Advertisement
ದೇಶದಲ್ಲಿ ಕೋವಿಡ್ ವೈರಾಣು ಭೀತಿ ಹಿನ್ನೆಲೆ ರಾಜ್ಯಾದ್ಯಂತ ಎಲ್ಲಾ ಶಾಲೆಗಳು ಮಾರ್ಚ್ 12ರಿಂದ ಬಂದ್ ಆಗಿದ್ದವು. ಆದರೂ ಮಕ್ಕಳ ಬಿಸಿಯೂಟಯೋಜನೆಯಡಿ ಸರ್ಕಾರ ಮೇ ತಿಂಗಳ ಅಂತ್ಯದವರೆಗೆ ಪಡಿತರ ನೀಡಿ ನಂತರ ಸ್ಥಗಿತಗೊಳಿಸಿತ್ತು. ಬಳಿಕ ಶಿಕ್ಷಣ ಇಲಾಖೆಯು, ಜೂನ್‌ನಿಂದ ಆಗಸ್ಟ್ ವರೆಗಿನ ಪಡಿತರವನ್ನು ವಿದ್ಯಾರ್ಥಿಗಳಿಗೆ ನೀಡುವಂತೆ ಹಣಕಾಸು ಇಲಾಖೆಗೆ ಪತ್ರ ಬರೆದಿತ್ತು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳೆರೆಡು ಶೇ.60/40ರ ಅನುಪಾತದಲ್ಲಿ ಬಿಪಿಎಲ್, ಐಪಿಎಲ್ ಕುಟುಂಬಗಳಿಗೆ ನೀಡಲಾಗುತ್ತಿದೆ. ಒಂದು ವೇಳೆ ಶಾಲಾ ಮಕ್ಕಳಿಗೂ ಈ ಮೂರು ತಿಂಗಳ ಬಿಸಿಯೂಟ ಪಡಿತರ ನೀಡಿದರೆ ಪುನರಾವರ್ತನೆಯಾಗಲಿದೆ ಎಂದು ತಿಳಿಸಿತ್ತು.
Related Articles
Advertisement
ಪ್ರಸ್ತುತ ಒಂದನೇ ತರಗತಿಯಿಂದ 8ನೇ ತರಗತಿಯ ಮಕ್ಕಳಿಗೆ ಕೇಂದ್ರ ಸರ್ಕಾರ ಅಕ್ಕಿ ಮತ್ತು ಗೋದಿ ಪೂರೈಕೆ ಮಾಡಿದರೆ, ಉಳಿದ ಸಾಂಬಾರ ಪದಾರ್ಥ, ಅಡುಗೆ ತಯಾರಿಕೆ ಹಾಗೂ ತರಕಾರಿ ಖರ್ಚನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೇ.40/60ರ ಅನುಪಾತದಲ್ಲಿ ಹಣ ವಿನಿಯೋಗಿಸುತ್ತಿವೆ. ಒಂಭತ್ತು ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ವೆಚ್ಚ ಮಾಡುತ್ತಿದ್ದು, ಇದರ ಜೊತೆಗೆ ಒಂದರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆ ಕಲ್ಪಿಸಿದೆ.
ವಿದ್ಯಾರ್ಥಿಗಳಿಗೆ ಸಿಗಬೇಕಾದ ಪಡಿತರ : ಸದ್ಯಕ್ಕೆ ಶಾಲೆಗಳ ಬಾಗಿಲು ತೆರೆಯದೇ ಇರುವುದ ರಿಂದ ಜೂನ್, ಜುಲೈ ಹಾಗೂ ಆಗಸ್ಟ್ ಮಾಸದ ಪಡಿತರ ನೀಡಿಲ್ಲ. ಒಂದು ವೇಳೆ ಪಡಿತರವನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ನಿರ್ಧರಿಸಿದರೆ, ಒಂದನೇ ತರಗತಿಯಿಂದ 5ರವರೆಗಿನ ಪ್ರತಿ ವಿದ್ಯಾರ್ಥಿಗೆ 7.5 ಕೆ.ಜಿ. ಅಕ್ಕಿ, 368 ರೂ. ಮೌಲ್ಯದ ಬೇಳೆ ಪದಾರ್ಥ ಹಾಗೂ ಹಾಲಿನ ಪುಡಿ ಲಭ್ಯವಾಗಲಿದೆ. 5ರಿಂದ ಹತ್ತನೇ ತರಗತಿ ವರೆಗಿನ ಪ್ರತಿ ವಿದ್ಯಾರ್ಥಿಗೆ 11.5 ಕೆ.ಜಿ. ಅಕ್ಕಿ ಹಾಗೂ 558 ರೂ. ಮೌಲ್ಯದ ಬೇಳೆ ಪದಾರ್ಥ ಹಾಗೂ ಹಾಲಿನ ಪುಡಿ ಸಿಗಲಿದೆ.
ಕೋವಿಡ್ ಸೊಂಕಿನ ಹಿನ್ನೆಲೆ ಶಾಲೆಗಳು ನಡೆಯದೆ ಇರುವುದ ರಿಂದ ಶಾಲೆಗಳಿಗೆ ಬಿಸಿಯೂಟ ಪಡಿತರ ನೀಡುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಆದರೆ ಮಕ್ಕಳಲ್ಲಿ ಪೂರಕ ಪೌಷ್ಟಿಕಾಂಶದ ಕೊರತೆ ಉಂಟಾಗ ಬಾರದು ಎಂಬ ಕಾರಣಕ್ಕಾಗಿ ಜೂನ್‌ನಿಂದ ಆಗಸ್ಟ್‌ವರೆಗಿನ ಮಧ್ಯಾಹ್ನದ ಬಿಸಿಯೂಟದಪಡಿತರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. –ಸಿ.ಲಿಂಗರಾಜಯ್ಯ, ಶಿಕ್ಷಣಾಧಿಕಾರಿ ಬಿಸಿಯೂಟ ಕಾರ್ಯಕ್ರಮ
ಸತೀಶ್ ದೇಪುರ