Advertisement
ಬಿಜೆಪಿ ವತಿಯಿಂದ ಸೋಮವಾರ ನಗರದ ಜಸ್ಮಾದೇವಿ ಭವನದಲ್ಲಿ ಹಮ್ಮಿಕೊಂಡಿದ್ದ ಆಟೋ ಚಾಲಕರೊಂದಿಗಿನ ಸಂವಾದಕ್ಕೆ ಡಾಲರ್ ಕಾಲೋನಿಯಲ್ಲಿರುವ ತಮ್ಮ ನಿವಾಸದಿಂದ ಆಟೋದಲ್ಲೇ ಆಗಮಿಸಿದ ಅವರು ಆಟೋ ಚಾಲಕರ ಸಮಸ್ಯೆಗಳನ್ನು ಆಲಿಸಿದರು.
Related Articles
Advertisement
ಸಂಸದ ಪಿ.ಸಿ.ಮೋಹನ್ ಮಾತನಾಡಿ, ರಾಜ್ಯ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷದಲ್ಲಿ ದಲಿತರ ಕೇರಿಗೆ ಹೋಗಿಲ್ಲ. ಆಟೋ ಚಾಲಕರನ್ನು ಮಾತನಾಡಿಸಿಲ್ಲ. ಯಾವ ವ್ಯವಸ್ಥೆಯನ್ನು ಸರಿಪಡಿಸಿಲ್ಲ ಎಂದು ದೂರಿದರು.
ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಕಳೆದ ಐದು ವರ್ಷದಲ್ಲಿ ಶಿವಾಜಿನಗರ ಏನೂ ಅಭಿವೃದ್ಧಿಯಾಗಿಲ್ಲ. ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಗಿತ ಮಾಡಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು.
ಇನ್ನು ಮೂರ್‍ನಾಲ್ಕು ದಿನದೊಳಗೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುತ್ತದೆ. ಆ ಪ್ರಣಾಳಿಕೆಯಲ್ಲಿ ಆಟೋ ಚಾಲಕರ ಸಮಸ್ಯೆಗೆ ಪರಿಹಾರವನ್ನು ಸೂಚಿಸಲಾಗುವುದು . ಸರ್ಕಾರ ಬಂದ ನಂತರ ಅದನ್ನು ಅನುಷ್ಠಾನಕ್ಕೂ ತರಲಿದ್ದೇವೆ. ರಿಕ್ಷಾ ಖರೀದಿಸಲು ಬ್ಯಾಂಕ್ ಸಾಲ , ವಿಮೆ ಶುಲ್ಕ ಕಡಿಮೆ ಮಾಡುವ ಸಂಬಂಧ ಪರಿಶೀಲಿಸಲಾಗುವುದು.-ಬಿ.ಎಸ್.ಯಡಿಯೂರಪ್ಪ ಆಟೋಗಳಿಗೆ ಪ್ರತಿವರ್ಷ 8,500 ರೂ. ಇನ್ಸೂರೆನ್ಸ್ ಪಾವತಿಸಬೇಕು. ಇದು ತುಂಬಾ ದುಬಾರಿಯಾಗುತ್ತಿದೆ. ಇನ್ಸೂರೆನ್ಸ್ ಹಣವನ್ನು ಕಡಿಮೆ ಮಾಡಬೇಕು.
-ನಾಗರಾಜ, ಆಟೋ ಚಾಲಕ ಆಟೋ ಚಾಲಕರಲ್ಲಿ ಬಾಂಗ್ಲ ವಲಸಿಗರೇ ಹೆಚ್ಚಿದ್ದಾರೆ. ಅವರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿಕೊಡಲಾಗಿದೆ. ಇದರಿಂದ ಸ್ಥಳೀಯ ಆಟೋ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು.
-ಬಾಲಕೃಷ್ಣ, ಆಟೋ ಚಾಲಕ ಓಲಾ, ಉಬಾರ್ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಟೋ ಚಾಲಕರು ಪರದಾಡುವಂತಾಗಿದೆ. ಅಂತಹ ಟ್ಯಾಕ್ಸಿಗಳಿಗೆ ಕಡಿವಾಣ ಹಾಕಬೇಕು.
-ಅಣ್ಣಾದೊರೆ, ಆಟೋ ಚಾಲಕ ಆಟೋ ಚಾಲಕರು ಹಗಲು ಇರುಳು ಎನ್ನದೇ ದುಡಿಯುತ್ತಾರೆ. ಆದರೆ, ಅವರಿಗೆ ಸ್ವಂತ ಮನೆ ಇರುವುದಿಲ್ಲ. ಬಹುತೇಕರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಹೀಗಾಗಿ ಆಟೋ ಚಾಲಕರಿಗೆ ವಸತಿ ನಿರ್ಮಾಣ ಮಾಡಿಕೊಡಬೇಕು.
-ದೊಡ್ಡಯ್ಯ, ಆಟೋ ಚಾಲಕ