Advertisement

Rameshwaram Cafe Case; ಶಂಕಿತ ಬಾಂಬರ್‌ ಚೆನ್ನೈಯಲ್ಲಿ ಟೋಪಿ ಖರೀದಿ?

11:27 PM Mar 22, 2024 | Team Udayavani |

ಬೆಂಗಳೂರು: ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣ ನಡೆದು 21 ದಿನ ಕಳೆದರೂ ಶಂಕಿತ ಮಾತ್ರ ಇನ್ನೂ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸಿಕ್ಕಿಬಿದ್ದಿಲ್ಲ. ಆದರೆ ಆತ ಧರಿಸಿದ್ದ ಟೋಪಿಯ ಜಾಡು ಹಿಡಿದು ಹಲವು ಮಹತ್ವದ ಸುಳಿವು ಸಂಗ್ರಹಿಸಿದ್ದಾರೆ.

Advertisement

ಕೃತ್ಯ ಎಸಗಿದ ಬಳಿಕ ಕೆಫೆಯಿಂದ ಒಂದಿಷ್ಟು ಕ್ರಮಿಸಿ ಧಾರ್ಮಿಕ ಸ್ಥಳದ ಬಳಿ ಶಂಕಿತ ಉಗ್ರ ಟೋಪಿಯನ್ನು ಬಿಟ್ಟು ಶರ್ಟ್‌ ತೆಗೆದು, ರೌಂಡ್‌-ನೆಕ್‌ ಟಿ-ಶರ್ಟ್‌ ಧರಿಸಿ ತೆರಳಿದ್ದ. ಆದರೆ ಅಲ್ಲಿ ಪತ್ತೆಯಾಗಿದ್ದ ಆತನ ಟೋಪಿಯ ಜಾಡು ಹಿಡಿದು ಹೊರಟಾಗ ಇದನ್ನು ಚೆನ್ನೈಯಲ್ಲಿ ಖರೀದಿಸಿರುವ ಸುಳಿವು ಸಿಕ್ಕಿದೆ. ಟೋಪಿ ಖರೀದಿಸಿದ ಚಿಲ್ಲರೆ ಅಂಗಡಿಯ ಒಂದು ತಿಂಗಳ ಸಿಸಿಟಿವಿ ಬ್ಯಾಕ್‌ಅಪ್‌ನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದರು. ಆಗ ಕಳೆದ ಜನವರಿ ಅಂತ್ಯದಲ್ಲಿ ಚಿಲ್ಲರೆ ಅಂಗಡಿಯಲ್ಲಿ ಈ ಟೋಪಿ ಖರೀದಿಸಿರುವುದು ಗೊತ್ತಾಗಿದೆ. ಇಬ್ಬರು ಯುವಕರು ಚಿಲ್ಲರೆ ಅಂಗಡಿಗಳಲ್ಲಿ ಟೋಪಿ, ಇತರ ವಸ್ತುಗಳನ್ನು ಖರೀದಿಸುವ ಫ‌ೂಟೇಜ್‌ ತನಿಖಾಧಿಕಾರಿಗಳಿಗೆ ಸಿಕ್ಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ವಶಪಡಿಸಿಕೊಂಡ ಟೋಪಿಯಲ್ಲಿ ಕೂದಲು ಪತ್ತೆಯಾಗಿದ್ದು ಇದನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌)ಕ್ಕೆ ಕಳುಹಿಸಲಾಗಿದೆ. ಇದರ ಆಧಾರದ ಮೇಲೆ ವೈಜ್ಞಾನಿಕವಾಗಿ ಕೆಲವೊಂದು ಪ್ರಕ್ರಿಯೆ ಮೂಲಕ ಆತನ ಕುಟುಂಬದ ಮೂಲ ಪತ್ತೆಹಚ್ಚಲು ಒಂದು ತಂಡ ಮುಂದಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next