Advertisement

ಹೋಟೆಲ್‌ ಕ್ವಾರಂಟೈನ್‌ ದರ ನಿಗದಿ

04:11 AM May 16, 2020 | Suhan S |

ಹುಬ್ಬಳ್ಳಿ: ಹೊರ ರಾಜ್ಯಗಳಿಂದ ಆಗಮಿಸುವ ಜನರಲ್ಲಿ ಯಾವುದೇ ರೋಗ ಲಕ್ಷಣ ಹೊಂದಿಲ್ಲದೇ ಇರುವವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವುದು ಕಡ್ಡಾಯವಾಗಿದೆ. ಸ್ವಂತ ವೆಚ್ಚದಲ್ಲಿ ಕ್ವಾರೆಂಟೈನ್‌ಗೆ ಮುಂದಾಗುವವರಿಗೆ ಜಿಲ್ಲಾಡಳಿತ ಅವಳಿ ನಗರದ ಹೋಟೆಲ್‌ಗ‌ಳ ದರ ನಿಗದಿ ಮಾಡಿ, ಜಿಲ್ಲಾಧಿಕಾರಿ ದೀಪಾ ಚೋಳನ್‌ ಆದೇಶ ಹೊರಡಿಸಿದ್ದಾರೆ.

Advertisement

ಇತ್ತೀಚೆಗೆ ಧಾರವಾಡದಲ್ಲಿ ನಡೆದ ಹೋಟೆಲ್‌ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗಿನ ಸಭೆಯಲ್ಲಿ ಚರ್ಚಿಸಿ ಈ ದರಗಳನ್ನು ಕ್ವಾರಂಟೈನ್‌ ಸೌಲಭ್ಯಕ್ಕೆ ನಿಗದಿಗೊಳಿಸಲಾಗಿದೆ. ನಾನ್‌ ಎಸಿ ಕೊಠಡಿಗಳಲ್ಲಿ ಒಬ್ಬರಿಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನವೊಂದಕ್ಕೆ 700ರೂ. ನಿಗದಿ ಮಾಡಲಾಗಿದೆ. ಇಬ್ಬರು ಶೇರಿಂಗ್‌ ಆಧಾರದಲ್ಲಿ ಒಂದೇ ಕೊಠಡಿಯಲ್ಲಿ ಇದ್ದರೆ 1000ರೂ. ಹಾಗೂ ಎಸಿ ಕೊಠಡಿಯಲ್ಲಿ ಶೇರಿಂಗ್‌ ಆಧಾರದಲ್ಲಿ ಇಬ್ಬರಿಗೆ ದಿನವೊಂದಕ್ಕೆ 1500ರೂ. ನಿಗದಿ ಪಡಿಸಲಾಗಿದೆ.

ಕಡಿಮೆ ದರದ ಹೋಟೆಲ್‌ಗ‌ಳು: ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನವೊಂದಕ್ಕೆ ಒಬ್ಬರಿಗೆ 500ರೂ. ಹಾಗೂ ಇಬ್ಬರಿಗೆ ಶೇರಿಂಗ್‌ ಆಧಾರದಲ್ಲಿ 700ರೂ. ದರ ನಿಗದಿ ಪಡಿಸಲಾಗಿದೆ. ಹೋಟೆಲ್‌ಗ‌ಳ ಮಾಲೀಕರು ತಮ್ಮ ಹೋಟೆಲ್‌ ವಿಳಾಸ, ಲಭ್ಯ ಇರುವ ಕೊಠಡಿಗಳ ವರ್ಗಿಕರಣ ಮುಂತಾದವುಗಳ ಮಾಹಿತಿ ಮತ್ತು ತಮ್ಮ ಹೋಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಅಡಿ ತಂಗುವವರ ಕುರಿತು ಪೂರ್ಣ ವಿವರಗಳನ್ನು ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next