Advertisement

ಬೇಸಿಗೆ ಸಮಸ್ಯೆಯಿಂದ ಹೋಟೆಲ್‌ಗ‌ಳು ಸೇಫ್!

11:49 AM Apr 07, 2021 | Team Udayavani |

ಬೆಂಗಳೂರು: ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಹಾಹಾಕಾರ ರಾಜಧಾನಿಯನ್ನು ಬೆಂಬಿಡದೆ ಕಾಡುತ್ತದೆ. ಅದರಲ್ಲೂ ಹೋಟೆಲ್‌ ಉದ್ಯಮಕ್ಕೆ ಜಲಕಂಟಕ ತಪ್ಪದೆ ಇರುತ್ತಿರಲಿಲ್ಲ. ಆದರೆ, ಈ ಬಾರಿ ಬೇಸಿಗೆಯಲ್ಲಿ ಹೋಟೆಲ್‌ ಉದ್ಯಮಿಗಳಿಗೆ ನೀರಿನ ಸಮಸ್ಯೆಯಿಂದ ಕೊಂಚ ಸಮಾಧಾನ ಸಿಗುವ ಸಾಧ್ಯತೆಯಿದೆ.

Advertisement

ನಗರದಲ್ಲಿ ಸುಮಾರು 24,500 ಹೋಟೆಲ್‌ಗ‌ಳಿವೆ. ಈ ಪೈಕಿ 200ಕ್ಕೂ ಹೆಚ್ಚು ತಾರಾ ಹೋಟಲ್‌ಗ‌ಳಿವೆ.ಒಂದು ತಾರಾ ಹೋಟೆಲ್‌ಗೆ ನಿತ್ಯ 1.20 ಲಕ್ಷ ಲೀಟರ್‌ಅವಶ್ಯಕತೆ ಇದೆ. ಬೇಸಿಗೆಯಲ್ಲಿ ಇದರ ಪ್ರಮಾಣ 2ಲಕ್ಷ ಲೀಟರ್‌ ತಲುಪಲಿದೆ. ಬಹುತೇಕ ಎಲ್ಲಾಹೋಟೆಲ್‌ಗ‌ಳಲ್ಲಿಯೂ ಒಂದರಿಂದ ಎರಡು ಬೋರ್‌ವೆಲ್‌ಗ‌ಳಿರುತ್ತವೆ. ಉಳಿದಂತೆ ದ್ವಿತೀಯ, ತೃತೀಯದರ್ಜೆ ಹೋಟೆಲ್‌ಗ‌ಳು ಖಾಸಗಿ ಬೋರ್‌ವೆಲ್‌ ಅಥವಾ ಟ್ಯಾಂಕರ್‌ ನೀರನ್ನು ಆಶ್ರಯಿಸಿರುತ್ತವೆ.

ಒಟ್ಟಾರೆ ನಿತ್ಯ ಈ ಹೋಟೆಲ್‌ಗ‌ಳಿಗೆ 2.50 ರಿಂದ 3 ಕೋಟಿ ಲೀಟರ್‌ ನೀರು ಅಗತ್ಯವಾಗಿರುತ್ತದೆ.ಬೇಸಿಗೆಯಲ್ಲಿ ನೀರಿನ ಬಳಕೆ ಪ್ರಮಾಣ ಮತ್ತಷ್ಟುಅಧಿಕವಾಗುತ್ತದೆ. ಆದರೆ, ಈ ಬಾರಿ ಬೆಂಗಳೂರಿನಹೋಟೆಲ್‌ ಉದ್ಯಮಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ.ಏಕೆಂದರೆ, ಕೋವಿಡ್‌-19 ಎರಡನೇ ಅಲೆಹಿನ್ನೆಲೆಯಲ್ಲಿ ಹೋಟೆಲ್‌ಗ‌ಳತ್ತ ಹೆಜ್ಜೆ ಹಾಕುತ್ತಿದ್ದ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ, ನೀರಿನ ಬಳಕೆಯೂ ಸಹ ಕಡಿಮೆಯಾಗಿದೆ.

ತಿಂಗಳಿಗೆ ಬೇಕು 75 ಕೋಟಿ ಲೀ. ನೀರು?:

ನಗರದಲ್ಲಿ ಸುಮಾರು 200ಕ್ಕೂ ಹೆಚ್ಚು ತಾರಾ ಹೋಟೆಲ್‌ಗ‌ಳಿವೆ. ಈ ಪೈಕಿ 20ಕ್ಕೂ ಹೆಚ್ಚು ಪಂಚತಾರಾ ಹೋಟೆಲ್‌ಗ‌ಳಿದ್ದರೆ, ಉಳಿದವು ಟು ಸ್ಟಾರ್‌ ಹಾಗೂತ್ರಿಸ್ಟಾರ್‌ ಹೋಟೆಲ್‌ಗ‌ಳಾಗಿವೆ. ನಿತ್ಯ ಹೋಟೆಲ್‌ವೊಂದಕ್ಕೆ ಅಂದಾಜು ತಲಾ 1 ರಿಂದ 1.20 ಲಕ್ಷಲೀಟರ್‌ ನೀರು ಅಗತ್ಯವಿದೆ. ಅಂದರೆ ದಿನವೊಂದಕ್ಕೆತಾರಾ ಹೋಟೆಲ್‌ಗ‌ಳಿಗೆ 2.50ರಿಂದ 3 ಕೋಟಿಲೀಟರ್‌ ನೀರು ಬೇಕಾಗುತ್ತದೆ. ಅದರಂತೆ ತಿಂಗಳಿಗೆಸುಮಾರು 70ರಿಂದ 75 ಕೋಟಿ ಲೀಟರ್‌ಗಿಂತಲೂಅಧಿಕ ನೀರು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

Advertisement

ಯಾವ ಕೆಲಸಕ್ಕೆ ನೀರು ಬಳಕೆ:

ಬೇಸಿಗೆ ಕೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ತಾರಾಹೋಟೆಲ್‌ಗ‌ಳಲ್ಲಿರುವ ಪ್ರತಿಕೊಠಡಿಗೆ ಕನಿಷ್ಠ ಸಾವಿರಲೀಟರ್‌ ನೀರು ಅಗತ್ಯವಿದೆ. ನಗರದಲ್ಲಿರುವ 200ಕ್ಕೂಹೆಚ್ಚು ತಾರಾ ಹೋಟೆಲ್‌ಗ‌ಳು ಅಂದಾಜು200ಕೊಠಡಿಗಳನ್ನು ಹೊಂದಿವೆ. ಇದರ ಜತೆಗೆ ಉದ್ಯಾನವನ, ಈಜುಕೊಳ, ವಾಹನಗಳ ಸ್ವತ್ಛತೆ, ಸಿಬ್ಬಂದಿ ಸೇರಿದಂತೆ ನಿತ್ಯ ಕನಿಷ್ಠ ಒಂದು ಲಕ್ಷ ಲೀಟರ್‌ ನೀರುಬಳಸಲಾಗುತ್ತದೆ. ಕೋವಿಡ್‌ ಹಿನ್ನೆಲೆ ಇದಕ್ಕೆ ಕೊಂಚರಿಲೀಫ್ ಸಿಕ್ಕಿದೆ. ಹೆಚ್ಚು ನೀರಿನ ಬಳಕೆ ಇಲ್ಲದಿರುವುದರಿಂದ ಹೋಟೆಲ್‌ಗ‌ಳಲ್ಲಿ ನೀರನ್ನುಮಿತವಾಗಿ ಬಳಸಲಾಗುತ್ತಿದೆ ಎಂದು ನಗರದ ಹೋಟೆಲ್‌ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ನೀರಿಗಾಗಿ ಹಣದ ಹೊಳೆ ಹರಿಸಬೇಕಿಲ್ಲ: ಬೇಸಿಗೆ ಪ್ರಾರಂಭವಾಯಿತು ಎಂದರೆ ಹೋಟೆಲ್‌ ಮಾಲೀಕರು ನೀರಿಗಾಗಿ ಸಾವಿರಾರು ರೂ. ಹಣ ವ್ಯಯಮಾಡಬೇಕಿತ್ತು. ಜಲಮಂಡಳಿಯು ಸಹ ಮಳೆ ನೀರುಕೊಯ್ಲು, ಕೊಳವೆಬಾವಿ, ಕೊಳಚೆ ನೀರಿನ ಪುನರ್‌ಬಳಕೆ ಸೇರಿದಂತೆ ನಾನಾ ಮೂಲಗಳಿಂದ ನೀರನ್ನುಸಂಗ್ರಹಿಸಿದ್ದರೂ ಶೇ.50ರಷ್ಟು ನೀರುಲಭ್ಯವಾಗುತ್ತಿರಲಿಲ್ಲ. ನೀರಿಗಾಗಿ ಹೋಟೆಲ್‌ ಮಾಲೀಕರು ಖಾಸಗಿ ಟ್ಯಾಂಕರ್ ‌ಗಳನ್ನು ಅವಲಂಬಿಸುತ್ತಿದ್ದರು.  ತಾರಾ ದರ್ಜೆಯ ಹೋಟೆಲ್‌ಗಳು ಕೇವಲ ನೀರಿಗಾಗಿಯೇ ಸುಮಾರು 30ರಿಂದ50 ಸಾವಿರ ರೂ. ವ್ಯಯ ಮಾಡಬೇಕಾದ ಪರಿಸ್ಥಿತಿಇತ್ತು. ಆದರೆ, ಈ ವರ್ಷ ಹೋಟೆಲ್‌ ಮಾಲೀಕರಿಗೆಈ ಹೊರೆ ಕಡಿಮೆಯಾಗಲಿದೆ ಎಂದು ಹೋಟೆಲ್‌ ಉದ್ಯಮಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆ ನೀರಿನ ಬಳಕೆ ಕಡಿಮೆ:

ಕೋವಿಡ್ ಲಾಕ್‌ಡೌನ್‌ ಬಳಿಕ ಶೇ.100ರಷ್ಟು ಪ್ರವೇಶಕ್ಕೆ ಅವಕಾಶ ನೀಡಿದ್ದಾಗ, ಶೇ.50ರಷ್ಟುಗ್ರಾಹಕರೂ ಹೋಟೆಲ್‌ಗ‌ಳತ್ತ ಬರುತ್ತಿರಲಿಲ್ಲ. ಹೀಗಾಗಿನೀರಿನ ಬಳಕೆ ಕಡಿಮೆಯಾಗಿತ್ತು. ಈಗ ಮತ್ತೆ 2ನೇಅಲೆ ಹೆಚ್ಚಾಗಿದೆ. ಸರ್ಕಾರ ಹೊಸ ನಿಯಮಗಳನ್ನುಜಾರಿಗೊಳಿಸಿದೆ. ಈ ಪ್ರಕಾರ ಹೋಟೆಲ್‌,ರೆಸ್ಟೋರೆಂಟ್‌ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರಅವಕಾಶ ಕಲ್ಪಿಸಿದೆ. ಶೇ.100ರಷ್ಟು ಪ್ರವೇಶವಿದ್ದಾಗಲೇಶೇ.50ರಷ್ಟು ಜನ ಬರುತ್ತಿರಲಿಲ್ಲ. ಈಗ ಶೇ.50ರಷ್ಟುಪ್ರವೇಶ ಕಲ್ಪಿಸಿದ್ದು, ಶೇ.25ಕ್ಕಿಂತ ಕಡಿಮೆ ಗ್ರಾಹಕರುಬರುವ ಸಾಧ್ಯತೆ ಇದೆ. ಇದರಿಂದ ಹೋಟೆಲ್‌ಗ‌ಳಲ್ಲಿನೀರಿನ ಬಳಕೆ ಕಡಿಮೆಯಾಗಲಿದೆ. ಬೇಸಿಗೆಯಲ್ಲೂನೀರಿನ ಅಭಾವ ಉಂಟಾಗುವುದಿಲ್ಲ ಎಂದು ಬೃಹತ್‌ಬೆಂಗಳೂರು ಹೋಟೆಲ್‌ಗ‌ಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ತಿಳಿಸಿದ್ದಾರೆ.

ಸೇಫ್ ಜೋನ್‌ನತ್ತ ಜಲಮೂಲ :

ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಬೆಂಗಳೂರಿನ ಜಲಮೂಲಗಳು ಸೇಫ್ ಜೋನ್‌ ತಲುಪಿವೆ. ಕೆಆರ್‌ಎಸ್‌ನಲ್ಲಿ 36 ಟಿಎಂಸಿ ಮತ್ತು ಕಬಿನಿಯಲ್ಲಿ 16 ಟಿಎಂಸಿ ನೀರಿನಸಂಗ್ರಹವಿದೆ. ಇದರಿಂದ ಹೋಟೆಲ್‌ ಉದ್ಯಮಿಗಳು ಕೊಂಚನಿರಾಳರಾಗಿದ್ದಾರೆ. ಲಭ್ಯ ನೀರನ್ನು ಬೇಸಿಗೆಯಲ್ಲಿ ಸಮರ್ಪಕವಾಗಿಪೂರೈಸುವ ಮೂಲಕ ಮಹಾನಗರಿಯಲ್ಲಿ ನೀರಿನ ಸಮಸ್ಯೆಉದ್ಭವಿಸದಂತೆ ಜಾಗರೂಕತೆ ವಹಿಸಲು ಬೆಂಗಳೂರು ಜಲಮಂಡಳಿಸಹ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎನ್ನಲಾಗಿದೆ. ಇದರೊಂದಿಗೆ ಹೋಟೆಲ್‌ಗ‌ಳ ಬೋರ್‌ವೆಲ್‌ಗ‌ಳಲ್ಲೂ ಅಂತರ್ಜಲ ಮಟ್ಟ ಉತ್ತಮವಾಗಿದೆ.

 ಕೋವಿಡ್‌ನಿಂದ್‌1,500 ಹೋಟೆಲ್‌ ಸ್ಥಗಿತ :

ಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರವನ್ನು ಬೆಂಬಿಡದೆ ಕಾಡಿದೆ. ಹೋಟೆಲ್‌ ಉದ್ಯಮ ಸಹ ಇದರಿಂದ ಹೊರತಾಗಿಲ್ಲ. ಕಳೆದ ವರ್ಷದ ಕೋವಿಡ್‌-19 ಲಾಕ್‌ಡೌನ್‌ನಿಂದ ಬೆಂಗಳೂರಿನಲ್ಲಿ1,500 ಹೋಟೆಲ್‌ಗ‌ಳು ಆರ್ಥಿಕ ಸಂಕಷ್ಟದಿಂದ ಮುಚ್ಚಿ ಹೋಗಿವೆ.ಅವುಗಳು ಈಗ ಬೇರೆ ವ್ಯಾಪಾರ ಕ್ರೇಂದ್ರಗಳಾಗಿ ಮಾರ್ಪಾಡಾಗಿವೆ ಎಂದು ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಒಟ್ಟು 24,500 ಹೋಟೆಲ್‌ಗ‌ಳಿವೆ. ಈ ಪೈಕಿ 3,500ರೆಸ್ಟೋರೆಂಟ್‌ ಮತ್ತು 21 ಸಾವಿರ ಸಾಮಾನ್ಯ ದರ್ಜೆ ಹೋಟೆಲ್‌ಗ‌ಳಿವೆ. ಎಲ್ಲ ಹೋಟೆಲ್‌ ಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಬ್ಲ್ಯೂಎಸ್‌ಎಸ್‌ಪಿ) ಯಿಂದ ನೀರು ಪೂರೈಕೆಯಾಗುತ್ತಿದೆ. ಕೋವಿಡ್‌ ಹಿನ್ನೆಲೆ ನೀರಿನ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ.  ●ಪಿ.ಸಿ.ರಾವ್‌, ಬೃಹತ್‌ ಬೆಂಗಳೂರು ಹೋಟೆಲ್‌ಗ‌ಸಂಘದ ಅಧ್ಯಕ್ಷ

ನಗರದ ಬಹುತೇಕ ಎಲ್ಲ ಹೋಟೆಲ್‌ ಗಳಿಗೆ ಬಿಬ್ಲ್ಯೂಎಸ್‌ಎಸ್‌ಪಿಯಿಂದನೀರು ಸರಬರಾಜು ಆಗುತ್ತಿದೆ. ಇದುಹೋಟೆಲ್‌ ಉದ್ಯಮದ ಪ್ರಮುಖಜಲಮೂಲ. ನೀರಿನ ಅಭಾವಉಂಟಾಗದಂತೆ ಬಹುತೇಕ ಎಲ್ಲ ಹೋಟೆಲ್‌ಗ‌ಳ ಮಾಲೀಕರು ಸ್ವಂತ ಬೋರ್‌ವೆಲ್‌ ಹಾಕಿಸಿದ್ದಾರೆ. ಬೇಸಿಗೆಯಲ್ಲಿನೀರಿನ ಸಮಸ್ಯೆ ಉಂಟಾದಾಗ ಖಾಸಗಿ ಟ್ಯಾಂಕರ್‌ ಮೂಲಕ ನೀರನ್ನು ಪಡೆಯಲಾಗುತ್ತದೆ. ರಮೇಶ್‌, ಹೋಟೆಲ್‌ ಉದ್ಯಮಿ

 

ವಿಕಾಸ್‌ ಆರ್‌ ಪಿಟ್ಲಾಲಿ

Advertisement

Udayavani is now on Telegram. Click here to join our channel and stay updated with the latest news.

Next