Advertisement
ಖಾಸಗಿ ಬಸ್ ಓಡಾಟತಾಲೂಕಿನಲ್ಲಿ ಖಾಸಗಿ ಬಸ್ ಓಡಾಟ ಆರಂಭಗೊಂಡಿದ್ದು, ಈಗಾಗಲೆ ಶೇ.50 ರಷ್ಟು ಟ್ರಿಪ್ ಕಡಿತಗೊಳಿಸಲಾಗಿದೆ. ಉಪ್ಪಿನಂಗಡಿ, ಮಡಂತ್ಯಾರು ಸಹಿತ ಗ್ರಾಮಾಂತರ ಪ್ರದೇಶಗಳಿಗೆ ಸೀಮಿತ ಬಸ್ ಓಡಾಟ ನಡೆಸಲಾಗುತ್ತಿದೆ. ಹಿಂದೆ 25 ಬಸ್‌ಗಳ 75 ಟ್ರಿಪ್ ಇದ್ದಲ್ಲಿ ಪ್ರಸಕ್ತ 10 ಬಸ್‌ಗಳ 25 ಟ್ರಿಪ್ ನಡೆಸಲಾಗುತ್ತಿದೆ. ಶಾಲಾ ಕಾಲೇಜು ತೆರೆಯದಿ ರುವುದರಿಂದ ಮತ್ತಷ್ಟು ಪ್ರಯಾಣಿಕರ ಕೊರತೆಯಾಗಿದೆ. ಇದರಿಂದ ನಷ್ಟದಲ್ಲೇ ಬಸ್ ಓಡಾಟ ನಡೆಸಬೇಕಾಗಿದೆ ಎಂದು ಖಾಸಗಿ ಬಸ್ ಮಾಲಕ ವಿಜಯ ಫೆರ್ನಾಡಿಂಸ್ ತಿಳಿಸಿದ್ದಾರೆ.
ಬಂಟ್ವಾಳ: ಬಂಟ್ವಾಳ- ಬಿ.ಸಿ. ರೋಡ್ ಸಹಿತ ತಾಲೂಕಿನ ಬಹು ತೇಕ ಪ್ರದೇಶಗಳಲ್ಲಿ, ಹೊಟೇಲ್‌ಗಳು ತೆರೆದು ಕೊಂಡಿದ್ದು, ಜನಸಂಚಾರವೂ ಕಂಡುಬಂತು.
ಕೆಲವು ದಿನಗಳ ಹಿಂದೆಯೇ ಲಾಕ್‌ಡೌನ್ ಸಡಿಲಿಕೆಯಾಗಿದ್ದರೂ ಹೊಟೇಲ್‌ಗಳು ತೆರೆ ಯದೇ ಇದ್ದುದರಿಂದ ಮಧ್ಯಾಹ್ನದ ವೇಳೆಗೆ ಬಹುತೇಕ ಮಂದಿ ಮನೆಗೆ ತೆರಳುತ್ತಿದ್ದರು. ಆದರೆ ಸೋಮವಾರ ಸಂಜೆಯವರೆಗೂ ಹೆಚ್ಚಿನ ಜನ ಸಂಚಾರ ಕಂಡುಬಂತು. ಆದರೂ ಹೊಟೇಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹಿಂದಿನಂತೆ ಇರಲಿಲ್ಲ. ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭಗೊಂಡಿದ್ದರೂ ಬಸ್‌ಗಳ ಸಂಖ್ಯೆ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯುಂಟಾಗಿತ್ತು. ಉಳಿದಂತೆ ಇತರ ಎಲ್ಲ ವಾಹನಗಳ ಓಡಾಟ ಆರಂಭಗೊಂಡಿದ್ದು, ಸರಕಾರಿ ಕಚೇರಿ ಗಳಲ್ಲೂ ಹೆಚ್ಚಿನ ಜನ ಕಂಡುಬಂದರು.
Related Articles
ಕೆಲವು ದಿನಗಳ ಹಿಂದೆಯೇ ಲಾಕ್‌ಡೌನ್ ಸಡಿಲಿಕೆಯಾಗಿದ್ದರೂ ಹೊಟೇಲ್‌ಗಳು ತೆರೆ ಯದೇ ಇದ್ದುದರಿಂದ ಮಧ್ಯಾಹ್ನದ ವೇಳೆಗೆ ಬಹುತೇಕ ಮಂದಿ ಮನೆಗೆ ತೆರಳುತ್ತಿದ್ದರು. ಆದರೆ ಸೋಮ ವಾರ ಸಂಜೆಯವರೆಗೂ ಹೆಚ್ಚಿನ ಜನ ಸಂಚಾರ ಕಂಡುಬಂತು. ಆದರೂ ಹೊಟೇಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹಿಂದಿನಂತೆ ಇರಲಿಲ್ಲ.
Advertisement
ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭಗೊಂಡಿದ್ದರೂ ಬಸ್‌ಗಳ ಸಂಖ್ಯೆ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯುಂಟಾಗಿತ್ತು. ಉಳಿದಂತೆ ಇತರ ಎಲ್ಲ ವಾಹನಗಳ ಓಡಾಟ ಆರಂಭಗೊಂಡಿದ್ದು, ಸರಕಾರಿ ಕಚೇರಿ ಗಳಲ್ಲೂ ಹೆಚ್ಚಿನ ಜನ ಕಂಡುಬಂದರು.
ಜನರ ಓಡಾಟ ಹೆಚ್ಚಳಪುತ್ತೂರು/ಸುಳ್ಯ: ಜೂ. 8ರಿಂದ ಹೊಟೇಲ್ ಗಳಲ್ಲಿ ಸ್ಥಳದಲ್ಲೇ ಆಹಾರ, ಉಪಾಹಾರ ನೀಡಲು ಅವಕಾಶ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು ನಗರದಲ್ಲಿ ಹೊಟೇಲ್‌ಗಳಲ್ಲಿ ಊಟ, ಉಪಾಹಾರ ಪುನರಾರಂಭ ಗೊಂಡಿದೆ. ಈ ಹಿಂದೆ ಪಾರ್ಸೆಲ್‌ಗೆ ಮಾತ್ರ ಅವಕಾಶ ಇತ್ತು. ಈಗ ಸಾಮಾಜಿಕ ಅಂತರ ಪಾಲನೆ, ನೈರ್ಮಲ್ಯ ರಕ್ಷಣೆ, ಗ್ರಾಹಕ ಸಂಖ್ಯೆ ಮಿತಿಯೊಂದಿಗೆ ಹೊಟೇಲ್ ತೆರೆ ದಿವೆ. ನಗರದಲ್ಲಿ ಜನರ ಓಡಾಟ, ವಾಹನ ಸಂಚಾರ ಹೆಚ್ಚಾಗಿದ್ದರೂ ಹೊಟೇಲ್‌ಗಳಲ್ಲಿ ಗ್ರಾಹಕರ ಸಂಖ್ಯೆ ಇಳಿಮುಖವಾಗಿತ್ತು.