Advertisement

ಇನ್ನು ಹಾಟ್‌ಲೈನ್ ಮಾತು

06:00 AM May 03, 2018 | Team Udayavani |

ಬೀಜಿಂಗ್‌: ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭೇಟಿಯ ನಂತರ ಉಭಯ ದೇಶಗಳ ಸೇನಾಪಡೆಗಳು ಹಾಟ್‌ಲೈನ್ ಸ್ಥಾಪಿಸಲು ಸಮ್ಮತಿಸಿವೆ. ಎರಡೂ ದೇಶಗಳ ಸೇನಾ ಕೇಂದ್ರ ಕಚೇರಿಯಲ್ಲಿ ಹಾಟ್‌ಲೈನ್ ದೂರವಾಣಿ ಸಂಪರ್ಕವನ್ನು ಕಲ್ಪಿಸಲಾಗುತ್ತದೆ.  ಸಂಬಂಧ ಸುಧಾರಣೆಗಾಗಿ ನಾಯಕರು ಯಶಸ್ವಿ ಮಾತುಕತೆ ನಡೆಸಿದ ಬೆನ್ನಲ್ಲೇ ಕೈಗೊಂಡ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ. ಗಡಿಪ್ರದೇಶಗಳ ಮಾಹಿತಿ ಹಂಚಿಕೆ ಕಾರ್ಯತಂತ್ರ ಹಾಗೂ ಪ್ರಸ್ತುತ ಸಾಂಸ್ಥಿಕ ವ್ಯವಸ್ಥೆ  ಸ್ಥಿರೀಕರಿಸುವುದೂ ಸೇರಿದಂತೆ ಇತರ ಮಹತ್ವದ ನಿರ್ಧಾರಗಳನ್ನು ಮೋದಿ ಮತ್ತು ಕ್ಸಿ ಕೈಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next