ರಾಯಚೂರು : ಸಿರವಾರ ತಾಲೂಕಿನ ಎನ್.ಹೊಸೂರು ಸೇತುವೆಯು ಭಾನುವಾರ ಬೆಳಗ್ಗೆ ಮಳೆಯಿಂದ ಕುಸಿದಿದೆ.
ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಸುತ್ತ-ಮುತ್ತಲಿನ ಅನೇಕ ಹಳ್ಳಗಳು ತುಂಬಿ ಹರಿಯುತ್ತಿದ್ದು ನುಗುಡೋಣಿ ಮಾರ್ಗವಾಗಿ ಎನ್.ಹೊಸೂರು ಗ್ರಾಮಕ್ಕೆ ತೆರಳುವ ಮಧ್ಯದಲ್ಲಿ ಬರುವ ಸೇತುವೆಯು ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಕುಸಿದಿದೆ.
ಸದ್ಯಕ್ಕೆ ಬೇರೆ ಕಾಲುವೆ ಪಕ್ಕದ ರಸ್ತೆಯ ಮೂಲಕ ವಾಹನಗಳು ಸಂಚರಿಸುತ್ತಿದ್ದು , ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಭಾರಿ ಮಳೆಗೆ ಸುತ್ತ ಮುತ್ತಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ರೈತರು ಬೆಳೆದ ಬೆಳೆಗಳು ಪ್ರವಾಹದ ನೀರಿನಿಂದ ಕೊಚ್ಚಿ ಹೋಗಿದ್ದು ಇದರಿಂದ ರೈತರಿಗೆ ಸಾಕಷ್ಟು ನಷ್ಟ ಸಂಭವಿಸಿದೆ.
ಇದನ್ನೂ ಓದಿ:ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುವ ಮುಂಡಗೋಡು ಟಿಬೇಟಿಯನ್ ಕ್ಯಾಂಪ್ ಎಂಬ ಅದ್ಭುತ ತಾಣ !
ಮಳೆಯ ಹೊಡೆತಕ್ಕೆ ಕೆಲವೊಂದು ಕಡೆಗಳಲ್ಲಿ ಮನೆಗಳು ಕುಸಿದು ಬಿದ್ದಿದ್ದು ಅಪಾರ ಹಾನಿ ಸಂಭವಿಸಿದೆ.