Advertisement

ಶ್ರೀನಗರ: ಉಗ್ರನ ಆಸ್ತಿ ಮುಟ್ಟುಗೋಲು

07:30 PM Mar 03, 2023 | Team Udayavani |

ಶ್ರೀನಗರ: ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ಪಾಕಿಸ್ತಾನ ಮೂಲದ ಹಾಗೂ ಪ್ರೇರಿತ ಉಗ್ರರನ್ನು ಮಟ್ಟಹಾಕುವ ಕಾರ್ಯಾಚರಣೆ ಭಾಗವಾಗಿ, ದಿ ರೆಸಿಸ್ಟೆಂಟ್‌ ಫ್ರಂಟ್‌ (ಟಿಆರ್‌ಎಫ್) ಕಾರ್ಯಕರ್ತ ಅಹ್ಮದ್‌ ರೆಶಿ ಒಡೆತನದ ಆಸ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಜಪ್ತಿ ಮಾಡಿದೆ.

Advertisement

ಅಲ್‌-ಉಮರ್‌-ಮುಜಾಹಿದೀನ್‌ ಉಗ್ರ ಸಂಘಟನೆಯ ಕಮಾಂಡರ್‌ ಮುಶಾಕ್‌ ಝಗರ್‌ನ ಶ್ರೀನಗರದಲ್ಲಿನ ಆಸ್ತಿ ಮುಟ್ಟುಗೋಲು ಕ್ರಮದ ಬೆನ್ನಲ್ಲೇ, ಎನ್‌ಐಎ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಉಗ್ರಗಾಮಿ ಎಂದು ಪಟ್ಟಿ ಮಾಡಲಾಗಿರುವ ರಶೀದ್‌, ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಪಾಕಿಸ್ತಾನದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದನೆಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next