ನಾಲ್ಕೂರಿನ ಮಿಯಾರು, ಕಾಡೂರಿನ ಮುಂಡಾಡಿ ಯಾಪಿಕಡು ಹಾಗೂ ನೀಲಾವರ ಕಿಂಡಿ ಅಣೆಕಟ್ಟುಗಳನ್ನು ನೀರಿನ ಸಂಗ್ರಹಣೆ ಗಣನೀಯ ಇಳಿಕೆಯಾಗಿದೆ.
Advertisement
ಮರುಭೂಮಿಬಿಸಿಲಿನ ಝಳಕ್ಕೆ ಜೀವ ನದಿಯಾದ ಸೀತೆ ಮರುಭೂಮಿಯಾಗಿ ಬದಲಾಗಿದೆ. ಎಲ್ಲಿ ನೋಡಿದರೂ ಬಂಡೆ ಕಲ್ಲುಗಳೇ ಕಣ್ಣಿಗೆ ರಾಚುತ್ತಿವೆ. ಕೆಲವು ದೊಡ್ಡ ಹೊಂಡ ಗಳಲ್ಲಿ ಮಾತ್ರವೇ ನೀರು ಉಳಿದಿದೆ.
ನದಿ ಬದಿ ಇದ್ದರೂ ನೀರಿನ ತತ್ವಾರ ಹೇಳತೀರದು. ಹೊಳೆಯೇ ಒಣಗಿದ ಪರಿಣಾಮ ಬಾವಿ, ಕೆರೆಗಳ ನೀರೂ ಆವಿಯಾಗಿದೆ. ನದಿ ತೀರದ ನಿವಾಸಿಗಳೂ ಟ್ಯಾಂಕರ್ ನೀರು ಆಶ್ರಯಿಸಿದ್ದಾರೆ. ಪಂಪ್‌ಸೆಟ್ ಸ್ಥಳಾಂತರ
ನೀರಿನ ಕೊರತೆಯಿಂದ ತೋಟಗಳು ಒಣಗಿವೆ. ಕೃಷಿಕರು ನದಿಯಲ್ಲಿ ನೀರಿರುವ ಸ್ಥಳಗಳಿಗೆ ಪಂಪ್‌ಸೆಟ್ ಸ್ಥಳಾಂತರಿಸುತ್ತಿದ್ದಾರೆ. ಕೆಲವು ದಿನಗಳಲ್ಲಾದರೂ ಮಳೆ ಬಾರದಿದ್ದರೆ ಸಮಸ್ಯೆ ಬಿಗಡಾಯಿಸಲಿದೆ.