ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವಂತೆಯೇ ಮಾಜಿ ಸಿ ಎಂ ಗಳಾದ ಸಿದ್ದರಾಮಯ್ಯ ಮತ್ತುಎಚ್.ಡಿ ಕುಮಾರಸ್ವಾಮಿ ನಡುವೆ ವಾಕ್ಸಮರ ಜೋರಾಗಿಯೇ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಮೈತ್ರಿ ಮುರಿದ ನಂತರ ಮಾಜಿ ಮುಖ್ಯಮಂತ್ರಿಗಳಿಬ್ಬರು ಮಾಡುತ್ತಿರುವ ಆರೋಪ ಪ್ರತ್ಯಾರೋಪ ಎಷ್ಟು ಸರಿ ? ಎಂಬ ಪ್ರಶ್ನೆ ಉದಯವಾಣಿ ಕೇಳಿತ್ತು. ಅದರಲ್ಲಿ ಆಯ್ದ ಕೆಲವು ಪ್ರತಿಕ್ರಿಯೆಗಳು ಇಂತಿವೆ.
ರವಿ ಕುಮಾರ್: ವಿಧಾನಸಭೆ ಚುನಾವಣೆಗೂ ಮೊದಲು ಇದೇ ರೀತಿ ಆರೋಪ ಪ್ರತ್ಯರೋಪ ಮಾಡಿದರು. ಆಮೇಲೆ ಅಧಿಕಾರಕ್ಕಾಗಿ ಸರ್ಕಾರ ಮಾಡಿದರು. ಮುಂದೆ ಕೂಡ ಸರ್ಕಾರ ರಚಿಸಬಹುದು. ಎಲ್ಲಾ ಅಧಿಕಾರಕ್ಕಾಗಿ..!
ಜೀವಂದರ್ ಪೂಜಾರಿ: ರಾಜಕೀಯ ಎಂಬುದು ಒಂದು ರೀತಿಯಲ್ಲಿ ಕುರ್ಚಿಯ ಆಟ. ಇಲ್ಲಿ ಯಾರೂ ಮಿತ್ರ ಯಾರೂ ಶತ್ರು ಎಂಬುದು ಮುಖ್ಯ ಅಲ್ಲ. ಯಾರು ಕೆಲಸ ಮಾಡುತ್ತಾರೆ ಎಂಬುದೇ ಮುಖ್ಯವಾಗುತ್ತದೆ.
ಮುನಿರೆಡ್ಡಿ: ಏನೇನು ಸರಿಯಲ್ಲ.! ಮತ್ತೊಮ್ಮೆ ಒಗ್ಗಟ್ಟಾಗಿಯೇ ಚುನಾವಣೆಗೆ ಹೋಗಿದ್ದರೆ ಗೆಲುವು ಸುಲಭವಾಗುತ್ತಿತ್ತು, ಇವರ ಭಿನ್ನಾಬಿಪ್ರಾಯಗಳು ಬಿಜೆಪಿ ಗೆ ಅನುಕೂಲಕರವಾಗಿದೆ.
ಮೋಹನ್ ಬಾಳಿಗ: ಇದೊಂದು ಚುನಾವಣಾ ತಂತ್ರ. ಚುನಾವಣೆ ಮಗಿದ ತಕ್ಷಣ ಎಲ್ಲಾ ಪಕ್ಷದವರು ಕೇಂದ್ರದಿಂದ ಎಷ್ಟು ಹಣ ಬರುತ್ತದೆ ಎಂದು ಚಿಂತಿಸುತ್ತಾರೆ. ? ಆ ಬಳಿಕ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿರುತ್ತದೆ. ಮೊದಲು ಈ ಚಿಂತನೆಯಿಂದ ಹೊರಬರಬೇಕು .
ಶ್ರೀನಿವಾಸ್ ಕೋಟ್ಯಾನ್: ಬಿಜೆಪಿಯನ್ನುಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮಾಡಿದ ತಂತ್ರಕ್ಕೆ ಇಂದು ಅದು ಬಲಿಯಾಗಿದೆ. ಮೈತ್ರಿ ವಿರುದ್ಧ ಕಾಂಗ್ರೇಸ್ ನಲ್ಲಿ ಒಳಬೇಗುಧಿ ಇದ್ದ ಕಾರಣ ಇಷ್ಟೆಲ್ಲಾ ಬೆಳವಣಿಗೆಗಳು ನಡೆದವು. ಮೊದಲಿನಿಂದಲೂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮುಖವಾಡ ಹಾಕಿಕೊಂಡು ಅಧಿಕಾರ ನಡೆಸುತ್ತಿದ್ದರು. ಇವಾಗ ಅದು ಮತ್ತೆ ಉಲ್ಬಣಿಸಿದೆ ಎನ್ನಬಹುದು.