Advertisement

ಕಲ್ಲು ಬಂಡೆ ಮೇಲೆ ಹೋಟೆಲ್

12:57 AM Jul 30, 2019 | Team Udayavani |

ನಾರ್ವೆ: ಜಗತ್ತಿನ ಪ್ರತಿಷ್ಠಿತ ವಾಸ್ತುಶಿಲ್ಪ ವಿನ್ಯಾಸಗಾರರು ವಿಶಿಷ್ಟ ವಿನ್ಯಾಸ ಮಾಡಿ ಅದನ್ನು ಜಾರಿಗೆ ತರುವುದಕ್ಕೆ ಹಾತೊರೆಯುತ್ತಿರುತ್ತಾರೆ. ಅದೇ ರೀತಿ, ನಾರ್ವೆಯಲ್ಲಿನ ಪ್ರತಿಷ್ಠಿತ ವಿನ್ಯಾಸಗಾರ ಹಾಯ್ರಿ ಅಟಕ್‌ ವಿಶಿಷ್ಟ ವಿನ್ಯಾಸವೊಂದನ್ನು ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಆಕರ್ಷಣೆ ಹುಟ್ಟಿಸಿದೆ. ನಾರ್ವೆಯಲ್ಲಿರುವ ಪ್ರೀಕೆಸ್ಟೋಲನ್‌ ಎಂಬ ಕಲ್ಲಿನ ಪರ್ವತದ ಒಂದು ಬದಿಗೆ ಹೋಟೆಲ್ ನಿರ್ಮಾಣ ಮಾಡುವ ಅವರ ವಿನ್ಯಾಸ ಭಾರಿ ಕುತೂಹಲ ಹುಟ್ಟಿಸಿದೆ.

Advertisement

ಈ ಹೋಟೆಲ್ ನೆಲದಿಂದ ಸುಮಾರು 1981 ಅಡಿ ಎತ್ತರದಲ್ಲಿ ಇರಲಿದೆ. ಮೂರು ಮಹಡಿಯ ಈ ಹೋಟೆಲ್ ಅನ್ನು ನೆಲದಿಂದ ಕಟ್ಟುವುದಿಲ್ಲ. ಬದಲಿಗೆ ಕಲ್ಲಿನ ಪರ್ವತಕ್ಕೆ ಆನಿಸಿಕೊಂಡಂತೆ ನಿರ್ಮಿಸಲಾಗುತ್ತದೆ. ಮೂರು ಮಹಡಿಯಿಂದ ಕೆಳಗೆ ಅಂದರೆ ಮೊದಲ ಮಹಡಿಯಲ್ಲಿ ಒಂದು ಈಜುಕೊಳ ನಿರ್ಮಾಣದ ವಿನ್ಯಾಸ ಮಾಡಲಾಗಿದೆ. ಈ ಈಜುಕೊಳ ಸಂಪೂರ್ಣ ಪಾರದರ್ಶಕವಾಗಿರಲಿದೆ. ಸದ್ಯ ಈ ಯೋಜನೆ ಕಾಗದದ ಮೇಲಷ್ಟೇ ಇದೆ. ಇನ್ನೂ ಇದಕ್ಕೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಈ ಹೋಟೆಲ್ ಯಾವಾಗ ನಿರ್ಮಾಣವಾಗಲಿದೆ ಎಂಬುದು ಸ್ಪಷ್ಟವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next