Advertisement

ವಸತಿ ಯೋಜನೆ ಮನೆ ನಿರ್ಮಾಣಕ್ಕೆ ಮತ್ತೊಂದು ಅವಕಾಶ

09:05 PM Feb 23, 2020 | Lakshmi GovindaRaj |

ಸಕಲೇಶಪುರ: ವಿವಿಧ ಕಾರಣಗಳಿಂದಾಗಿ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಿಸಿಕೊಳ್ಳದ ಫ‌ಲಾನುಭವಿಗಳ ಮನೆಗಳ ನಿರ್ಮಾಣಕ್ಕೆ ಸರ್ಕಾರ ಇದೀಗ ಮನೆ ನಿರ್ಮಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಿದೆ.

Advertisement

ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಯೋಜನೆ ಮತ್ತು ಬಸವ ವಸತಿ ಯೋಜನೆಯಡಿ ಸಕಾಲದಲ್ಲಿ ಮನೆ ನಿರ್ಮಿಸಿಕೊಳ್ಳದ ಸಕಲೇಶಪುರ ತಾಲೂಕಿನ 1,160 ಮನೆಗಳ ನಿರ್ಮಾಣದ ತಡೆಯನ್ನು ಫೆ.14 ರಂದು ತೆರವುಗೊಳಿಸಿದ್ದು, 2020ರ ಮಾ.14 ರವರೆಗೆ ಮನೆಗಳ ನಿರ್ಮಾಣಕ್ಕೆ ಕಾಲಾವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಇದರ ಸದುಪಯೋಗವನ್ನು ಬಳಸಿಕೊಂಡು ಸಕಲೇಶಪುರ ತಾಲೂಕಿನ 26 ಗ್ರಾಮ ಪಂಚಾಯಿತಿಗಳ 1,160 ಮನೆಗಳ ಫ‌ಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಂಡು ಸರ್ಕಾರದ ಸಹಾಯಧನವನ್ನು ಪಡೆದುಕೊಳ್ಳುವಂತೆ ಸೂಚಿಸಿದೆ.

ಪಿಡಿಒಗಳಿಗೆ ನೋಟಿಸ್‌: ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬ್ಲಾಕ್‌ ತೆರವಾದ ಮನೆಗಳ ಫ‌ಲಾನುಭವಿಗಳಿಗೆ ನೋಟಿಸ್‌ ನೀಡಿ ತುರ್ತಾಗಿ ಮನೆಗಳ ನಿರ್ಮಾಣವಾಗುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ರದ್ದಾದ ಮನೆಗಳ ಫ‌ಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿಗೆ ಭೇಟಿ ನೀಡಿ ವಿಚಾರಿಸಲು ಸೂಚಿಸಿದೆ.

ಪೋಟೋ ಅಪ್‌ಲೋಡ್‌ ಮಾಡಲು ಸೂಚನೆ: ಫ‌ಲಾನುಭವಿಗಳು ಈಗಾಗಲೇ ಅಡಿಪಾಯ ನಿರ್ಮಿಸಿಕೊಂಡಿದ್ದರೆ ಆ್ಯಂಡ್ರಾಯ್ಡ್ ಪೋನ್‌ ನ ಗೂಗಲ್‌ ಪ್ಲೇಸ್ಟೋರ್‌ ನಲ್ಲಿ ಇಂದಿರಾ ಮನೆ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡು ತಮ್ಮ ಮನೆಯ ಅಡಿಪಾಯದ ಪೋಟೋ ಅಪ್‌ ಲೋಡ್‌ ಮಾಡಲು ಸೂಚಿಸಿದೆ.

Advertisement

ವಸತಿ ಯೋಜನೆ ಪ್ರಗತಿ: ಈಗಾಗಲೇ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್‌ರವರ ಕಾರ್ಯದಕ್ಷತೆಯಿಂದ ತಾಲೂಕು ವಸತಿ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಸರ್ಕಾರದ ಈ ತೀರ್ಮಾನದಿಂದ ವಸತಿ ಯೋಜನೆಯ ಅನುಷ್ಠಾನದಲ್ಲಿ ಮತ್ತಷ್ಟು ಸಾಧನೆ ಮಾಡುವ ಎಲ್ಲಾ ಸಾಧ್ಯತೆಗಳಿದೆ.

ಸರ್ಕಾರ ಬಡವರಿಗೆ ಮನೆ ಕಟ್ಟಿಸಿಕೊಳ್ಳಲು ಅವಕಾಶ ನೀಡಿದ್ದು ಅರ್ಜಿ ಸಲ್ಲಿಸಿದವರು ಕೂಡಲೇ ಇದರ ಸದುಪಯೋಗ ಮಾಡಿಕೊಳ್ಳಬೇಕು.
-ಹರೀಶ್‌, ತಾಪಂ ಕಾರ್ಯನಿರ್ವಹಣಾಧಿಕಾರಿ

ಬಡವರ ಅನುಕೂಲಕ್ಕಾಗಿ ಬಿಜೆಪಿ ಸರ್ಕಾರ ಈ ಒಂದು ತೀರ್ಮಾನ ಕೈಗೊಂಡಿರುವುದು ಶ್ಲಾಘನೀಯ. ಸರ್ಕಾರದ ಈ ನಿರ್ಧಾರದಿಂದ ಹಲವಾರು ಬಡವರಿಗೆ ಅನುಕೂಲವಾಗುತ್ತದೆ.
-ಶ್ವೇತಾ, ತಾಪಂ ಅಧ್ಯಕ್ಷರು

* ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next