ಕುಣಿಗಲ್: ನಿಡಸಾಲೆ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಇಲ್ಲದೆ, ಗುಡಿಸಲಲ್ಲಿ ವಾಸವಿದ್ದು, ಪ್ರತಿ ನಿತ್ಯ ವಿಷ ಜಂತುಗಳ ಭಯದಲ್ಲಿ ನರಕಯಾತನೆ ಪಡುತ್ತಿದ್ದ ದಲಿತ ವಿಧವೆ ವೃದ್ಧೆಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಸ್ವಂತ ಹಣದಿಂದ ಸೂರು ಕಲ್ಪಿಸಲು ಮುಂದಾಗಿದ್ದು, ಭಾನುವಾರ ಭೂಮಿಪೂಜೆ ನೆರವೇರಿಸಿದ್ದಾರೆ.
ಮನವಿಗೆ ಬೆಲೆಯಿಲ್ಲ: ಗ್ರಾಪಂ ಹಾಗೂ ತಾಲೂಕು ಆಡಳಿತಕ್ಕೆ ಹಲವು ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ನೊಂದ ಮಂಚಮ್ಮ ನಿಡಸಾಲೆ ಗ್ರಾಮ ತೊರೆದು ಕಾಮೆದೊಡ್ಡಿ ಜಮೀನಿನಲ್ಲಿ ಗುಡಿಸಲು ಹಾಕಿ ವಾಸವಾಗಿದ್ದಾರೆ. ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಅದರಿಂದ ಬರುವ ಹಣ ಹಾಗೂ ವೃದ್ಧಾಪ್ಯ ವೇತನ ಬಳಸಿ ಜೀವನ ಸಾಗಿಸುತ್ತಿದ್ದಾರೆ. ವಿದ್ಯುತ್ ದೀಪ ಇರುವುದಿಲ್ಲ. ಕುಡಿಯುವ ನೀರಿಗಾಗಿ ಬಹುದೂರ ಹೋಗಿ ತರುವ ಪರಿಸ್ಥಿತಿ ಇದೆ.
Advertisement
ಗುಡಿಸಲು ವಾಸಿ: ತಾಲೂಕಿನ ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಗ್ರಾಪಂ ವ್ಯಾಪ್ತಿಯ ಕಾಮೆದೊಡ್ಡಿ ಗ್ರಾಮದ ವೃದ್ಧೆ ಮಂಚಮ್ಮನಿಗೆ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇವರಲ್ಲಿ ಒಬ್ಬ ಬುದ್ಧಿಮಾಂಧ್ಯ ಮಗಳು ಈಕೆ ಜೊತೆಯಲ್ಲೇ ವಾಸವಾಗಿದ್ದಾಳೆ. 35 ವರ್ಷದ ಹಿಂದೆ ಪತಿ ಸಿದ್ದಯ್ಯ ತೀರಿಕೊಂಡಿದ್ದಾರೆ. ಗ್ರಾಮದಲ್ಲಿ ಅಲ್ಪ ಸ್ವಲ್ಪ ಜಮೀನು ಇದೆ. ಆದರೆ ಈ ಜಮೀನು ಇನ್ನು ಸಹಾ ಮಂಚಮ್ಮನ ಹೆಸರಿಗೆ ಬಂದಿಲ್ಲ. 15 ವರ್ಷದ ಹಿಂದೆ ಮಕ್ಕಳೊಂದಿಗೆ ಬೆಂಗಳೂರಿನ ಅವರಿವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು. ವಯಸ್ಸಾದ ಬಳಿಕ ಕಾರಣ ಆಕೆಗೆ ಯಾರು ಕೆಲಸ ಕೊಡಲು ಮುಂದಾಗಲಿಲ್ಲ, ಇದರಿಂದ ನೊಂದ ಮಂಚಮ್ಮ ಕಳೆದ 15 ವರ್ಷದ ಹಿಂದೆ ತನ್ನ ಗ್ರಾಮಕ್ಕೆ ಹಿಂದಿರುಗಿ ಬಂದು ನಿಡಸಾಲೆಯಲ್ಲಿ ಗುಡಿಸಲು ಕಟ್ಟಿಕೊಂಡು ಮಕ್ಕಳೊಂದಿಗೆ ವಾಸವಾಗಿದ್ದಳು.
Related Articles
Advertisement
ಶಾಸಕರ ನೆರವು: ಊರಿನ ಯುವಕರಿಂದ ಮಂಚಮ್ಮ ಪರಿಸ್ಥಿತಿ ತಿಳಿದ ಶಾಸಕ ಡಾ.ರಂಗನಾಥ್ ಗ್ರಾಮಕ್ಕೆ ಭೇಟಿ ನೀಡಿ ಸರ್ಕಾರದಿಂದ ಮನೆ ಮಂಜೂರು ಮಾಡಲು ದಾಖಲೆ ಪರಿಶೀಲಿಸಿದರು. ಆದರೆ ಮಂಚಮ್ಮ ವಾಸವಾಗಿರುವ ಜಮೀನು ಆಕೆಯ ಹೆಸರಿನಲ್ಲಿ ಇಲ್ಲದಿರುವುದರಿಂದ ಕಾನೂನು ತೊಡಕಾಗುತಿತ್ತು. ಹಾಗಾಗಿ ಶಾಸಕರು ಸ್ವಂತ ಹಣದಿಂದ ಮನೆ ನಿರ್ಮಿಸಿ ಕೊಡಲು ಭರವಸೆ ನೀಡಿ ಬಂದಿದ್ದರು.
ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ. ಎಚ್.ಡಿ.ರಂಗನಾಥ್ ಮಾತನಾಡಿ, ಫಲಾನುಭವಿಗಳ ಹೆಸರಿನಲ್ಲಿ ದಾಖಲೆಗಳು ಇಲ್ಲದೆ ಸರ್ಕಾರದಿಂದ ಮನೆ ನಿರ್ಮಿಸಿಕೊಡಲು ತೊಡಕು ಉಂಟಾಗುತ್ತಿದೆ. ದಾಖಲೆ ಸರಿಪಡಿಸಿ ಫಲಾನುಭವಿಗಳ ಹೆಸರಿಗೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಗುಡಿಸಲಲ್ಲಿ ವಾಸವಾಗಿದ್ದ ವೃದ್ಧರಿಗೆ ಸ್ವಂತ ಹಣದಿಂದ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡಲು ಸಂಸದ ಡಿ.ಕೆ.ಸುರೇಶ್ ಹಾಗೂ ನಾನು ತೀರ್ಮಾನಿಸಿದ್ದೇವೆ. ಮಂಚಮ್ಮ ಅವರಿಗೆ ಎರಡು ತಿಂಗಳ ಒಳಗಾಗಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.
ಗುಡಿಸಲು ಮುಕ್ತ ತಾಲೂಕು: