Advertisement
ಸಂಜೆಹೊತ್ತು ಕಚೇರಿ ಮುಗಿಸಿ ಮನೆಗೆ ತೆರಳುವವರು, ಶಾಲೆ-ಕಾಲೇಜು ಬಿಟ್ಟು ಮನೆಗೆ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ನಡುವೆ ಸಿಲುಕಿ ಸುಮಾರು ಎರಡರಿಂದ ಮೂರು ತಾಸು ಅಕ್ಷರಶಃ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ನಗರದ ಪಿವಿಎಸ್-ಬಂಟ್ಸ್‌ಹಾಸ್ಟೆಲ್ ರಸ್ತೆ, ಪಂಪುವೆಲ್-ಬೆಂದೂರ್‌ವೆಲ್, ಪಂಪುವೆಲ್ -ನಂತೂರು, ಪಿವಿಎಸ್-ಲಾಲ್‌ಬಾಗ್, ಕಂಕನಾಡಿ-ಪಳ್ನೀರ್, ಬಲ್ಮಠ-ಬೆಂದೂರ್‌ವೆಲ್ ಹೀಗೆ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ತೀವ್ರವಾಗಿತ್ತು.
Related Articles
ಟ್ರಾಫಿಕ್ ನಿಯಂತ್ರಿಸಲು ಸಂಚಾರ ಪೋಲಿಸರು ಪರದಾಡದ ಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಪ್ರತಿಯೊಂದೆಡೆಯೂ ಎರಡು-ಮೂರು ಪೊಲೀಸರು ನಿಂತು ಸಂಚಾರ ನಿಯಂತ್ರಿಸಿದರು. ಅಡ್ಡಾದಿಡ್ಡಿ ವಾಹನ ಚಲಾಯಿಸಿದವರಿಗೆ ಗದರಿಸುತ್ತಾ ತಮ್ಮ ಕರ್ತವ್ಯ ನಿರ್ವಹಿಸಿದರು. ಮಧ್ಯಾಹ್ನದಿಂದ ರಾತ್ರಿ ತನಕವೂ ಟ್ರಾಫಿಕ್ ಜಾಮ್ ಇದ್ದುದರಿಂದ ರಾತ್ರಿವರೆಗೂ ರಸ್ತೆಯಲ್ಲೇ ಬೀಡು ಬಿಟ್ಟಿದ್ದರು.
Advertisement
5 ನಿಮಿಷದ ದಾರಿಗೆ 1 ಗಂಟೆಸಾಮಾನ್ಯವಾಗಿ ಬಸ್ಸುಗಳು ಹಂಪನಕಟ್ಟೆ, ಪಿವಿಎಸ್ ಭಾಗಗಳಿಂದ ಪಂಪುವೆಲ್ ತಲುಪಬೇಕಾದರೆ ಐದು ನಿಮಿಷ ತೆಗೆದುಕೊಳ್ಳುತ್ತದೆ. ಆದರೆ ಸೋಮವಾರ ಸಂಜೆ 5 ನಿಮಿಷದ ದಾರಿ ಸಾಗಲು ಒಂದು ಗಂಟೆ ತೆಗೆದುಕೊಂಡಿದ್ದವು. ಬಂಟ್ಸ್‌ಹಾಸ್ಟೆಲ್ ವೃತ್ತದಲ್ಲಿ 15 ನಿಮಿಷ, ಜ್ಯೋತಿ ವೃತ್ತ 15 ನಿಮಿಷ, ಬಲ್ಮಠ ಸರ್ಕಲ್ 15 ನಿಮಿಷ, ಕಂಕನಾಡಿಯಲ್ಲಿ 15 ನಿಮಿಷ ಹೀಗೆ ಎಲ್ಲಾ ಕಡೆಗಳಲ್ಲೂ ನಿಂತು ಸಾಗದ ಬೇಕಾದ ಸ್ಥಿತಿ ಇತ್ತು.