ಹಾವೇರಿ: ರೈತರಿಗೆ ಸೇರಬೇಕಿದ್ದ ಪರಿಹಾರ ಹಣ ನುಂಗಿದ್ದ 17 ಕಂದಾಯ ಇಲಾಖೆ ನೌಕರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಅನುಮತಿಸಿದ್ದ ಜಿಲ್ಲಾಡಳಿತ, ಇದೀಗ ಅತಿವೃಷ್ಟಿಯಿಂದ ಹಾನಿಗೀಡಾಗಿದ್ದ ಮನೆಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಿದ್ದ ಅನರ್ಹ ಫಲಾನುಭವಿಗಳಿಗೆ ಹಣಮರುಪಾತಿಸುವಂತೆ ನೋಟಿಸ್ ಜಾರಿಗೊಳಿಸುವ ಮೂಲಕ ಬಿಸಿ ಮುಟ್ಟಿಸಿದೆ.
ಮನೆ ನಿರ್ಮಿಸಿಕೊಳ್ಳುತ್ತಿರುವ ಫಲಾನುಭವಿಗಳು ಮೊದಲ ಕಂತಿನಲ್ಲಿ ಪಡೆದುಕೊಂಡಿರುವ ಸರ್ಕಾರದ ಹಣವನ್ನು ಮರುಪಾವತಿ ಮಾಡುವಂತೆ ಜಿಲ್ಲಾಡಳಿತ ನೋಟಿಸ್ ಜಾರಿಗೊಳಿಸುತ್ತಿದೆ. ಅನರ್ಹರಿಗೆ ಮನೆಹಂಚಿಕೆಯಾಗಿರುವ ಬಗ್ಗೆ ಸಾಕಷ್ಟು ದೂರುಗಳುಬಂದ ಹಿನ್ನೆಲೆಯಲ್ಲಿ ಮರು ಸಮೀಕ್ಷೆ ನಡೆಸಿದ್ದ ಜಿಲ್ಲಾಡಳಿತ ಜೂ.30ರಂದು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅರ್ಹರ, ಅನರ್ಹರ ಪಟ್ಟಿ ಸಲ್ಲಿಸಿತ್ತು. ಇದರಿಂದ ಸಮೀಕ್ಷೆ ನಡೆಸಿ ಅನರ್ಹರಿಗೆ ಮನೆ ಮಂಜೂರು ಮಾಡಿದ್ದ ಅಧಿಕಾರಿಗಳಿಗೂ ಸಂಕಷ್ಟ ಎದುರಾಗಲಿದೆ.
ಹಣ ವಸೂಲಿಗೆ ನಿಗಮದ ಸೂಚನೆ: ಕಳೆದ ಸೆ.28ಕ್ಕೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ನಿಗಮ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 2019ನೇ ಸಾಲಿನ ನೆರೆ ಸಂತ್ರಸ್ತರಿಗೆ ಪುನರ್ವಸತಿ ಯೋಜನೆಯಡಿಆಯ್ಕೆಯಾಗಿರುವ ಒಟ್ಟು 505 ಸಂತ್ರಸ್ತರ ಹೆಸರು ರದ್ದುಪಡಿಸಲು ಫಲಾನುಭವಿಗಳ ವಿವರದೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 505 ಸಂತ್ರಸ್ತರ ಪೈಕಿ 447ಸಂತ್ರಸ್ತರಿಗೆ ಈಗಾಗಲೇ 5,07,54,400 ರೂ., ಅನುದಾನ ಬಿಡುಗಡೆಯಾಗಿದೆ. ಪ್ರಸ್ತುತ ಈ ಫಲಾನುಭವಿಗಳನ್ನು ನಿಗಮದ ತಂತ್ರಾಂಶದಲ್ಲಿ ಬ್ಲಾಕ್ ಮಾಡಲಾಗಿದ್ದು, ಅನರ್ಹ ಸಂತ್ರಸ್ತರಿಗೆ ಬಿಡುಗಡೆಯಾಗಿರುವ ಅನುದಾನವನ್ನು ಕೂಡಲೇವಸೂಲಾತಿ ಮಾಡಿ ನಿಗಮಕ್ಕೆ ಡಿಡಿ ಮೂಲಕ ಹಿಂದಿರುಗಿಸುವಂತೆ ಸೂಚಿಸಿದೆ. ಹೀಗಾಗಿ, ಜಿಲ್ಲಾಧಿಕಾರಿಗಳು ಅನರ್ಹರಿಂದ ಹಣ ವಸೂಲಿ ಮಾಡುವಂತೆ ಜ.2ರಂದು ಹಾವೇರಿ, ರಾಣಿಬೆನ್ನೂರು,ಹಿರೇಕೆರೂರ, ಸವಣೂರು, ಶಿಗ್ಗಾವಿ, ಹಾನಗಲ್ಲ ತಾಲೂಕಿನ ತಾಪಂ ಇಒಗಳಿಗೆ ಪತ್ರ ಬರೆದಿದ್ದಾರೆ.
ಹಾವೇರಿ ತಾಲೂಕಿನಲ್ಲೇ ಹೆಚ್ಚು: ಹಾವೇರಿ ತಾಲೂಕಿನ 27 ಗ್ರಾಪಂಗಳಿಂದ 294 ಫಲಾನುಭವಿಗಳನ್ನು ರದ್ದುಪಡಿಸಲಾಗಿದೆ. ಫಲಾನುಭವಿಗಳಿಗೆ ಈಗಾಗಲೇನಿಗಮದಿಂದ 3,45,42,800 ಅನುದಾನಬಿಡುಗಡೆಯಾಗಿದ್ದು, ಹಣ ಪಡೆದುಕೊಂಡಿರುವಫಲಾನುಭವಿಗಳಿಂದ ಈಗ ಹಣ ವಸೂಲಿ ಮಾಡಿನಿಗಮಕ್ಕೆ ಹಿಂದಿರುಗಿಸುವಂತೆ ತಾಪಂ ಇಒ ಇತ್ತೀಚೆಗೆಗ್ರಾಪಂ ಪಿಡಿಒಗಳಿಗೆ ಪತ್ರ ಬರೆದಿದ್ದು, ಗ್ರಾಮಗಳಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ.
ಫಲಾನುಭವಿಗಳಿಗೆ ಸಂಕಷ್ಟ: 2019ರ ಆಗಸ್ಟ್ ಹಾಗೂ ಅಕ್ಟೋಬರ್‌ನಲ್ಲಿ ಮಳೆಯಿಂದಾಗಿ ಮನೆ ಬಿದ್ದುಹಾನಿಗೀಡಾದಾಗ ಪಿಡಿಒ, ಗ್ರಾಮಲೆಕ್ಕಿಗರು ಹಾಗೂಪಿಆರ್‌ಇಡಿ ಎಂಜಿನಿಯರ್ ಸೇರಿ ಜಂಟಿ ಸಮೀಕ್ಷೆನಡೆಸಿ ಮನೆ ಹಾನಿಯ ವರದಿ ಕೊಟ್ಟಿದ್ದರು. ಆಪ್ರಕಾರ ಜಿಲ್ಲೆಯಲ್ಲಿ ಎ ವರ್ಗದಲ್ಲಿ 363, ಬಿ ವರ್ಗದಲ್ಲಿ 5789, ಸಿ ವರ್ಗದಲ್ಲಿ 16,747 ಒಟ್ಟು 22,899 ಮನೆಹಾನಿಯಾಗಿರುವ ವರದಿ ಸಲ್ಲಿಸಲಾಗಿತ್ತು. ಈಗಾಗಲೇ ಫಲಾನುಭವಿಗಳಿಗೆ ಎರಡ್ಮೂರು ಕಂತಿನ ಹಣ ಬಿಡುಗಡೆಯಾಗಿದೆ. ಈಗ 505 ಫಲಾನುಭವಿಗಳನ್ನು ರದ್ದುಗೊಳಿಸಿ 447 ಫಲಾನುಭವಿಗಳಿಂದ ಹಣ ವಸೂಲಿಗೆ ಮುಂದಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಿಗಳೇ ಸಮೀಕ್ಷೆ ನಡೆಸಿ ಮನೆಮಂಜೂರು ಮಾಡಿ ಬಳಿಕ ಅವರೇ ರದ್ದುಗೊಳಿಸಲುವರದಿ ಸಲ್ಲಿಸಿರುವುದು ಫಲಾನುಭವಿಗಳಿಗೆ ಸಂಕಷ್ಟತಂದೊಡ್ಡಿದೆ. ಹೀಗಾಗಿ, ತಪ್ಪು ಸಮೀಕ್ಷೆ ನಡೆಸಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತದ ಕ್ರಮ ಏನು ಎಂದು ಪ್ರಶ್ನಿಸುವಂತಾಗಿದೆ.
ಅರ್ಧಕ್ಕೆ ನಿಂತಿರುವ ಮನೆಗಳು: ಸರ್ಕಾರದಿಂದ 5 ಲಕ್ಷ ರೂ. ಅನುದಾನ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಮನೆ ಕಟ್ಟಿಕೊಳ್ಳಲು ಮುಂದಾಗಿದ್ದ ಫಲಾನುಭವಿಗಳಿಗೆ ಮನೆ ಬ್ಲಾಕ್ ಮಾಡಿರುವ ವಿಷಯ ಕೇಳಿ ಆಘಾತ ತಂದಿದೆ. ಈಗ ಅರ್ಧಕ್ಕೆ ನಿಂತಿರುವ ಮನೆ ನಿರ್ಮಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಚಿಂತೆ ಮಾಡುತ್ತಿರುವಾಗಲೇ ಹಣ ಮರುಪಾವತಿಸುವಂತೆ ನೋಟಿಸ್ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜಿಲ್ಲೆಯಲ್ಲಿ ರೈತರ ಬೆಳೆಹಾನಿ ಪರಿಹಾರ ಹಣದಲ್ಲಿ ಅವ್ಯವಹಾರಎಸಗಿದ ಕಂದಾಯ ಇಲಾಖೆ ನೌಕರರಮೇಲೆ ಈಗಾಗಲೇ ಚಾರ್ಜ್ ಶೀಟ್‌ಸಲ್ಲಿಸಲಾಗಿದೆ. ಇದರಂತೆ ಜಿಲ್ಲೆಯಲ್ಲಿಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಪರಿಹಾರ ವಿತರಣೆಯಲ್ಲಿ ತಪ್ಪು ಎಸಗಿದನೌಕರರ ಮೇಲೆ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು.
–ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸರ್ಕಾರದ ನಿರ್ದೇಶನದಂತೆ ವಿವಿಧ ವಸತಿ ಯೋಜನೆಯಡಿ ಮನೆ ಪಡೆದುಕೊಂಡಿದ್ದ ಫಲಾನುಭವಿಗಳನ್ನು ನೆರೆ ಸಂತ್ರಸ್ತರ ಪಟ್ಟಿಯಿಂದ ಕೈಬಿಡಲಾಗಿದೆ. ಹೀಗಾಗಿ, ಹಾವೇರಿ ತಾಲೂಕಿನ 27 ಗ್ರಾಪಂಗಳ 294 ಫಲಾನುಭವಿಗಳಿಂದ ಮೊದಲ ಕಂತಾಗಿ ಹಣ ಪಡೆದಿದ್ದನ್ನು ಮರುಪಾವತಿಸಿಕೊಳ್ಳುವಂತೆ ಪಿಡಿಒಗಳಿಗೆ ಪತ್ರ ಬರೆಯಲಾಗಿದೆ. ಪಿಡಿಒಗಳು ಫಲಾನುಭವಿಗಳಿಗೆ ನೋಟಿಸ್ ಕೊಟ್ಟು ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಲಿದ್ದಾರೆ.
–ಬಸವರಾಜಪ್ಪ, ತಾಪಂ ಇಒ