Advertisement

ಹೇಳಿಕೆ ತಿರುಚಿದ್ದಕ್ಕೆ ಸಚಿವ ಗಡ್ಕರಿ ಕೆಂಡ: ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ  ಎಚ್ಚರಿಕೆ

06:55 PM Aug 25, 2022 | Team Udayavani |

ನವದೆಹಲಿ: ತಮ್ಮ ಹೇಳಿಕೆಗಳನ್ನು ತಿರುಚಿ ರಾಜಕೀಯ ಲಾಭಕ್ಕಾಗಿ ಕಥೆ ಕಟ್ಟುತ್ತಿರುವವರ ವಿರುದ್ಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಗುರುವಾರ ಹರಿಹಾಯ್ದಿದ್ದಾರೆ. ಜತೆಗೆ, ಸರ್ಕಾರ ಮತ್ತು ಪಕ್ಷದ ಹಿತಾಸಕ್ತಿಯಿಂದ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸುಳಿವನ್ನೂ ನೀಡಿದ್ದಾರೆ.

Advertisement

ಕಳೆದ ವಾರವಷ್ಟೇ ಬಿಜೆಪಿ ಸಂಸದೀಯ ಮಂಡಳಿಯಿಂದ ಗಡ್ಕರಿ ಅವರನ್ನು ಕೈಬಿಡಲಾಗಿತ್ತು. ತದನಂತರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಗ್ರಾಮವೊಂದರ ರಸ್ತೆ ನಿರ್ಮಾಣದ ವೇಳೆ ಅಧಿಕಾರಿಯೊಬ್ಬರಿಗೆ ತಾವು ಎಚ್ಚರಿಕೆ ನೀಡಿದ್ದನ್ನು ಸ್ಮರಿಸಿದ್ದ ಅವರು, “ಪರಿಣಾಮಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸವನ್ನು ನಾನು ಮಾಡುತ್ತೇನೆ. ಸಾಧ್ಯವಿದ್ದರೆ ನನ್ನ ಜೊತೆಗೆ ನಿಲ್ಲಿ. ಇಲ್ಲದಿದ್ದರೂ ನಾನೇನೂ ಚಿಂತೆ ಮಾಡುವುದಿಲ್ಲ ಎಂದಿದ್ದೆ’ ಎಂದು ಹೇಳಿದ್ದರು. ಇದನ್ನು ಕೆಲವು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ “ಗಡ್ಕರಿ ಅವರು ಸಂಸದೀಯ ಮಂಡಳಿಯಲ್ಲಿ ಹುದ್ದೆ ಕಳೆದುಕೊಂಡಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಈ ಹೇಳಿಕೆ ನೀಡಿದ್ದರು’ ಎಂದು ಪ್ರಕಟಿಸಲಾಗಿದೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗಡ್ಕರಿ, “ಇಂಥ ದುರುದ್ದೇಶಪೂರಿತ ಅಜೆಂಡಾಗಳಿಂದ ನಾನು ಡಿಸ್ಟರ್ಬ್ ಆಗಲ್ಲ. ಆದರೆ, ಇನ್ನು ಮುಂದೆ ಈ ರೀತಿ ನನ್ನ ಹೇಳಿಕೆ ತಿರುಚಿದರೆ ಕಾನೂನು ಕ್ರಮ ಕೈಗೊಳ್ಳಲು ನಾನು ಹಿಂಜರಿಯುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next