ಗಂಗೊಳ್ಳಿ: ಸ್ವಂತ ಸೂರಿಲ್ಲದೆ ವೃದ್ಧೆಯೊಬ್ಬರು ತೆರೆದ ಜಾಗದಲ್ಲಿ ಟಾರ್ಪಾಲ್‌ನಡಿ ಮಂಚವಿಟ್ಟು ಅದರಲ್ಲೇ ಜೀವನ ನಡೆಸುತ್ತಿದ್ದ ಸಂಗತಿ ಗಂಗೊಳ್ಳಿಯಲ್ಲಿ ಬೆಳಕಿಗೆ ಬಂದಿದ್ದು, ಮಾಹಿತಿ ತಿಳಿದ ಅಧಿಕಾರಿಗಳು, ಅವರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.
ಗಂಗೊಳ್ಳಿ ಗ್ರಾಮದ ಬಾಬಾಶಾ ಮೊಹಲ್ಲಾ ವಾಸಿಯಾಗಿರುವ ಸಫಿನಾಬಿ (70) ಎಂಬವರು ವಾಸಿಸಲು ಸ್ವಂತ ಮನೆಯಿಲ್ಲದೆ, ತೆರೆದ ಜಾಗದಲ್ಲಿ 2 ತಿಂಗಳಿಂದ ಮಲಗುವ ಮಂಚದಡಿ ಜೀವನ ಸಾಗಿಸುತ್ತಿದ್ದರು. ಕಳೆದ ಅನೇಕ ವರ್ಷಗಳಿಂದ ಬಾಬಾಶಾ ಮೊಹಲ್ಲಾ ಪರಿಸರದ ತನ್ನ ಮನೆಯಲ್ಲಿಯೇ ವಾಸವಿದ್ದು, ನಿವಾಸ ಜಾಗದ ತಕರಾರಿನ ಹಿನ್ನೆಲೆಯಲ್ಲಿ ಮನೆಯನ್ನು ಕೆಡವಲಾಗಿತ್ತು. ಆ ಬಳಿಕ ಅವರು ಭಟ್ಕಳ ದಲ್ಲಿರುವ ತನ್ನ ಮಗನೊಂದಿಗೆ ವಾಸಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಡಳಿತ, ಸಮಸ್ಯೆ ಪರಿಹರಿಸುವಂತೆ ಕುಂದಾಪುರ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಇಲಾಖೆಯ ಅಧಿಕಾರಿಗಳು ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ ಮತ್ತು ಗ್ರಾ.ಪಂ. ಕಾರ್ಯದರ್ಶಿ ದಿನೇಶ ಶೇರುಗಾರ್ ಅವರ ಮೂಲಕ ಸಫಿನಾಬಿ ಅವರ ಮನವೊಲಿಸಿ ಅವರನ್ನು ರವಿವಾರ ಅವರ ಸಂಬಂಧಿಕರ ಮನೆಗೆ ಕಳುಹಿಸಿಕೊಡುವಲ್ಲಿ ಯಶಸ್ವಿ ಯಾಗಿದ್ದಾರೆ.
ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಸದಸ್ಯ ಬಿ.ರಾಘವೇಂದ್ರ ಪೈ, ಪೊಲೀಸ್ ಉಪನಿರೀಕ್ಷಕ ಭೀಮಾಶಂಕರ ಎಸ್., ಪೊಲೀಸ್ ಸಿಬ್ಬಂದಿ ರತ್ನಾಕರ ನಾಯ್ಕ, ಗುಜ್ಜಾಡಿ ಗ್ರಾಮಸಹಾಯಕ ಗೋವಿಂದ್ರಾಯ ಶೇರುಗಾರ್ ಮತ್ತಿತರರು ವೃದ್ಧೆಯನ್ನು ಸ್ಥಳಾಂತರಿಸು
ವಲ್ಲಿ ಸಹಕರಿಸಿದರು.