Advertisement

ಗೃಹಿಣಿ ನೇಣಿಗೆ ಶರಣು: ವರದಕ್ಷಿಣೆ ಕಿರುಕುಳ ಆರೋಪ

03:08 PM May 17, 2019 | pallavi |

ಕೆಜಿಎಫ್: ಮದುವೆಯಾಗಿ 3 ವರ್ಷ ಗಳಲ್ಲಿಯೇ ಗಂಡನ ಮನೆಯಲ್ಲಿ ನೀಡು ತ್ತಿದ್ದ ವರದಕ್ಷಿಣ ಕಾಟ ತಾಳಲಾರದೆ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೂರಮಾಕನ ಹಳ್ಳಿಯಲ್ಲಿ ಬುಧವಾರ ನಡೆದಿದೆ.

Advertisement

ನಂದಿನಿ ಬಾಯಿ (26) ಮೃತ ಪಟ್ಟಿರುವ ದುರ್ದೈವಿ. ತಟ್ಟನಹಳ್ಳಿ ಗ್ರಾಮದ ನಿವಾಸಿ ಏಕಾಂಬರ್‌ ಸಿಂಗ್‌ ಎಂಬುವರೊಂದಿಗೆ ಕಳೆದ 2 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆ ಯಾಗಿ 15 ಲಕ್ಷ ರೂ., ಮೌಲ್ಯದ ಚಿನ್ನದ ಒಡವೆ, 5 ಲಕ್ಷ ರೂ.,ನಗದು ಮತ್ತು ಗೃಹೋಪಯೋಗಿ ವಸ್ತುಗಳು ನೀಡ ಲಾಗಿತ್ತು. ಮದುವೆಯನ್ನು ಬಂಗಾರ ಪೇಟೆ ವಿಬಿಆರ್‌ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ಮಾಡಲಾಗಿತ್ತು.

ಮದುವೆಯಾದ ಆರಂಭದಲ್ಲಿ ಗಂಡ ಹೆಂಡತಿ ಬೆಂಗಳೂರಿನ ಪೀಣ್ಯ 2ನೇ ಹಂತದಲ್ಲಿ ಮನೆ ಮಾಡಿಕೊಂಡು ಸಂಸಾರ ನಡೆಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚೆಗೆ ಗಂಡ ಏಕಾಂಬರ್‌ ಪತ್ನಿ ನಂದಿನಿ ಬಳಿ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕಿರುಕುಳ ತಾಳಲಾರದೆ ನಂದಿನಿ ತಾಲೂಕಿನ ಬೂರಮಾಕನಹಳ್ಳಿ ಗ್ರಾಮದ ತವರು ಮನೆಗೆ ಹೋಗಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ನಮ್ಮ ಮಗಳ ಸಾವಿಗೆ ಅಳಿಯ ಏಕಾಂಬರ್‌ರ ತಾಯಿ ಚಿನ್ನಮ್ಮ, ತಂದೆ ಅನಂತರಾಂ ಸಿಂಗ್‌, ಭಾವ ಹನುಮಾನ್‌ ಸಿಂಗ್‌, ನಾದಿನಿಯರಾದ ಗೀತಾಬಾಯಿ, ಸರಸ್ವತಿ ಬಾಯಿ, ಪಾರ್ವತಿ ಬಾಯಿ ಕಾರಣ ಎಂದು ಮೃತ ನಂದಿನಿ ತಂದೆ ಕನಕಸಿಂಗ್‌ ಬೆಮೆಲ್ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಮೆಲ್ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next