Advertisement
ಹಂಪಿ ಅಭಿವೃದ್ಧಿ ಪ್ರಾಧಿಕಾರ ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ವ್ಯಾಪಾರ ವಹಿವಾಟು ಪರವಾನಗಿ ಪಡೆದು ಮಾಡಬೇಕು ಅನಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಹೋಟೆಲ್ ಗಳನ್ನು ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಕಳೆದ ಡಿಸೆಂಬರ್ 27ರಂದು ಸೀಜ್ ಮಾಡಿ ಬಂದ್ ಮಾಡಿಸಿದೆ .
Related Articles
Advertisement
ಹಂಪಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು ಕೊನೆಯಲ್ಲಿ ಆನೇಗುಂದಿ ಭಾಗದಲ್ಲಿರುವ ಹೋಟೆಲ್ ಗಳಲ್ಲಿ ತಂಗಲು ಆಗಮಿಸುತ್ತಿದ್ದರು. ಇದರಿಂದ ಹಂಪಿ ಭಾಗದ ಹೋಟೆಲ್ ಗಳ ವ್ಯಾಪಾರ ವಹಿವಾಟು ಅಷ್ಟೇನೂ ಹದಗೆಟ್ಟಿರಲಿಲ್ಲ . ಆನೆಗೊಂದಿ ಭಾಗದಲ್ಲಿ ಅನಧಿಕೃತವಾಗಿ ಹೋಟೆಲ್ ರೆಸಾರ್ಟ್ ಗಳ ಬಂದ್ ಮಾಡಿಸುವ ಷಡ್ಯಂತ್ರ ದಿಂದಾಗಿ ಮತ್ತು ನಿಯಮಗಳ ಉಲ್ಲಂಘನೆ ನೆಪದಲ್ಲಿ ಡಿಸೆಂಬರ್ 27 ರಂದು ಕೊಪ್ಪಳ ಜಿಲ್ಲಾಡಳಿತ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಆನೆಗೊಂದಿ ಭಾಗದ ರೆಸಾರ್ಟ್ ಗಳನ್ನು ಸೀಜ್ ಮಾಡಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿದರು . ಹಂಪಿ ಭಾಗದಲ್ಲಿ ಹೋಟೆಲ್ ರೆಸಾರ್ಟ್ ಗಳು ಈಗಲೂ ನಿರಂತರವಾಗಿ ನಡೆಯುತ್ತಿದ್ದು ಪ್ರಾಧಿಕಾರದ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಂಪಿ ಭಾಗದಲ್ಲಿ ಹೋಟೆಲ್ ಉದ್ಯಮಗಳು ಇಲ್ಲ 2 ಅಥವಾ 2 ಹೋಟೆಲ್ ಮಾತ್ರ ಇವೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆನೆಗೊಂದಿ ಭಾಗದ ಜನರು ಆರೋಪಿಸುತ್ತಿದ್ದಾರೆ .
ಷಡ್ಯಂತ್ರ :ಆನೆಗೊಂದಿ ಭಾಗದಲ್ಲಿರುವ ಕಿಷ್ಕಿಂದಾ ಅಂಜನಾದ್ರಿ ಮತ್ತು 7ಗುಡ್ಡ ಪ್ರದೇಶ ಸಾಣಾಪುರ ಲೇಕ್ ಮತ್ತು ತುಂಗಭದ್ರ ನದಿ ಪಾತ್ರವನ್ನು ಸಣಾಪುರ ವಾಟರ್ ಫಾಲ್ಸ್ ವೀಕ್ಷಣೆ ಮಾಡಲು ಅಧಿಕ ಪ್ರವಾಸಿಗರು ಆನೆಗೊಂದಿ ಭಾಗಕ್ಕೆ ಬರುವುದರಿಂದ ಇಲ್ಲಿಯ ಹೋಟೆಲ್ ಗಳು ವೀಕೆಂಡ್ ಸೇರಿದಂತೆ ಉಳಿದ ದಿನಗಳಲ್ಲಿ ಪ್ರವಾಸಿಗರಿಗೆ ಊಟ ವಸತಿ ನೀಡುತ್ತಿವೆ .ಇದರಿಂದ ಹಂಪಿ ಭಾಗದ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದ್ದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೆಲ ಅಧಿಕಾರಿಗಳು ಮತ್ತು ಕೆಲ ಚುನಾಯಿತ ಜನಪ್ರತಿನಿಧಿಗಳು ಷಡ್ಯಂತ್ರ ನಡೆಸಿ ಆನೆಗೊಂದಿ ಭಾಗದಲ್ಲಿರುವ ಹೋಟೆಲ್ ಗಳನ್ನು ಪ್ರಾಧಿಕಾರದ ನಿಯಮ ಉಲ್ಲಂಘನೆ ನೆಪದಲ್ಲಿ ಬಂದ್ ಮಾಡಿಸಿದ್ದಾರೆ .
ಆನೆಗೊಂದಿ ಭಾಗದಲ್ಲಿ ಆನೆಗುಂದಿ ಮತ್ತು ವಿರುಪಾಪುರಗಡ್ಡಿ ಮಾತ್ರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ ಉಳಿದಂತೆ ಯಾವ ಗ್ರಾಮಗಳಲ್ಲಿ ಸಹ ಸ್ಮಾರಕಗಳಿಲ್ಲ ಆದರೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ನಿಯಮಗಳನ್ನು ಹೇರಿ ಇಲ್ಲಿಯ ಪ್ರವಾಸೋದ್ಯಮವನ್ನು ಮೊಟಕುಗೊಳಿಸುತ್ತಿದೆ. ಹಂಪಿ ಭಾಗದಲ್ಲಿ ಹೋಟೆಲ್ ಉದ್ಯಮ ನಡೆಸಲು ಅಲ್ಲಿಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಬೆಂಬಲ ನೀಡಿದಂತೆ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯಲು ಹೋಟೆಲ್ ನಡೆಸಲು ಇಲ್ಲಿಯ ಜನಪ್ರತಿನಿಧಿಗಳು ಸಹ ಬೆಂಬಲ ನೀಡಬೇಕೆಂದು ಹೆಸರು ಹೇಳಲು ಇಚ್ಛಿಸದ ಹೋಟೆಲ್ ಮಾಲೀಕರೊಬ್ಬರು ಉದಯವಾಣಿ ಜತೆ ಮಾತನಾಡುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ .