Advertisement
ಮುಂಬೈ ಮೂಲದ ವನಿತಾ (38) ಮತ್ತು ಯಶೋಧಾ(40) ಬಂಧಿತರು. ಆರೋಪಿ ಗಳಿಂದ 127 ಗ್ರಾಂ ತೂಕದ ಚಿನ್ನದ ಗಟ್ಟಿ ಜಪ್ತಿ ಮಾಡ ಲಾಗಿದೆ. 2023ರ ನ.27ರಂದು ಸರ್ಜಾ ಪುರ ಮುಖ್ಯ ರಸ್ತೆಯ ದೊಡ್ಡಕನ್ನಹಳ್ಳಿಯಲ್ಲಿ ರುವ ಅಪಾರ್ಟ್ ಮೆಂಟ್‌ನಲ್ಲಿ ವಾಸವಾಗಿರುವ ಶೇಖರ್ ಆನಂದ್ ಎಂಬುವರ ಮನೆಯಲ್ಲಿ ಆರೋಪಿಗಳು ಕಳ್ಳತನ ಮಾಡಿ ಪರಾರಿ ಯಾಗಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಸವಿತಾ ಎಂಬಾಕೆ ತಲೆಮರೆಸಿ ಕೊಂಡಿದ್ದಾಳೆ.
Related Articles
Advertisement
ಆರೋಪಿಗಳ ವಿಚಾರಣೆಯಲ್ಲಿ ಇಬ್ಬರ ವಿರುದ್ಧ ಈ ಹಿಂದೆ ಮುಂಬೈನ ವಿವಿಧ ಪೊಲೀಸ್ ಠಾಣೆಗಳಲ್ಲಿ 36 ಮನೆ ಕಳವು ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಮುಂಬೈನ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸಕ್ಕೆ ಸೇರಿಕೊಂಡು ಬಳಿಕ ಹೊಂಚು ಹಾಕಿ ನಗದು, ಚಿನ್ನಾಭರಣ ದೋಚಿ ಪರಾರಿಯಾ ಗುತ್ತಿದ್ದರು. ಈ ಸಂಬಂಧ ಹಲವು ಬಾರಿ ಜೈಲಿಗೆ ಹೋಗಿದ್ದು, ಜಾಮೀನು ಪಡೆದು ಹೊರಗೆ ಬಂದು ಮತ್ತೆ ಹಳೇ ಚಾಳಿ ಮುಂದುವರೆಸುತ್ತಿದ್ದರು. ಬಂಧಿತರ ವಿರುದ್ಧ 2022ರಲ್ಲಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದರು ಎಂಬುದು ಗೊತ್ತಾಗಿದೆ. ಅಲ್ಲದೆ, ನಗರಕ್ಕೆ ಬಂದಾಗ ಪಿಜಿಯಲ್ಲಿ ವಾಸವಾಗುತ್ತಿದ್ದ ಆರೋಪಿಗಳು, ನಗರದಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚಿರುವ ಸ್ಥಳಗಳಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಸೆಕ್ಯೂರಿಟಿ ಗಾರ್ಡ್ ಗಳನ್ನು ಪರಿಚಯಿಸಿಕೊಂಡು, ಅಪಾರ್ಟ್‌ಮೆಂಟ್‌ಗಳಲ್ಲಿ ನಕಲಿ ಆಧಾರ್ ಕಾರ್ಡ್ ತೋರಿಸಿ ಕೆಲಸ ಪಡೆಯುತ್ತಿದ್ದರು. ಬಳಿಕ ಮನೆ ಸದಸ್ಯರ ಚಟುವಟಿಕೆಗಳನ್ನು ಗಮನಿಸಿ, ಕಳವು ಮಾಡಿ, ಪಿಜಿ ಖಾಲಿ ಮಾಡಿಕೊಂಡು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.
“ಮನೆಗೆಲಸದವರು ಬೇಕಿದ್ದರೆ ಸಂಪರ್ಕಿಸಿ’ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು:
ಆರೋಪಿಗಳ ವಿಚಾರಣೆಯಲ್ಲಿ ಮತ್ತೂಂದು ಮಹತ್ವದ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ರಚಿಸಿಕೊಂಡು ಮನೆಗೆಲಸದವರು ಬೇಕಿದ್ದರೆ ಸಂಪರ್ಕಿಸಿ ಎಂದು ಕಳವು ಮಾಡಿದ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಉಲ್ಲೇಖೀಸಿ ಜಾಹೀರಾತು ನೀಡುತ್ತಿದ್ದರು. ಈ ಗ್ರೂಪ್ ನೋಡಿ ಸಂಪರ್ಕಿಸುವ ಸಾರ್ವಜನಿಕರಿಗೆ, ನಕಲಿ ದಾಖಲೆಗಳನ್ನು ತೋರಿಸಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಆ ಬಳಿಕ ಮನೆಯ ಮಾಲೀಕರ ವಿಶ್ವಾಸ ಗಳಸಿ ಒಂದೆರಡು ದಿನಗಳಲ್ಲೇ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.