Advertisement

ಜಯನಗರದಲ್ಲಿ ಹೋಟೆಲ್‌ ಫಿಶ್‌ಲ್ಯಾಂಡ್‌ ಆರಂಭ

11:43 AM Nov 30, 2017 | |

ಬೆಂಗಳೂರು: ಕರಾವಳಿ ಕರ್ನಾಟಕ ಮತ್ತು ಆಂಧ್ರ ಶೈಲಿಯ ರುಚಿಕರ ಮೀನಿನ ಖಾದ್ಯಗಳ ತಯಾರಿಕೆಗೆ ಹೆಸರುವಾಸಿಯಾದ ಫಿಶ್‌ ಲ್ಯಾಂಡ್‌ ಡೀಲಕ್ಸ್‌ ಹೋಟೆಲ್‌ ಇತೀ¤ಚೆಗೆ ಜಯನಗರದ 4ನೇ ಬ್ಲಾಕ್‌ನಲ್ಲಿ ಆರಂಭಗೊಂಡಿದೆ.

Advertisement

ಹೋಟೆಲು ಉದ್ಯಮದಲ್ಲಿ ಪರಿಣಿತರಾದ ಕರುಣಾಕರ್‌ ಶೆಟ್ಟಿ ಹಾಗೂ ಸೀತಾರಾಮ ಶೆಟ್ಟಿ ಅವರ ಪಾಲುಗಾರಿಕೆಯ ಫಿಶ್‌ ಲ್ಯಾಂಡ್‌ ಡೀಲಕ್ಸ್‌ ಉಗಾಡಿ ಘಟಕವಾಗಿದೆ. ಈ ಹೋಟೆಲ್‌ನಲ್ಲಿ ಶುಚಿ, ರುಚಿಗೆ ಪ್ರಾಧಾನ್ಯತೆ ನೀಡಲಾಗಿದ್ದು ಮನೆಮಂದಿಯೆಲ್ಲಾ ಕುಳಿತು ಒಂದೇ ಜಾಗದಲ್ಲಿ ತಾಜಾ ಕರಾವಳಿ, ಆಂಧ್ರಾ, ಚೈನೀಸ್‌, ತಂದೂರಿ ಹಾಗೂ ಉತ್ತರ ಭಾರತ ಶೈಲಿಯ ಆಹಾರ ಪದಾರ್ಥಗಳನ್ನು ಸವಿಯಬಹುದು.

ಜೊತೆಗೆ ವಿವಿಧ ರೀತಿ ಐಸ್‌ಕ್ರೀಮ್‌, ಜ್ಯೂಸ್‌, ಗ್ರಿಲ್‌, ರೋಲ್‌ಗ‌ಳು ಕೂಡ ದೊರೆಯುತ್ತವೆ. ನುರಿತ ಬಾಣಸಿಗರಿಂದ ತಯಾರಿಸಲ್ಪಟ್ಟ ಪ್ರಾನ್ಸ್‌ ಗೀ ರೋಸ್ಟ್‌, ಸ್ಕಿಡ್‌, ಸುಕ್ಕ (ಬೋಡಾಸ್‌), ಕ್ರಾಬ್‌ ತಂದೂರ್‌, ಪ್ರಾನ್ಸ್‌ ತಂದೂರ್‌, ಚಿಕನ್‌ ಸುಕ್ಕ, ಫಿಶ್‌ ಪುಳಿಮುಂಚಿ, ನೀರುದೋಸೆ, ಕುಂದಾಪುರ ಚಿಕನ್‌, ಕೋರಿ ರೊಟ್ಟಿ ಚಿಕನ್‌ ಗಸಿ ಮುಂತಾದ ವಿಶೇಷ ಪದಾರ್ಥಗಳು ಇಲ್ಲುಂಟು.

3 ರಿಂದ 4 ಕಿ.ಮೀ. ಒಳಗಿನ ಮನೆಗಳಿಗೆ ಸೂಪರ್‌ ಫಾಸ್ಟ್‌ ಹೋಂ ಡೆಲಿವರಿ ಸೌಲಭ್ಯವೂ ಕಲ್ಪಿಸಲಾಗಿದೆ ಎಂದು ಫಿಶ್‌ ಲ್ಯಾಂಡ್‌ ಆಡಳಿತ ಮಂಡಳಿ ತಿಳಿಸಿದೆ. ಮಾಹಿತಿಗೆ ಫೋ. 41470470, ಮೊ.98807 55951 ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next