Advertisement
ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪ್ರಸ್ತುತ ತಾಲೂಕಿನ ಗ್ರಾಮಿಣ ಪ್ರದೇಶಗಳಲ್ಲಿ ಬಿರುಗಾಳಿ ಸಮೇತ ಬಿದ್ದ ಮಳೆಯಿಂದ ಸಾಕಷ್ಟು ನಷ್ಟಕ್ಕೆ ಕಾರಣ ವಾಗಿದೆ ಎಂದರು.
Related Articles
Advertisement
ಮಳೆಯಿಂದ ಮನೆಗಳಿಗೆ ಹಾನಿ: ಈಗಾಗಲೇ ತಾಲೂಕಿನ ಗ್ರಾಮಿಣ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಬಿರುಗಾಳಿ ಸಮೇತ ಬಿದ್ದ ಮಳೆಯಿಂದ ತಾಲೂಕಿನ ಅತ್ತಿಚೌಡೇನಹಳ್ಳಿ ಗ್ರಾಮದ ಸುಬ್ಬೇಗೌಡ, ಅವರಿಗೆ ಸೇರಿದ ವಾಸದ ಮನೆ ಬಿರುಗಾಳಿಯಿಂದ ನೆಲಕಚ್ಚಿದೆ, ಶಿಗರನಹಳ್ಳಿ ಗ್ರಾಮದ ಶಾರದಮ್ಮ ಅವರಿಗೆ ಸೇರಿದ 15 ಸಾವಿರ ಬಾಳೆಗಿಡಗಳಲ್ಲಿ ಶೇ. 40 ಕ್ಕೂ ಹೆಚ್ಚು ಗಿಡಗಳು ನೆಲಕಚ್ಚಿವೆ. ಶಿಗರನಹಳ್ಳೀ ರಾಮೇಗೌಡ ಅವರ ಮನೆ ನೆಲಕಚ್ಚಿದೆ. ಕಾಮ ಸಮುದ್ರದ ಶಿವಣ್ಣ ಅವರಿಗೆ ಸೇರಿದ ಮನೆಗೆ ಅಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ಆಹಾರ ಪದಾರ್ಥಗಳು ಸೇರಿದಂತೆ ಸಾಕಷ್ಟು ಸುಟ್ಟುಕರಕಲಾಗಿದೆ.
ಅದೇ ರೀತಿ ಮಲ್ಲಪ್ಪನಹಳ್ಳಿ ಗ್ರಾಮ ವೃತ್ತಕ್ಕೆ ಸೇರಿದ ಕೃಷ್ಣಾಪುರ, ಸಂಕನಹಳ್ಳೀ, ಪಟ್ಟಣದ ಮಹದೇವಮ್ಮ, ಗಿರೀಶ್, ಬಂಡಿಶೆಟ್ಟಿಹಳ್ಳಿಯ ಯೋಗಣ್ಣ, ಗನ್ನಿಕಟ ಹುಲಿವಾಲ ಕಂಬೇಗೌಡ ಅವರಿಗೆ ಸೇರಿದ ಚಾವಣಿ ಸೇರಿದಂತೆ ಸಾಕಷ್ಟು ನಷ್ಟವಾಗಿದೆ. ಇದೇ ರೀತಿ ತಾಲೂಕಿನ ಹಾವಿನ ಮಾರನಹಳ್ಳಿ ಗ್ರಾಮದ ಕಮಲಮ್ಮ, ಬೋರೇ ಗೌಡ, ಶಾಂತಮ್ಮ ಹಾಗೂ ಕಾಳೇಗೌಡರಿಗೆ ಸೇರಿದ ಮನೆಗಳ ಹೆಂಚುಗಳು ಬಿರುಗಾಳಿಗೆ ತೂರಿ ಹೋಗಿ ಸಾಕಷ್ಟು ನಷ್ಟಕ್ಕೆ ಕಾರಣವಾಗಿದೆ.
ಈ ಬಗ್ಗೆ ತಾಲೂಕು ಆಡಳಿತ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ನೀಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿ ಸರ್ಕಾರ ನೀಡಿರು ಸುತ್ತೋಲೆ ಪ್ರಕಾರ ನಷ್ಟಕ್ಕೆ ಒಳಗಾಗಿರುವವರಿಗೆ ಸರ್ಕಾರದಿಂದ ಹಣ ಪಾವತಿಸಲು ಕ್ರಮಕೈಗೊಳ್ಳ ಲಾಗುವುದೆಂದು ತಿಳಿಸಿದರು.
ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ತುರ್ತು ಸಭೇಯಲ್ಲಿ ತಾಪಂ ಇಒ ಕೆ.ಯೋಗೇಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿ ಮಹೇಶ್, ಜಿಪಂ ಎಂಜಿನಿಯರ್ ಪ್ರಭು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.