Advertisement
25ರ ಹರೆಯದ ಭಜರಂಗ್ ಜನಿಸಿದ್ದು ಹರಿಯಾಣದ ಝಾಜ್ಜರ್ ಜಿಲ್ಲೆಯ ಖುರ್ದನ್ ಗ್ರಾಮದಲ್ಲಿ. ತಂದೆಯ ಪ್ರೋತ್ಸಾಹದಿಂದ ತನ್ನ ಏಳನೆ ಹರೆಯದಲ್ಲೇ ಕುಸ್ತಿ ಗರಡಿ ಸೇರಿದ ಭಜರಂಗ್ ಇಂದು ಮಣ್ಣಿನ ಆಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಜರಂಗಿಯಂತೆ ಮೆರೆಯುತ್ತಿದ್ದಾರೆ.
Related Articles
ಒಬ್ಬ ಸಾಮಾನ್ಯ ಹುಡುಗ ಇಂದು ಅಂತಾರಾಷ್ಟ್ರೀಯ ಕುಸ್ತಿ ಪಟುವಾಗಲು ಆತನ ಹಠ, ಕಠಿಣ ಅಭ್ಯಾಸ, ಸತತ ಪ್ರಯತ್ನವೇ ಕಾರಣ. ಒಲಿಂಪಿಕ್ ಪ್ರಶಸ್ತಿ ವಿಜೇತ ಯೋಗಿಶ್ವರ್ ದತ್ ಮಾರ್ಗದರ್ಶನ ಮತ್ತು ಎಂಜಾರಿಯೋಸ್ ಬೆಂಟಿನಿಡಿಸ್ ತರಬೇತಿಯ ಗರಡಿಯಲ್ಲಿ ಕುಸ್ತಿ ಪಟ್ಟುಗಳ ಮೇಲೆ ಬಿಗಿ ಹಿಡಿತ ಪಡೆದ ಪೂನಿಯಾ ಮುಟ್ಟಿದ್ದೆಲ್ಲಾ ಚಿನ್ನವಾಗಲಿಲ್ಲ. ಪೂನಿಯಾ ಗೆಲುವಿನ ನಗುವಿನ ಹಿಂದೆ ಕಠಿಣ ಮನಸ್ಥಿತಿಯ ಏಳು ವರ್ಷದ ಪಯಣವಿದೆ.
Advertisement
ಮೊಬೈಲ್ ಬಳಸಲ್ಲ, ಸಿನಿಮಾ ಥಿಯೇಟರ್ ಹೇಗಿದೆ ಎಂತಾನೆ ಗೊತ್ತಿಲ್ಲ!ಆಧುನಿಕ ಜನಜೀವನದಲ್ಲಿ ಮೊಬೈಲ್ ಬಳಕೆ ಜೀವನ ಅಗತ್ಯಗಳಲ್ಲಿ ಒಂದಾಗಿದೆ. ಇಂದಿನ ಕಾಲದಲ್ಲಿ ಯಾರಾದರೂ ಮೊಬೈಲ್ ಬಳಸಲ್ಲ ಎಂದರೆ ನಂಬುವುದೇ ಕಷ್ಟ. ಅದರಲ್ಲೂ ಏಳು ವರ್ಷಗಳ ಕಾಲ! ಹೌದು, 2010ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಆರಂಭಿಸಿದ ಭಜರಂಗ್ ಅಂದೇ ಮೊಬೈಲ್ ಫೋನ್ ನಿಂದ ದೂರವಾದರು. ಮೊಬೈಲ್ ಇದ್ದರೆ ಆಟದ ಮೇಲೆ ಏಕಾಗ್ರತೆ ವಹಿಸಲು ಸಾಧ್ಯವಿಲ್ಲವೆಂಬ ಯೋಗಿಶ್ವರ್ ದತ್ ಅವರ ಮಾರ್ಗದರ್ಶನದಂತೆ ಭಜರಂಗ್ ಫೋನ್ ಬಳಸಲೇ ಇಲ್ಲ. ವಿದೇಶಿ ಕೂಟಗಳಿಗೆ ಹೋದಾಗ ಅಲ್ಲಿ ಎಲ್ಲೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿಲ್ಲ. ವಿಶೇಷವೆಂದರೆ ಭಜರಂಗ್ ಪೂನಿಯಾಗೆ ಇದವರೆಗೆ ಸಿನಿಮಾ ಮಂದಿರ ಹೇಗೆ ಇರುತ್ತದೆ ಎಂದೇ ಗೊತ್ತಿಲ್ಲ. ಅಷ್ಟರಮಟ್ಟಿಗೆ ಪೂನಿಯಾ ತನ್ನ ಆಟದಲ್ಲಿ ತಲ್ಲೀನರಾಗಿದ್ದರು. ಈ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ಪೂನಿಯಾ ಪಡೆದರು. ಸುಶೀಲ್ ಕುಮಾರ್, ಯೋಗೀಶ್ವರ್ ದತ್ ನಂತರ ವಿಶ್ವ ಕುಸ್ತಿಯಲ್ಲಿ ಭಾರತದ ಕೀರ್ತಿ ಪತಾಕೆ ಹಾರುಸುತ್ತಿರುವ ಭಜರಂಗ್ ಪೂನಿಯಾ 2020ರ ಟೋಕಿಯೋ ಒಲಿಂಪಿಕ್ಸ್ ಚಿನ್ನಕ್ಕೆ ಕಣ್ಣಿಟ್ಟಿದ್ದಾರೆ. ಒಲಿಂಪಿಕ್ಸ್ ಕುಸ್ತಿ ಅಖಾಡದಲ್ಲಿ ಭಜರಂಗ್ ಭಾರತದ ತ್ರಿವರ್ಣವನ್ನು ಹಾರಿಸಲಿ ಎಂದು ಭಾರತೀಯರ ಆಶಯ.