Advertisement
ತೆಲಂಗಾಣ ಕಾಂಗ್ರೆಸ್ ನ ಈ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ. ಅವರ ಕಾರ್ಯದ ಶೈಲಿಯು ಅವರಿಗೆ ಪಕ್ಷದಲ್ಲಿ ಹಲವಾರು ವಿರೋಧಿಗಳನ್ನು ಗಳಿಸಿತ್ತು, ಆದರೆ 54 ವರ್ಷ ರೇವಂತ್ ದಕ್ಷಿಣದ ರಾಜ್ಯದಲ್ಲಿ ಪಕ್ಷವನ್ನು ಗೆಲುನೆಡೆ ಮುನ್ನಡೆಸಿದ್ದಾರೆ. ಇದಕ್ಕಿಂತ ಹೆಚ್ಚಾಗಿ, ರೇವಂತ್ ರೆಡ್ಡಿ ಬಿಆರ್‌ಎಸ್ ಭದ್ರಕೋಟೆ ಕಾಮರೆಡ್ಡಿಯಲ್ಲಿ ಮುಖ್ಯಮಂತ್ರಿ ಮತ್ತು ಭಾರತ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
Related Articles
Advertisement
ಸ್ಥಳೀಯ ನಾಯಕರ ಗುರುತಿಸುವಿಕೆ ಮತ್ತು ಪ್ರಾಮುಖ್ಯತೆಯು ಫಲ ನೀಡಿದ ಕರ್ನಾಟಕದ ಪಾಠ ಕಲಿತ ಕಾಂಗ್ರೆಸ್ ನಾಯಕತ್ವವು ಪಕ್ಷದೊಳಗಿನ ಅವರ ಪ್ರತಿಸ್ಪರ್ಧಿಗಳ ಪ್ರತಿಭಟನೆಯ ಹೊರತಾಗಿಯೂ ರೇವಂತ್ ರೆಡ್ಡಿ ಅವರನ್ನು ಬೆಂಬಲಿಸಿತು. ರೆಡ್ಡಿಯನ್ನು ದೊಡ್ಡ ವೇದಿಕೆಯ ನಾಯಕ ಎಂದು ಬಿಂಬಿಸಲಾಯಿತು, ಬೃಹತ್ ರ್ಯಾಲಿಗಳಲ್ಲಿ ಮತ್ತು ಪಕ್ಷದ ರಾಷ್ಟ್ರೀಯ ನಾಯಕರ ಜೊತೆಗೆ ನಿರಂತರವಾಗಿ ರೆಡ್ಡಿ ವೇದಿಕೆ ಹಂಚಿಕೊಂಡರು.
ಕೆಸಿಆರ್ ವಿರುದ್ಧದ ಸ್ಪರ್ಧಿಯಾಗಿ ರೆಡ್ಡಿಯನ್ನು ಹೈಕಮಾಂಡ್ ಆಯ್ಕೆ ಮಾಡಿರುವುದು ರಾಜ್ಯ ಚುನಾವಣೆಯ ಪೂರ್ವದಲ್ಲಿ ಅವರ ಇಮೇಜನ್ನು ವರ್ಧಿಸಿತು. ರೆಡ್ಡಿ ಅವರು ಸ್ಪರ್ಧಿಸಿದ ಎರಡನೇ ಸ್ಥಾನವಾದ ಕೊಡಂಗಲ್ ನಲ್ಲಿಯೂ ಅವರು ಜಯ ಸಾಧಿಸಿದ್ದಾರೆ.
ಮತ ಎಣಿಕೆಗೂ ಮುನ್ನ ಮಾತನಾಡಿದ ರೇವಂತ್ ರೆಡ್ಡಿ, ಕಾಂಗ್ರೆಸ್ ರಾಜ್ಯದಲ್ಲಿ ಭಾರಿ ಬಹುಮತದ ಗೆಲುವು ಕಾಣಲಿದೆ. ಪಕ್ಷವು 80ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.