Advertisement
ಹಿಂದೂ ಮುಸ್ಲಿಂ ಒಟ್ಟಾಗಿ ಆಚರಿಸುವ ಉರೂಸ್ ಇದಾಗಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಉರೂಸಿನಲ್ಲಿ ಹಿಂದೂ ಪುರುಷ ಮತ್ತು ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಹಿಂದೂಗಳು ಸೇರಿದಂತೆ ಮುಸ್ಲಿಂ ಬಾಂಧವರು ಇಲ್ಲಿರುವ ಸಿರಾಜಸಾನಬ್ ಮುರಾದಸಾಬ್ ತದಡಿಗೆ ಚಾದರ್ ಮತ್ತು ಹೂ ಮಾಲೆಗಳನ್ನು ಅರ್ಪಿಸುತ್ತಾರೆ. ನೂರಾರು ಹಿಂದೂ ಮಹಿಳೆಯರು ದೇವರಿಗೆ ಸಕ್ಕರೆ ನೈವೇದ್ಯವನ್ನು ಅರ್ಪಿಸುವುದರ ಜೊತೆಗೆ ಸುತ್ತ ಮುತ್ತ ಕುಳಿತ ಭಕ್ತರಿಗೆ ಸಕ್ಕರೆಯನ್ನು ಹಂಚುತ್ತಾರೆ. ಹಿಂದೂ ಪುರುಷ ಮತ್ತು ಮಹಿಳೆಯರು ಇಲ್ಲಿ ದೀರ್ಘದಂಡ ನಮಸ್ಕಾರ ಹಾಕುವುದು ವಿಶೇಷವಾಗಿದೆ.
Related Articles
Advertisement
ಅದೇ ರೀತಿಯಾಗಿ ಇಲ್ಲಿಗೆ ಬರುವವರು ದೇವರಿಗೆ ಸಕ್ಕರೆಯ ನೈವೇದ್ಯವನ್ನು ಸಲ್ಲಿಸುತ್ತಾರೆ. ಆದ್ದರಿಂದ ಹತ್ತಾರು ಕ್ವಿಂಟಲ್ ಸಕ್ಕರೆ ಕೂಡಾ ಮಾರಾಟವಾಗುತ್ತದೆ. ತದಡಿಗೆ ಹೋಗುವ ಮಾರ್ಗದಲ್ಲಿ ಅಪಾರ ಪ್ರಮಾಣದ ಸಕ್ಕರೆಯನ್ನು ಮಾರಾಟ ಮಾಡಲಾತ್ತದೆ.
ಈ ಸಂದರ್ಭದಲ್ಲಿ ನೂರಸಾಬ್ ಮುಜಾವಾರ, ಅಯೂಬಖಾನ ಹೊರಟ್ಟಿ, ವೆಂಕನಗೌಡ ಪಾಟೀಲ, ಶಂಕರೆಪ್ಪ ಭುಜರುಕ, ಮಹಾದೇವ ಚೋಳಿ, ಸತ್ಯಪ್ಪ ಮಗದುಮ್, ಶ್ರೀಶೈಲ ಮುಂಡಗನೂರ, ಅರುಣ ಬುದ್ನಿ, ಅಶೋಕ ಹಳ್ಳೂರ, ರಾಜು ಕುಲ್ಲೊಳ್ಳಿ, ರಾಮಣ್ಣ ದಳಪತಿ ಇದ್ದರು.
ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ಮಹಾರಾಷ್ಟ್ರದ ಮಿರಜ, ಸಾಂಗ್ಲಿ, ಇಚಲಕರಂಜಿ ಹಾಗೂ ಗಡಿ ಪ್ರದೇಶದ ನೂರಾರು ಜನರು ಭಾಗವಹಿಸುತ್ತಾರೆ.