Advertisement
ಅರಿಶಿನ ಟೀ ಮಾಡಲು 3- 4 ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ 2 ಚಮಚ ಅರಿಶಿನ ಹುಡಿಯನ್ನು ಸೇರಿಸಿ 5ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಬಳಿಕ ಸೋಸಿ ಅಗತ್ಯವಿದ್ದಷ್ಟು ಜೇನುತುಪ್ಪ, ನಿಂಬೆ ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್ ಬೇಕಿದ್ದರೆ ಬಾದಾಮಿ ಹಾಲು ಅಥವಾ ತೆಂಗಿನ ಹಾಲು ಸೇರಿಸಿ ಕುಡಿಯಬಹುದು. ಅರಸಿನ ಟೀ ಕುಡಿಯುವುದರಿಂದ ಹಲವು ಆರೋಗ್ಯಕರ ಲಾಭಗಳಿವೆ.– ಮಧ್ಯ ವಯಸ್ಸಿನಲ್ಲಿ ಕಾಡುವ ಸಂಧಿ ವಾತವನ್ನು ತಡೆಗಟ್ಟುವಲ್ಲಿ ಅರಿಶಿನ ಟೀ ಪ್ರಯೋಜನಕಾರಿಯಾಗಿದೆ.
– ಅರಿಶಿನವು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ದೇಹವನ್ನು ಚೈತನ್ಯ ಶೀಲ ಗೊಳಿಸುತ್ತದೆ ಎಂಬುದು ಸಂಶೋಧನೆ ಯಿಂದ ತಿಳಿದು ಬಂದಿದೆ.
– ರಕ್ತದೊತ್ತಡ ಹೆಚ್ಚಾದಾಗ ಹೃದಯಾ ಘಾತವಾಗುವ ಸಾಧ್ಯತೆ ಇರುತ್ತದೆ. ಆದರೆ ಅರಿಶಿನ ಟೀ ರಕ್ತದೊತ್ತಡವನ್ನು ನಿಯಂತ್ರಣ ಮಾಡುವುದರಿಂದ ಹೃದಯದ ಆರೋಗ್ಯಕ್ಕೂ ಇದು ಲಾಭದಾಯಕವಾಗಿದೆ.
– ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಸೇವನೆಯಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತದೆ. ಅರಿಶಿನ ಟೀಯು ಕಿಡ್ನಿಯ ಹಲವು ತೊಂದರೆಗಳಿಗೆ ಔಷಧವಾಗಿದೆ.
– ಅರಿಶಿನ ಟೀ ಸೇವನೆಯಿಂದ ಮಧು ಮೇಹವನ್ನೂ ನಿಯಂತ್ರಣದಲ್ಲಿ ಇರಿಸಬಹುದು.