Advertisement

“ಹೌಸಿಂಗ್‌’ಈಸ್‌ ಕಿಂಗ್‌; ವಸತಿ ವಲಯದ ಸಮಸ್ಯೆಗೆ ಕಾಯಕಲ್ಪ

07:12 PM Nov 17, 2019 | Sriram |

ಕಳೆದ ಎರಡು -ಮೂರು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಹಿಂಜರಿತ ಅನುಭವಿಸುತ್ತಿದೆ. ಬ್ಯಾಂಕುಗಳಲ್ಲಿ ಗೃಹಸಾಲ ದೊಡ್ಡ ಪ್ರಮಾಣದಲ್ಲಿ ಸುಸ್ತಿಯಾಗುತ್ತಿದೆ. ಬ್ಯಾಂಕಿನಲ್ಲಿ ಗೃಹಸಾಲ ಮಾಡಿದವರು ಕಂತು ತುಂಬುತ್ತಿದ್ದಾರೆ. ಆದರೆ, ಸೂರು ತಲೆಯ ಮೇಲೆ ಬರುವ ದಿನ ಹತ್ತಿರವಾಗುತ್ತಿಲ್ಲ. ಪರಿಣಾಮ ಬಾಡಿಗೆ ಮನೆಯಲ್ಲಿ ದಿನ ಕಳೆಯುತ್ತಾ ಬಾಡಿಗೆಯನ್ನೂ ಕೊಡುತ್ತಾ, ಬ್ಯಾಂಕಿಗೆ ಬಡ್ಡಿಯನ್ನೂ ತೆರುತ್ತಾ ಒಮ್ಮೆ ಬ್ಯಾಂಕಿನ ಮೇಲೆ, ಒಮ್ಮೆ ರಿಯಲ್‌ ಎಸ್ಟೇಟ್‌ ವ್ಯವಸ್ಥೆಯ ಮೇಲೆ ಅಕ್ರೋಶ ವ್ಯಕ್ತ ಪಡಿಸುವವರ ಸಂಖ್ಯೆ ಗಣನೀಯವಾಗಿ ಇದೆ. ಹಾಗೆಯೇ ಗೃಹಸಾಲದ ಕಂತು ಕೂಡಾ ತುಂಬಲಾರದೇ ಸಂಕಷ್ಟದಲ್ಲಿರುವವರ ಸಂಖ್ಯೆಯೂ ಸಾಕಷ್ಟು ಇದೆ. ಅದೆಷ್ಟೋ ಹೌಸಿಂಗ್‌ ಪ್ರಾಜೆಕ್ಟ್ ಗಳು ಪೂರ್ತಿಯಾಗದೇ ಅರ್ಧದಲ್ಲಿಯೇ ನಿಂತು ಈ ಪ್ರಾಜೆಕ್ಟ್ ಗಳಲ್ಲಿ ಮನೆ ಬುಕ್‌ ಮಾಡಿದವರ ಬದುಕು ಅಯೋಮಯವಾಗಿದೆ. ಪ್ರಾಜೆಕ್ಟ್ ಗಳನ್ನು ಪೂರ್ತಿಗೊಳಿಸಲು ಫ‌ಂಡ್ಸ್‌ ಇಲ್ಲದೇ ಹಲವು ಬಿಲ್ಡ ರ್‌ಗಳು ಸಂಕಷ್ಟದಲ್ಲಿ ಇದ್ದಾರಂತೆ. ಕೆಲವು ರಿಯಲ್‌ ಎಸ್ಟೇಟ್‌ ಕಂಪನಿಗಳು ದಿವಾಳಿ ಅನುಭವಿಸುತ್ತಿವೆ. ಕೆಲವು ಬಿಲ್ಡರ್‌ಗಳು ಜೈಲಿಗೆ ಹೋಗಿದ್ದಾರಂತೆ. ಇಂತಹ ಹಲವು ಕಂಪನಿಗಳನ್ನು National Company Law Tribunal ಗೆ ಕಳಿಸಲಾಗಿದೆ. ಬದಲಾದ ಈ ಸಂದರ್ಭದಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಸಾಲ ನೀಡುವುದನ್ನು ಕಡಿಮೆ ಮಾಡಿವೆ. ಕಳೆದ ಎರಡು ವರ್ಷಗಳಲ್ಲಿ ಮನೆಗಳ- ಫ್ಲ್ಯಾಟ್ ಗಳ ಮಾರಾಟ 11% ಇಳಿದಿದ್ದು, ಮಾರಾಟ 5%ಗೆ ಸೀಮಿತವಾಗಿದೆಯಂತೆ. ದೇಶದ 30 ನಗರಗಳಲ್ಲಿ 12.76 ಲಕ್ಷ ಮನೆಗಳು- ಫ್ಲ್ಯಾಟ್ ಗಳು ಮಾರಾಟವಾಗದೇ ಉಳಿದಿವೆಯಂತೆ. ಇವುಗಳಲ್ಲಿ ಕೆಳ ಮತ್ತು ಮದ್ಯಮ ವರ್ಗದವರು ಇಚ್ಛೆ ಪಡುವ ಮತ್ತು ಖರೀದಿಸಬಹುದಾದ, ಸರಾಸರಿ 45 ಲಕ್ಷ ಬೆಲೆಯ 4.50 ಲಕ್ಷ ಮನೆ- ಫ್ಲ್ಯಾಟ್ ಗಳು ಖರೀದಿಯಾಗದೇ ಉಳಿದುಹೋಗಿವೆಯಂತೆ. ಮಾರಾಟವಾಗದೇ ಉಳಿದ ಮನೆಗಳ ಬೆಲೆ, ಸುಮಾರು 1.40 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗುತ್ತಿದೆ.

Advertisement

ಕೇಂದ್ರದಿಂದ ಸಹಾಯ
ವಸತಿ ವಲಯ ಹಳ್ಳ ಹಿಡಿದಿದ್ದನ್ನು ನೋಡಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ವ್ಯಾಪಾರೋದ್ಯಮ ಸಂಘಗಳು ಕಳೆದ ಎರಡು ವರ್ಷದಿಂದ ಸರ್ಕಾರದ ಮೇಲೆ ನೆರವಿಗೆ ಒತ್ತಡಹಾಕುತ್ತಿವೆ. ಸರ್ಕಾರವು ವಸತಿ ವಲಯವನ್ನು ಪುನಶ್ಚೇತನಗೊಳಿಸಿ ಮತ್ತು ತನ್ಮೂಲಕ ಅರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ವಸತಿ ವಲಯಕ್ಕೆ 25,000 ಕೋಟಿಗಳ ಪ್ಯಾಕೇಜ್‌ ಘೋಷಿಸಿದೆ. ಇದರಿಂದ 1600 ಪ್ರಾಜೆಕ್ಟ್ ಗಳಲ್ಲಿರುವ positive
networth ಇರುವ 4.60 ಲಕ್ಷ ಮನೆ- ಫ್ಲ್ಯಾಟ್ ಗಳಿಗೆ Defaulter ಎಂದು ವರ್ಗೀಕರಿಸಲ್ಪಟ್ಟರೂ ಈ ಪ್ಯಾಕೇಜ್‌ ಸಹಾಯ ಹಸ್ತ ನೀಡುವಂತೆ ರೂಪಿಸಲಾಗಿದೆ. 1600 ಪ್ರಾಜೆಕ್ಟ್ಗಳಲ್ಲಿ ಸುಮಾರು 90% ಪ್ರಾಜೆಕ್ಟ್ ಗಳು  ಮದ್ಯಮ ಆದಾಯದ ಮತ್ತು ಖರೀದಿಸಲು ಸಾಧ್ಯವಿದ್ದವರಿಗೆ ಸೇರಿದ್ದು ಎಂಬುದು ಒಂದು ವಿಶೇಷ. ಈ ಪ್ಯಾಕೇಜ್‌ಗೆ ಕೇಂದ್ರ ಸರ್ಕಾರವು 10,000 ಕೋಟಿ ನೀಡಿದರೆ, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಭಾರತೀಯ ಜೀವ ವಿಮಾ ನಿಗಮ ಕೆಲವು ಹಣಕಾಸು ಸಂಸ್ಥೆಗಳು ಮತ್ತು ಸಾಗರೋತ್ತರ ಸಂಸ್ಥೆಗಳು ಉಳಿದ 15,000 ಕೋಟಿ ಹಣವನ್ನು ನೀಡುತ್ತಿವೆ. ಈ ಮೊದಲ ಪ್ಯಾಕೇಜ್‌ನಲ್ಲಿ ನಿಂತು ಹೋದ ಪ್ರಾಜೆಕ್ಟ್ ಗಳನ್ನು ಪೂರ್ತಿಗೊಳಿಸಲು 20,000 ಕೋಟಿ ನೀಡಲಾಗಿತ್ತು ಮತ್ತು Nಕಅ ಆದ , NCLTಗೆ ರೆಫೆರ್‌ ಆದ ಪ್ರಕರಣಗಳನ್ನು ಇದರ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು.

ಈ ಪ್ಯಾಕೆಜ್‌ಗೆ ಯಾರು ಅರ್ಹರು?
ಪ್ರಾಜೆಕ್ಟ್ ಗಳು financially viable ಇದ್ದು, ನಿರೀಕ್ಷಿತ ಅದಾಯವು, ಪ್ರಾಜೆಕ್ಟನ್ನು ಪೂರ್ತಿಗೊಳಿಸುವ ವೆಚ್ಚಕ್ಕಿಂತ ಹೆಚ್ಚಾಗಿರಬೇಕು. ಬ್ಯಾಂಕುಗಳಿಂದ Non Performing Asset ಎಂದು ವರ್ಗೀಕರಿಸಲ್ಪಟ್ಟ, National Company Law
Tribunal Insovency Resolutionಗೆ ರೆಫೆರ್‌ ಅದ ಪ್ರಕರಣಗಳೂ ಸೇರಿ ಎಲ್ಲಾ ಪ್ರಾಜೆಕ್ಟ್ ಗಳೂ ಇದರಿಂದ ಸಹಾಯ ಪಡೆಯಬಹುದು. ಈ ಪ್ಯಾಕೇಜ್‌ ಅಡಿಯಲ್ಲಿ ನೆರವು ಪಡೆಯಲು ಅಪಾರ್ಟ್‌ಮೆಂಟ್‌, ವಿಲ್ಲಾ ಮತ್ತು ಫ್ಲ್ಯಾಟ್ ಗಳ ಕಾಪೆìಟ್‌ ಏರಿಯಾ 200 ಮೀಟರ್‌ ಅಥವಾ 2150 ಚ. ಅಡಿ ಮೀರಬಾರದು. ಕೆಳ ಮತ್ತು ಮಧ್ಯಮ ವರ್ಗದ ಖರೀದಿದಾರರನ್ನು ಗುರಿಯಾಗಿರಿಸಿ ಈ ಮಿತಿಯನ್ನು ಹೇರಲಾಗಿದೆ. ಕಾಪೆìಟ್‌ ಏರಿಯಾದಲ್ಲಿ ಬಾಲ್ಕನಿ, ಸರ್ವೀಸ್‌ ಶಾಫ್ಟ್ ಮತ್ತು ಹೊರಗೋಡೆಗಳು ಇರುವುದಿಲ್ಲ. ಯಾವುದೇ ಒಂದು ಪ್ರಾಜೆಕ್ಟ್  400 ಕೋಟಿ ಮೀರಿ exposure ಆಗಬಾರದು. ಖರೀದಿದಾರರು ಪ್ರಾಜೆಕ್ಟನ್ನು ಬೇಗ ಮುಗಿಸಲು ಬಾಕಿ ಉಳಿದ ಕಂತುಗಳನ್ನು ಪಾವತಿಸಬೇಕು.

ರೇರಾದಲ್ಲಿ ನೊಂದಣಿಯಾದ ಮತ್ತು ಸದ್ಯ ನಡೆಯುತ್ತಿರುವ ಎಲ್ಲಾ ಪ್ರಕರಣಗಳೂ ಇದರ ವ್ಯಾಪ್ತಿಗೆ ಬರುತ್ತವೆ. ಪ್ರಾಜೆಕ್ಟ್ ಗಳಿಗೆ ಸಾಲ ನೀಡಿದ ಬ್ಯಾಂಕುಗಳು ತಾವು ಸಾಲ ನೀಡಿದ ಪ್ರಕರಣಗಳನ್ನು ನೆರವಿಗಾಗಿ ರೆಫೆರ್‌ ಮಾಡಬಹುದು. ಲಿಕ್ವಿಡೇಷನ್‌ ಎದುರಿಸುತ್ತಿರುವ ಪ್ರಕರಣಗಳು ಇದರ ವ್ಯಾಪ್ತಿಗೆ ಬರುವುದಿಲ್ಲ. ಹೂಡಿಕೆ ಮ್ಯಾನೇಜರ್‌ ಬಿಲ್ಡರ್‌ಅನ್ನು ಬದಲಿಸಲು ಕೇಳಬಹುದು. ಒಂದು ನಿರ್ದಿಷ್ಟ ನಗರದಲ್ಲಿ ಈ ಪ್ಯಾಕೇಜ್‌ಗೆ ಸೇರಿಸಬಹುದಾದ ಪ್ರಾಜೆಕ್ಟ್ ಗಳ ಸಂಖ್ಯೆಯ ಮೇಲೆ ಮತ್ತು ಡೆವೆಲಪರ್‌ ಮೇಲೆ ಮಿತಿ ಇರುತ್ತದೆ. ರೇರಾದಲ್ಲಿ ನೋಂದಣಿಯಾಗದವರಿಗೆ ಈ ಪ್ಯಾಕೇಜ್‌ ಅನ್ವಯವಾಗುವುದಿಲ್ಲ.

ಮನೆಯ ವಿಸ್ತೀರ್ಣ ಎಷ್ಟಿರಬೇಕು?
ಈ ಪ್ಯಾಕೇಜ್‌ನ ವ್ಯಾಪ್ತಿಗೆ ಬರಲು ಮುಂಬೈ ನಗರದಲ್ಲಿ ಮನೆ ಫ್ಲ್ಯಾಟ್ ಗಳ ವೆಚ್ಚ 2 ಕೋಟಿ ಮೀರಬಾರದು. ದೆಹಲಿ, ಎನ್‌.ಸಿ ಆರ್‌, ಕೋಲ್ಕತ್ತಾ, ಚೆನ್ನೈ, ಹೈದ್ರಾಬಾದ್‌, ಪುಣೆಗಳಲ್ಲಿ ಇದು 1.50 ಕೋಟಿ ಮೀರಬಾರದು ಮತ್ತು ಉಳಿದ ನಗರಗಳಲ್ಲಿ ಗರಿಷ್ಟ ಮಿತಿ 1 ಕೋಟಿಗಳು ಮಾತ್ರ. ಈ ಬೆಲೆ ಮಿತಿಯಲ್ಲಿ ಕ್ಲಬ್‌, ಪಾರ್ಕಿಂಗ್‌ ಶುಲ್ಕ ಸೇರಿರಬಾರದು

Advertisement

ಪ್ಯಾಕೇಜ್‌ ಹೇಗೆ ಕೆಲಸ ಮಾಡುತ್ತದೆ?
ಸ್ಟೇಟ್‌ ಬ್ಯಾಂಕ್‌ನ SBI CAP Debt Alternate Investment Fund, ಹುಟ್ಟು ಹಾಕುತ್ತಿದ್ದು, ಹೂಡಿಕೆ ನಿಯಮಾವಳಿ ಆಧಾರದ ಮೇಲೆ ಫ‌ಂಡ್ಸ್‌ಗಳನ್ನು ಕಮರ್ಷಿಲ್‌ಲೈನ್‌ ಮೇಲೆ ಬಿಡುಗಡೆ ಮಾಡಲಾಗುವುದು. ಅಂತಿಮ ನಿರ್ಣಯವು ಹೂಡಿಕೆ ಸಮಿತಿಯ ಮೇಲೆ ಇರುತ್ತದೆ. ಪ್ರಾಜೆಕ್ಟ್‌ನ viability ಯನ್ನು ನೋಡಿ ವ್ಯಾವಹರಿಕ ಒಪ್ಪಂದ ನಿಯಮದ ಅನುಸಾರವಾಗಿಮೇಲೆ ಸಾಲವನ್ನು ನೀಡಲಾಗುತ್ತದೆ. ಈ ಪ್ಯಾಕೇಜ್‌, Advising Panel ಮತ್ತು Governing Council ನಿರ್ದೇಶನದಂತೆ ನಡೆಯುತ್ತದೆ. ಈ ಪ್ಯಾಕೇಜ್‌ನಲ್ಲಿ ನಿಂತು ಹೋದ ಪ್ರಾಜೆಕ್ಟ್ಗಳಿಗೆ ಮತ್ತು ಸಾಮರ್ಥ್ಯ ಇರುವ ಮದ್ಯಮ ಮತ್ತು ಕೆಳ ಅದಾಯದವರಿಗೆ ಅದ್ಯತೆ ನೀಡಲಾಗುತ್ತದೆ

-ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next