Advertisement

ನಗರಸಭಾ ಸದಸ್ಯರಿಂದ ದ್ವಿಚಕ್ರ ವಾಹನದಲ್ಲಿ ಮನೆ ಮನೆಗೆ ನೀರು

11:42 PM May 31, 2019 | Team Udayavani |

ಮಲ್ಪೆ: ನಗರಸಭಾ ವ್ಯಾಪ್ತಿಯ ಕಲ್ಮಾಡಿ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು. ಇಲ್ಲಿನ ವಾರ್ಡ್‌ ಸದಸ್ಯ ಸುಂದರ ಜೆ. ಕಲ್ಮಾಡಿ ಅವರು ತನ್ನ ದ್ವಿಚಕ್ರ ವಾಹನದಲ್ಲಿ 35ಲೀಟರಿನ ಕ್ಯಾನ್‌ನಲ್ಲಿ ಅತೀ ಅಗತ್ಯ ಕಂಡವರಿಗೆ ಫೋನ್‌ ಮಾಡಿ ಕರೆಸಿಕೊಂಡವರಿಗೆ ನೀರು ಸರಾಬರಾಜು ಮಾಡುತ್ತಿದ್ದಾರೆ. ಆ ಮೂಲಕ ಕಲ್ಮಾಡಿ ವಾರ್ಡ್‌ ಜನರಿಂದ ಆಪದ್ಬಾಂಧವರೆನಿಕೊಂಡಿದ್ದಾರೆ.

Advertisement

ಕಲ್ಮಾಡಿ ವಾರ್ಡ್‌ನ ಬಹುಭಾಗ ಉಪ್ಪು ನೀರಿನ ಹೊಳೆಗಳಿಂದಾವೃತವಾದ ಪ್ರದೇಶ. ಇಲ್ಲಿ ವರ್ಷ ಪೂರ್ತಿ ನಗರಸಭೆಯ ನೀರನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದೀಗ ಬಜೆಯಲ್ಲೆ ನೀರಿಲ್ಲ. ಇಲ್ಲಿನ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಟ್ಯಾಂಕರ್‌ ಮೂಲಕ ಉಚಿತವಾಗಿ ನೀರು ಸರಬರಾಜು ಮಾಡುವ ಸಾಮರ್ಥ್ಯ ಇಲ್ಲದ್ದರಿಂದ ಯಾರ ನೆರವನ್ನೂ ಪಡೆಯದೆ ತನ್ನ ಸ್ವಂತ ವಾಹನದಲ್ಲಿ ನೀರು ಪೂರೈಸುತ್ತಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಎದುರಾದ ದಿನದಿಂದ ಪ್ರತಿನಿತ್ಯ ದೂರದ ಬಾವಿಯಿಂದ ನೀರನ್ನು ತನ್ನ ನಾಲ್ಕೈದು ಕ್ಯಾನಿನಲ್ಲಿ ಸಂಗ್ರಹಿಸಿ ತನ್ನ ಅಂಗಡಿಯಲ್ಲಿ ಇರಿಸಿಕೊಂಡಿರುತ್ತಾರೆ. ಪೋನ್‌ ಮೂಲಕ ಕರೆ ಮಾಡಿದವರಿಗೆ ನೀರಿನ ಕ್ಯಾನನ್ನು ತನ್ನ ಆ್ಯಕ್ಟಿವಾ ಹೋಂಡಾ ವಾಹನದಲ್ಲಿರಿಸಿಕೊಂಡು ವಾರ್ಡ್‌ನ ಅವಶ್ಯಕತೆ ಇರುವ ಮನೆಗಳಿಗೆ ಜಾತಿ ಮತ ಭೇದ ಮರೆತು ನೀರು ಸರಾಬರಾಜು ಮಾಡುತ್ತಿದ್ದಾರೆ. ಬೆಳಗ್ಗೆ 7ರಿಂದ ರಾತ್ರಿವರೆಗೂ ನೀರು ಪೂರೈಕೆ ಮಾಡಲಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನೆಲ್ಲಾ ಅವರೇ ಸ್ವತಃ ಭರಿಸುತ್ತಾರೆ. ಯಾರ ಸಹಾಯವನ್ನು ಪಡೆಯುತ್ತಿಲ್ಲ.


Advertisement

Udayavani is now on Telegram. Click here to join our channel and stay updated with the latest news.

Next