Advertisement
ಮಾರ್ಚ್‌ವರೆಗೂ ಶಾಲೆಗಳು ನಡೆದಿದ್ದು, ಆ ಸಂದರ್ಭದಲ್ಲಿ ಶಾಲೆಗಳಲ್ಲಿಯೇ ಬಿಸಿ ಯೂಟ ನೀಡಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿದ್ದ ಪರಿಣಾಮ ಬೇಸಿಗೆ ರಜೆ ಅವಧಿ ಏಪ್ರಿಲ್ ಹಾಗೂ ಮೇ ತಿಂಗಳು ಸೇರಿದಂತೆ ಒಟ್ಟು 58 ದಿನಗಳ ಕಾಲ ಆಹಾರ ಧಾನ್ಯಗಳನ್ನು ಮಕ್ಕಳ ಮನೆಗಳಿಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ವಿತರಿಸಿವೆ. ಜೂನ್ ತಿಂಗಳಿನಿಂದ ಆಹಾರ ಧಾನ್ಯಗಳ ವಿತರಣೆ ನಿಲ್ಲಿಸಲಾಗಿದೆ.
Related Articles
Advertisement
13765.98 ಕ್ವಿಂಟಾಲ್ ಧಾನ್ಯ ಬಾಕಿ: ಪ್ರಸ್ತುತ ಜೂನ್ ತಿಂಗಳಿನಿಂದ ವಿತರಣೆಯಾಗದೆ ಗೋದಾಮುಗಳಲ್ಲಿ 13765.98 ಕ್ವಿಂಟಾಲ್ ಧಾನ್ಯ ಸಂಗ್ರಹವಿದೆ. ಅಕ್ಕಿ 11383.92 ಕ್ವಿಂಟಾಲ್, ಗೋಧಿ 1306 ಕ್ವಿಂಟಾಲ್ ಹಾಗೂ 1076.06 ಕ್ವಿಂಟಾಲ್ ಬೇಳೆ ಸಂಗ್ರಹವಿದ್ದು, ಎಣ್ಣೆ, ಹಾಲಿನಪುಡಿ ಸಂಪೂರ್ಣ ವಿತರಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ಕುಟುಂಬಕ್ಕೂ ಧಾನ್ಯ ವಿತರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶ ನೀಡಿದ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳಲ್ಲೂ ಮಕ್ಕಳಿಗೂ ಧಾನ್ಯ ವಿತರಿಸಲಾಗುತ್ತಿತ್ತು. ಆದ್ದರಿಂದ ಶಾಲೆ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಧಾನ್ಯವನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಮೇವರೆಗೂ 58 ದಿನಗಳ ಕಾಲ ವಿತರಿಸಲಾಗಿದ್ದು, ಜೂನ್‌ನಿಂದ ಸ್ಥಗಿತಗೊಳಿಸಲಾಗಿದೆ. ಶಾಲೆಗಳು ಆರಂಭಗೊಂಡ ನಂತರ ಸರ್ಕಾರದ ಆದೇಶದಂತೆ ವಿತರಿಸಲಾಗುವುದು. – ಶಿವಕುಮಾರ್, ಪ್ರಭಾರ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ
ಶಾಲೆಗಳು ಆರಂಭವಾಗದಿರುವುದರಿಂದ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಿ, ವಿದ್ಯಾರ್ಥಿಗಳ ಮನೆ ಮನೆಗೆ ಧಾನ್ಯಗಳನ್ನು ತಲುಪಿಸಲಾಗುತ್ತಿತ್ತು. ಆದರೆ ಕಳೆದ 5 ತಿಂಗಳಿನಿಂದ ರಾಜ್ಯ ಸರ್ಕಾರದ ಆದೇಶದಂತೆ ನಿಲ್ಲಿಸಲಾ ಗಿದೆ. ಶಾಲೆಗಳು ಪ್ರಾರಂಭಗೊಂಡ ನಂತರ ಸರ್ಕಾರದ ಆದೇಶದಂತೆ ಆ ತಿಂಗಳ ಧಾನ್ಯವನ್ನು ವಿತರಿಸಲಿದ್ದಾರೆ. –ರಘುನಂದನ್, ಡಿಡಿಪಿಐ, ಮಂಡ್ಯ
– ಎಚ್.ಶಿವರಾಜು