Advertisement
“ಇದೊಂದು ದೊಡ್ಡ ವ್ಯವ ಹಾರವೆಂದೇ ಭಾವಿಸೋಣ. ಆದರೆ ಹನ್ನೊಂದರ ಯಾವ ಆಟಗಾರರೂ ಒಳಗೊಂಡಿಲ್ಲ ಅಂದಮೇಲೆ ಪಂದ್ಯವೊಂದನ್ನು ಫಿಕ್ಸ್ ಮಾಡಲು ಹೇಗೆ ಸಾಧ್ಯ? 9 ವರ್ಷಗಳ ಬಳಿಕ ಅವರಿಗೆ ಜ್ಞಾನೋದಯ ಆಯಿತೇ?’ ಎಂಬುದಾಗಿ ಮಾಹೇಲ ಜಯವರ್ಧನ ವ್ಯಂಗ್ಯ ವಾಗಿ ಪ್ರಶ್ನಿಸಿದ್ದಾರೆ.
ಈ ಪಂದ್ಯ ಫಿಕ್ಸ್ ಆಗಿತ್ತು ಎಂಬುದಾಗಿ ನೇರ ಆರೋಪ ಮಾಡಿದವರಲ್ಲಿ ಅಲುತಗಾಮಗೆ ಮೊದಲಿಗರೇನಲ್ಲ. ಲಂಕೆಗೆ ಏಕೈಕ ವಿಶ್ವಕಪ್ ತಂದಿತ್ತ ಕಪ್ತಾನ ಅರ್ಜುನ ರಣತುಂಗ 2017ರಲ್ಲಿ ಮೊದಲ ಸಲ ಇಂಥದೇ ಅನುಮಾನ ವ್ಯಕ್ತಪಡಿಸಿದ್ದರು. “ಆಗ ನಾನು ಭಾರತದಲ್ಲೇ ಇದ್ದು, ವೀಕ್ಷಕ ವಿವರಣೆ ನೀಡುತ್ತಿದ್ದೆ. ಲಂಕಾ ಸೋತಾಗ ನನಗೆ ಆಘಾತವಾಗಿತ್ತು, ಅನುಮಾನವೂ ಬಂದಿತ್ತು. ಅಂದಿನ ಫೈನಲ್ ಪಂದ್ಯವನ್ನು ತನಿಖೆಗೆ ಒಳಪಡಿಸಬೇಕು ಎಂದಿದ್ದೆ…’ ಎಂಬುದಾಗಿ ರಣತುಂಗ ಆಗ್ರಹಿಸಿದ್ದರು.