆ: “”ಮಧ್ಯಾಹ್ನದ ವೇಳೆಗೆ ಜೋರಾಗಿ ಶೀತಗಾಳಿ ಬೀಸಲಾರಂಭಿಸಿ ಮರುದಿನ ಬೆಳಗ್ಗೆಯವರೆಗೂ ಮುಂದುವರಿಯುತ್ತದೆ.
ಎತ್ತರದ ಶೀತಲ ಪ್ರದೇಶಗಳಿಗೆ ನಿಯೋಜಿತವಾಗುವ ಸೈನಿಕರು ಆಮ್ಲಜನಕ, ಚಳಿ, ಗಾಳಿಯ ಸವಾಲಿನ ನಡುವೆಯೇ ಏನಿಲ್ಲವೆಂದರೂ 20-45 ಕೆ.ಜಿ ಭಾರವನ್ನು ಹೊತ್ತು ಸಾಗುತ್ತಾರೆ. ಆ ಕಾರಣಕ್ಕಾಗಿ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಲೇಹ್ ಹಾಗೂ ಮುಖ್‌ಪರಿಯಂಥ ಅತಿ ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಮಟ್ಟ 25ರಿಂದ 65 ಪ್ರತಿಶತ ಕಡಿಮೆ ಇರುತ್ತದೆ. ಇದನ್ನು ಎದುರಿಸಲು ಸೈನಿಕರಿಗೆ ಮೂರು ಹಂತದ ತರಬೇತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಆರು ದಿನಗಳವರೆಗೆ 9000-12000 ಅಡಿ ಎತ್ತರದ ಪ್ರದೇಶಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಸೈನಿಕರು ಎರಡು ದಿನಗಳ ವಿಶ್ರಾಂತಿಯ ಅನಂತರ, ನಾಲ್ಕು ದಿನಗಳವರೆಗೆ ಚಿಕ್ಕ ಭಾರಹೊತ್ತು ನಡೆಯುವುದು ಹಾಗೂ ಬೆಟ್ಟಗಳನ್ನು ಏರವುದು ಮಾಡುತ್ತಾರೆ. ಎರಡನೇ ಹಂತದ ತರಬೇತಿ 4 ದಿನಗಳವರೆಗೆ 15 ಸಾವಿರ ಅಡಿ ಎತ್ತರದಲ್ಲಿ ನಡೆಯುತ್ತದೆ. ಆಗಲೂ ನಡಿಗೆ, ಭಾರ ಹೊರುವುದು, ಬಂಡೆಗಲ್ಲುಗಳನ್ನು ಏರುವ ತರಬೇತಿ ನೀಡಲಾಗುತ್ತದೆ. ಇವರೆಲ್ಲರ ಜತೆಗೆ ಸಿಯಾಚಿನ್‌ನಂಥ ಪ್ರದೇಶ ಹಾಗೂ ಲಡಾಖ್‌ನಲ್ಲಿ ವರ್ಷಗಳಿಂದ ಚಳಿಗಾಲದ ಸಂದರ್ಭ ಕಾವಲು ಕಾಯುವ ವಿಶೇಷ ತರಬೇತಿ ಹೊಂದಿರುವ ಪಡೆಗಳೂ ಇರುತ್ತವೆ.
Related Articles
ಚಳಿಯಿಂದ ರಕ್ಷಣೆ ನೀಡುವುದಕ್ಕಾಗಿ ಸೂಕ್ತ ಬಟ್ಟೆಗಳು, ಬಹುಲೇಯರ್‌ಗಳ ಜಾಕೆಟ್, ಮುಖಗವಸು, ಹೆಲ್ಮೆಟ್ ಮತ್ತು ವಿಶೇಷ ಕನ್ನಡಕ ನೀಡಲಾಗುತ್ತದೆ. ಇನ್ನು ಅವರ ಬಳಿ ಇರುವ ಸಸ್ಟೇನೆನ್ಸ್ ಕಿಟ್‌ನಲ್ಲಿ ಸ್ಲಿàಪಿಂಗ್ ಬ್ಯಾಗ್, ಹೆಚ್ಚುವರಿ ಸಾಕ್ಸ್‌ಗಳು ಹಾಗೂ ಪ್ರತಿ ಸೈನಿಕನ ಬಳಿಯೂ ನಿತ್ಯ ಆಹಾರದ ಜತೆಗೆ ಕನಿಷ್ಠ 24 ಗಂಟೆಯವರೆಗೆ ಸಾಕಾಗುವಷ್ಟು ಹೆಚ್ಚುವರಿ ತುರ್ತು ಆಹಾರ ಪದಾರ್ಥಗಳು ಇರುತ್ತವೆ.ಇವೆಲ್ಲ ಟಿನ್‌ಕ್ಯಾನ್‌ಗಳಲ್ಲಿ ಇರುತ್ತವೆ. ಇನ್ನು ಅತ್ಯಂತ ಚಳಿಯೂ ಒಳನುಸುಳದಂಥ ಬೆಚ್ಚಗಿನ ಸುರಕ್ಷತ ಟೆಂಟ್‌ಗಳನ್ನೂ ಸೇನೆಗೆ ಒದಗಿಸಲಾಗಿದೆ.
Advertisement