Advertisement
ಜಿಲ್ಲೆಯ 155 ಗ್ರಾಮಗಳ 2.41 ಲಕ್ಷ ಮನೆಗಳನ್ನು ಸಂಪರ್ಕಿಸಿ, ನೈರ್ಮಲ್ಯ ಸ್ಥಿತಿಯ ಬಗ್ಗೆ ಸಮಗ್ರ ವರದಿ ಪಡೆಯ ಲಾಗುತ್ತಿದೆ. ಅದಕ್ಕಾಗಿ ಪ್ರತೀ 1 ಸಾವಿರ ಜನಸಂಖ್ಯೆಗೆ ನಾಲ್ವರು ಗಣತಿದಾರರಂತೆ ಒಟ್ಟು 800 ಮಂದಿಯನ್ನು ನಿಯೋಜಿಸಲಾಗಿದೆ. ಅ. 2ರಂದು ಗಣತಿ ಪ್ರಾರಂಭವಾಗಿದ್ದು, ಅ. 12ಕ್ಕೆ ಮುಕ್ತಾಯಗೊಳಿಸುವ ಗುರಿ ಇದೆ.
ಗಣತಿಯಲ್ಲಿ ಕುಟುಂಬಗಳ ಶೌಚಾಲಯ ಬಳಕೆ, ವಿಲೇವಾರಿ ವಿಧಾನ, ತ್ಯಾಜ್ಯ ವಿಂಗಡಣೆ- ವಿಲೇವಾರಿ ವಿಧಾನ, ದ್ರವತ್ಯಾಜ್ಯ ನಿರ್ವಹಣೆ ವಿಧಾನ ಸಹಿತ ಪ್ರಮುಖ ಮಾಹಿತಿ ಸಂಗ್ರಹಿಸಲಾಗುತ್ತದೆ. ಅರಿವು ಕಾರ್ಯಕ್ರಮ
ನೈರ್ಮಲ್ಯ ಗಣತಿಯೊಂದಿಗೆ ಕುಟುಂಬಗಳಿಗೆ ನೈರ್ಮಲ್ಯದ ಬಗ್ಗೆ ಮಾಹಿತಿ, ಅವಳಿ ಗುಂಡಿ ಶೌಚಾ ಲಯದ ಮಹತ್ವ, ಮ್ಯಾನುವಲ್
ಸ್ಕ್ಯಾವೆಂಜರ್ ನಿಷೇಧ ಕಾಯಿದೆ, ಹಸಿ ತ್ಯಾಜ್ಯ ನಿರ್ವಹಣೆ ವಿಧಾನ, ಒಣತ್ಯಾಜ್ಯ ನಿರ್ವಹಣೆ, ಋತುಚಕ್ರ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣೆ ಅಗತ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
Related Articles
ನರೇಗಾದಡಿ ಮನೆಯಲ್ಲಿ ಉತ್ಪತ್ತಿ ಯಾಗುವ ಅಶುದ್ಧ ನೀರಿನ ನಿರ್ವಹಣೆಗೆ ಬಚ್ಚಲು ಗುಂಡಿ ನಿರ್ಮಾಣ, ಹಸಿತ್ಯಾಜ್ಯ ನಿರ್ವಹಣೆಗೆ ಪೌಷ್ಟಿಕ ತೋಟ ನಿರ್ಮಾಣ, ಎರೆಹುಳು ಘಟಕ, ಗೊಬ್ಬರ ಗುಂಡಿ ನಿರ್ಮಾಣ, “ಮನೆ ಮನೆಗೆ ಗಂಗೆ’ ಯೋಜನೆ ಯಡಿ ಶುದ್ಧ ಕುಡಿಯುವ ನೀರು ಒದಗಿಸುವ ಕುರಿತು ಮಾಹಿತಿ ನೀಡಲಾಗುತ್ತದೆ. ನೀರಿನ ಸಂಪರ್ಕವಿಲ್ಲದ ಮನೆಗಳ ಮಾಹಿತಿ ಸಂಗ್ರಹಿಸಿ ಸಂಪರ್ಕ ಒದಗಿಸಲು ನೆರವು ನೀಡಲಾಗುತ್ತದೆ.
Advertisement
ಇದನ್ನೂ ಓದಿ:ವಾಹನ ನೋಂದಣಿ ನವೀಕರಣಕ್ಕೆ 8 ಪಟ್ಟು ಹೆಚ್ಚು ಶುಲ್ಕ
ಗಣತಿ ಸಮಯದಲ್ಲಿ ಜನರಿಗೆ ನೀಡುವ ಕೈಪಿಡಿಯಲ್ಲಿ ಕ್ಯುಆರ್ ಕೋಡ್ ಅಳವಡಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿ ನೈರ್ಮಲ್ಯ ಸಂಬಂಧಿ 5 ವೀಡಿಯೋಗಳನ್ನು ವೀಕ್ಷಿಸಬಹುದು.
ನೈರ್ಮಲ್ಯ ಗಣತಿಯ ಮೂಲಕ ಜಿಲ್ಲೆಯ ಪ್ರತೀ ಮನೆಯಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರಿನ ಅಗತ್ಯ ಹಾಗೂ ಸಮಸ್ಯೆಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ. ಈ ಮಾಹಿತಿಯ ಆಧಾರದಲ್ಲಿ ಇಡೀ ಜಿಲ್ಲೆಗೆ ಸ್ವತ್ಛ ಕುಡಿಯುವ ನೀರು ಒದಗಿಸಲು ಮತ್ತು ಶುಚಿತ್ವದ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ಉಡುಪಿಯನ್ನು ಸಂಪೂರ್ಣ ನೈರ್ಮಲ್ಯ ಮತ್ತು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಸಾಧ್ಯ.– ಡಾ| ನವೀನ್ ಭಟ್, ಉಡುಪಿ ಜಿ.ಪಂ. ಸಿಇಒ