Advertisement

ಅಯೋಧ್ಯೆ ವಿವಾದವಾಗಿ ಬದಲಾಗಿದ್ದು ಹೇಗೆ ?

05:53 PM Aug 02, 2019 | Sriram |

ಮಣಿಪಾಲ: ಅಯೋಧ್ಯೆ ಭೂಮಿಯ ತಗಾದೆ ಬ್ರಿಟಿಷ್ ಆಡಳಿತದ ಕಾಲದಿಂದ ಬಳುವಳಿಯಾಗಿ ಬಂದಿದೆ. ರಾಜರ ಆಡಳಿತದ ಕಾಲದಲ್ಲಿ ಹುಟ್ಟಿಕೊಂಡ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿಫಲವಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗದ ಮೊರೆ ಹೋಗುವ ನಿರ್ಧಾರ ಕೈಗೊಂಡರೂ ಅಲ್ಲೂ ಇತ್ಯರ್ಥ ಕಾಣದೇ ಮತ್ತೆ ಕೋರ್ಟ್ ಕಟಕಟೆಯ ಹೊರಗೆ ಸಂಧಾನ ನಡೆಸಲು ವೇದಿಕೆಯೊಂದು ಸಿದ್ಧವಾಗಿತ್ತು. ಆದರೆ ಎಲ್ಲ ಪ್ರಯತ್ನಗಳು ವಿಫಲವಾಯಿತು.

Advertisement

ಈ ಅಯೋಧ್ಯೆ ವಿವಾದಿತ ಸ್ಥಳವಾಗಿ ಬದಲಾದ ಪರಿ ಹೇಗೆ? ಇಲ್ಲಿದೆ ಓದಿ…
1528ರಲ್ಲಿ ಮೊಘಲ್ ದೊರೆ ಬಾಬರ್ ತನ್ನ ಆಡಳಿತದ ಅವಧಿಯಲ್ಲಿ ಅಯೋಧ್ಯೆ ಭೂಮಿಯಲ್ಲಿ ಬಾಬರಿ ಮಸೀದಿ ನಿರ್ಮಾಣ.
1853: ಅಯೋಧ್ಯೆ ವಿವಾದಿತ ಸ್ಥಳದ ಕುರಿತಂತೆ ಮೊದಲ ಹಿಂಸಾಚಾರ. ಬ್ರಿಟಿಷರ ಆಡಳಿತದ ಅವಧಿಯಲ್ಲೇ ಬಾಬರ್ ಮಸೀದಿಯ ಮೇಲೆ ಹಿಂದೂಗಳ ಆಕ್ರೋಶ.
1949: ಈಗಿನ ವಿವಾದಿತ ಕಟ್ಟದಲ್ಲಿ ಭಗವಾನ್ ಶ್ರೀರಾಮಚಂದ್ರನ ಮೂರ್ತಿಯನ್ನು ಪ್ರತಿಷ್ಠಾಪನೆ. ಕೋರ್ಟ್‌ನಲ್ಲಿ ಹಿಂದೂಗಳು ಹಾಗೂ ಮುಸ್ಲಿಂ ನಾಯಕರ ದಾವೆ. ಅಯೋಧ್ಯೆಯನ್ನು ವಿವಾದಿತ ಭೂಮಿ ಎಂದು ಘೊಷಿಸಿದ ಕೋರ್ಟ್.
1959: ಡಿ. 17ರಂದು ನಿರ್ಮಮೋಹಿ ಅಖರಾ ಎಂಬವರು ವಿವಾದಿತ ಸ್ಥಳದ ಸ್ವಾಧೀನ ಕುರಿತ ಪ್ರಕರಣ ದಾಖಲು.
1961: ವಿವಾದಿತ ಜಾಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಎಂದು ಡಿ. 18ರಂದು ಕೋರ್ಟ್ ಮೊರೆ ಹೋದ ಸುನ್ನಿ ಸೆಂಟ್ರಲ್ ಬೋರ್ಡ್ ಆಫ್ ವಕ್ಫ್.
1984: ವಿಶ್ವ ಹಿಂದೂ ಪರಿಷತ್ ವತಿಯಿಂದ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ಕಟ್ಟುವ ಅಭಿಯಾನ ಆರಂಭ.
1986: ಫಾಝಿಯಾಭಾದ್ನ ಜಿಲ್ಲಾ ನ್ಯಾಯಾಲಯ ಅಯೋಧ್ಯೆಯ ಕಟ್ಟಡದ ಗೇಟ್ ಬಾಗಿಲು ತೆರೆಯಲು ಸೂಚನೆ. ಜತೆಗೆ ಕಟ್ಟದ ಒಳಗೆ ಶ್ರೀರಾಮನನ್ನು ಪೂಜಿಸಲು ಅನುಮತಿ. ಇದಕ್ಕೆ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ಷೇಪ. ಬಾಬರಿ ಮಸೀದಿ ಆಕ್ಷನ್ ಕಮಿಟಿ ಸ್ಥಾಪನೆ.
1989: ಬಾಬರಿ ಮಸೀದಿಯ ಪಕ್ಕ ರಾಮ ಮಂದಿರ ಸ್ಥಾಪನೆಗೆ ಅನುಮತಿ ನೀಡಿದ ಅಂದಿನ ಪ್ರಧಾನಿ ರಾಜೀವ್ ಗಾಂಧಿ. ನವೆಂಬರ್ 9ರಂದು ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ ವಿಶ್ವ ಹಿಂದೂ ಪರಿಷತ್.
1990: ಸೆ. 25ರಂದು ಬಿಜೆಪಿ ನೇತಾರ ಲಾಲ್ ಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆಯ ವರೆಗೆ ರಥಯಾತ್ರೆ ಆರಂಭ. ಬಿಹಾರದ ಸಮಷ್ಟಿಪುರದಲ್ಲಿ ಅಡ್ವಾಣಿ ಬಂಧನ.
1992: ವಿವಾದಿತ ಬಾಬರ್ ಮಸೀದಿಯನ್ನು ಡಿ. 6ರಂದು ಹಿಂದೂ ಕಾರ್ಯಕರ್ತರು / ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ.
2002: ಹೈಕೋರ್ಟ್‌ನಲ್ಲಿ ತ್ರಿ ಸದಸ್ಯ ಪೀಠದಿಂದ ವಿವಾದಿತ ಭೂಮಿತ ಒಡೆತನಕ್ಕಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ. ಜಾಗದ ಮೂಲವನ್ನು ಅರಿಯುವ ಸಲುವಾಗಿ ಭಾರತೀಯ ಪುರಾತಣ್ತೀ ಇಲಾಖೆ ಜಾಗವನ್ನು ಉತVಲನ.
2003: ಭಾರತೀಯ ಪುರಾತಣ್ತೀ ಇಲಾಖೆ ಮಸೀದಿ ನಿರ್ಮಿಸಿದ್ದ ಜಾಗದ ಅಡಿಯಲ್ಲಿ ದೇವಸ್ಥಾನ ಇದ್ದ ಕುರಿತು ಸ್ಪಷ್ಟತೆ.
2009: ಲಿಬರನ್ ಸಮಿತಿಯಿಂದ ಕೋರ್ಟ್‌ಗೆ ಗೌಪ್ಯ ವರದಿ ಸಲ್ಲಿಕೆ.
2010: ಜುಲೈ. 26ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ ಲಕ್ನೋ ಹೈಕೋರ್ಟ್. ಸಮಸ್ಯೆಯ ಇತ್ಯರ್ಥಕ್ಕಾಗಿ ಸರ್ವ ಪಕ್ಷದ ಅಭಿಪ್ರಾಯ ಸಂಗ್ರಹ. ಹೈ ಕೋರ್ಟ್ ವಿವಾದಿತ ಭೂಮಿಯನ್ನು 3 ಪಾಲು ಮಾಡಿ ಆದೇಶ. ಸುಪ್ರಿಂ ಕೋಟ್ ಮೆಟ್ಟಿಲೇರಿದ ಪ್ರಕರಣ.
2011: ಬಾಬರಿ ಮಸೀದಿ ಧ್ವಂಸ ಪ್ರಕರಣ ಅಡ್ವಾಣಿ ಹಾಗೂ ಇತರರ ಮೇಲೆ ಕ್ರಮಕ್ಕೆ ತೀರ್ಪು.
2015: ಸುಪ್ರಿಂ ಕೋರ್ಟ್‌ನಿಂದ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಮುರಳೀ ಮನೋಹರ ಜೋಷಿ ಅವರಿಗೆ ನೋಟಿಸ್.
2017: ಈ ಪ್ರಕರಣ ಅತ್ಯಂತ ಸೂಕ್ಷವಾಗಿದ್ದು, ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಎಂದು ಹೇಳಿದ ಕೋರ್ಟ್. ಲಾಲ್ ಕೃಷ್ಣ ಅಡ್ವಾಣಿ, ಮುರಳೀ ಮನೋಹರ ಜೋಷಿ, ಉಮಾ ಭಾರತಿ ಹಾಗೂ ವಿನಯ್ ಕಠಿಯಾರ್ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು.
2018: ಹಿರಿಯ ವಕೀಲ ರಾಜೀವ್ ಧವನ್ ನಿತ್ಯ ವಿಚಾರಣೆ ನಡೆಸುವ ಮೂಲಕ ಪ್ರಕರಣ ಕೊನೆಗೊಳಿಸಲು ಕೋರ್ಟ್‌ಗೆ ಮನವಿ. ಸೆ. 27ರಂದು ಮನವಿ ತಿರಸ್ಕರಿಸಿ, ವಿಚಾರಣೆ ನಡೆಯುವ ದಿನಾಂಕ ಪ್ರಕಟಿಸಿದ ಕೋರ್ಟ್.
2019: ದಶಕಗಳ ಹಳೆಯ ಪ್ರಕರಣವನ್ನು ಇತ್ಯರ್ಥಗೊಳಿಸಲು ನಿವೃತ್ತ ನ್ಯಾಯಮೂರ್ತಿ ಕಲೀಫುಲ್ಲಾ, ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಮತ್ತು ಖ್ಯಾತ ಮಧ್ಯಸ್ಥಿಕೆದಾರ, ಹಿರಿಯ ವಕೀಲ ಶ್ರೀರಾಮ್ ಪಂಚು ಸಮಿತಿಯಮೂರು ಸದಸ್ಯರ ಮಧ್ಯಸ್ಥಿಕೆ ಸಮಿತಿಯನ್ನು ಸುಪ್ರಿಂ ಕೋರ್ಟ್ ರಚಿಸಿತ್ತು. ಆದರೆ ಇದು ಬಗೆಹರಿಸಲು ವಿಫಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next