Advertisement

ಹಾಸ್ಟೆಲ್‌ ವಿದ್ಯಾರ್ಥಿಗಳೇ ತಾಲೂಕಿಗೆ ಟಾಪರ್

01:13 PM May 13, 2017 | Team Udayavani |

ಹರಪನಹಳ್ಳಿ: ಹಾಸ್ಟೆಲ್‌ಗ‌ಳೆಂದರೆ ಕೇವಲ ಊಟ ವಸತಿ ನೀಡುತ್ತಿವೆ. ಅಲ್ಲಿನ ಮಕ್ಕಳು ದುರಾಭ್ಯಾಸಕ್ಕೆ ತುತ್ತಾಗುತ್ತಾರೆಂದು ಹೇಳುವವರೇ ಜಾಸ್ತಿ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಸರ್ಕಾರಿ ಹಾಸ್ಟೆಲ್‌ ನಲ್ಲಿದುಕೊಂಡು ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳೇ ಇದೀಗ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.  

Advertisement

ಕಲಾ ವಿಭಾಗದಲ್ಲಿ ರಾಜ್ಯಕ್ಕೆ 7ನೇ ರ್‍ಯಾಂಕ್‌ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಶ್ರುತಿ ವಾಲೇಕಾರ್‌ -579(96.05), ಎಸ್‌ಎಸ್‌ಎಚ್‌ ಜೈನ್‌ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡದಿರುವ ಚೈತ್ರಾ-549(91), ಜೈನ್‌ ಕಾಲೇಜ್‌ನ ಎಸ್‌.ಜಯಶ್ರೀ-571 (95.16), ಎಸ್‌ಯುಜೆಎಂ ಕಾಲೇಜಿನ ಮಾಗಳ ಸಂಗೀತಾ-569(94.83), 

ಎಸ್‌.ಗೀತಾ-561(93.05) ಎಸ್‌. ಎಂ.ಗಂಗಮ್ಮ-558(93.1) ಎಸ್‌ .ಭಾಗ್ಯ-553(92.16), ಎಸ್‌. ಕಮಲಮ್ಮ-542 (90.33), ಜೆ.ಗಜೇಂದ್ರ-559(93.17), ರವೀಂದ್ರ ಬೆಂಡಿಗೇರಿ-541(90.17), ರೆಡ್ಡಿ ಜಗದೀಶ್‌-543(90.50) ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳೆಲ್ಲರೂ ಹಿಂದುಳಿದ  ವರ್ಗಗಳ ಕಲ್ಯಾಣ ಇಲಾಖೆ(ಬಿಸಿಎಂ)ಯ ಬಾಲಕರ ಮತ್ತು ಬಾಲಕಿರ ಹಾಸ್ಟೆಲ್‌ ಮಕ್ಕಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ಕೂಲಿಕಾರ ಕುಟುಂಬದ ವೆಂಕಟೇಶ್‌ ಹಾಗೂ ಹುಲಿಗೆಮ್ಮ ದಂಪತಿಯ ಪುತ್ರಿ ಶ್ರುತಿ ವಾಲೇಕಾರ್‌ ಪ್ರಥಮ ಪಿಯುಸಿ ಬಿಸಿಎಂ ಹಾಸ್ಟೆಲ್‌  ನಲ್ಲಿಯೇ ಅಭ್ಯಾಸ ಮಾಡಿ ದ್ವಿತೀಯ ವರ್ಷ ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯಿಂದ ಕಾಲೇಜಿಗೆ ನಿತ್ಯ ಸಂಚರಿಸಿದ್ದಾರೆ. ನಮ್ಮದು ಬಡ ಕುಟುಂಬವಾಗಿದ್ದು, ತಾಯಿ ಕೂಲಿ ಮಾಡಿ ಓದಿಸುತ್ತಿದ್ದಳು.

ಪ್ರತಿನಿತ್ಯ 30 ಕಿ.ಮೀ ದೂರ ಕಾಲೇಜಿಗೆ ತೆರಳಿ ಕಷ್ಟಪಟ್ಟು ಓದಿದ್ದೇನೆ. ಉಪನ್ಯಾಸಕರ ಪ್ರೋತ್ಸಾಹದಿಂದ ರಾಜ್ಯಕ್ಕೆ 7ನೇ ರ್‍ಯಾಂಕ್‌ ಬಂದಿದ್ದು, ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಜಿಲ್ಲಾಧಿಧಿಕಾರಿಯಾಗಬೇಕೆಂಬ ಆಸೆಯಿದೆ ಎನ್ನುತ್ತಾರೆ ಶ್ರುತಿ ವಾಲೇಕಾರ್‌. ತಂದೆ-ತಾಯಿಯನ್ನು ಕಳೆದು ಕೊಂಡಿರುವ ರಾಗಿಮಲಸವಾಡ ಗ್ರಾಮದ ಡಿ.ಗಜೇಂದ್ರ 599 (93.17) ಅಂಕ ಪಡೆದು ಸಾಧನೆ ಮಾಡಿದ್ದಾನೆ.

Advertisement

ದೊಡ್ಡಪ್ಪನ ಮಕ್ಕಳ ಸಹಾಯದಿಂದ ಪ್ರೌಢ ಶಿಕ್ಷಣ ಪೂರೈಸಿ ನಂತರ ಅವರಿವರ ಸಹಾಯದಿಂದ ಹರಪನಹಳ್ಳಿಯ ಎಸ್‌ಯುಜೆಎಂ ಕಾಲೇಜಿನಲ್ಲಿ ಪಿಯುಸಿ ಪ್ರವೇಶ ಪಡೆದು ಬಿಸಿಎಂ ಹಾಸ್ಟೆಲ್‌ ಸೇರಿಕೊಂಡ. ಸ್ನೇಹಿತರು, ಗ್ರಾಂಥಾಲಯದಿಂದ ಪುಸ್ತಕ ಪಡೆದು ಕಠಿಣ ಅಭ್ಯಾಸ ಮಾಡಿ ಹೆಚ್ಚು ಅಂಕ ಗಳಿಸಿದ್ದಾನೆ. ಆದರೆ ಸಂತೋಷವನ್ನು ಸಂಭ್ರಮಿಸಲು ಪೋಷಕರೇ ಇಲ್ಲ.

ಪ್ರಾಥಮಿಕ ಹಂತದಲ್ಲಿ ಶಿಕ್ಷಕಿ ಕೋಟ್ರಮ್ಮ, ಪ್ರೌಢ ಶಾಲೆಯ ಶಿಕ್ಷಕ ನಾಗರಾಜ್‌, ಪಿಯುಸಿಯಲ್ಲಿ ಸೀತರಾಮ ಹೆಗಡೆ, ವಾರ್ಡ್‌ನ್‌ ಬಿ.ಎಚ್‌.ಚಂದ್ರಪ್ಪ ಗಜೇಂದ್ರನಿಗೆ ತಂದೆ-ತಾಯಿ ಇಲ್ಲವೆಂಬ ಕೊರಗು ದೂರ ಮಾಡಿದ್ದಾರೆ. ಕಷ್ಟಪಟ್ಟು ಓದಿ ಜಿಲ್ಲಾಧಿಧಿಕಾರಿಯಾಗಬೇಕು ಎಂಬ ಕನಸು ಗಜೇಂದ್ರನಿಗಿದೆ. ಬಿಸಿಎಂ ಬಾಲಕರ ಹಾಸ್ಟೆಲ್‌ನಲ್ಲಿ ಪರೀಕ್ಷೆ ಬರೆದ 34 ವಿದ್ಯಾರ್ಥಿಗಳಲ್ಲಿ 33 ಜನರು ಪಾಸಾಗಿದ್ದಾರೆ.

16-ಡಿಸ್ಟಂಕ್ಷನ್‌, 16-ಪ್ರಥಮ ಶ್ರೇಣಿ, 1 ದ್ವೀತಿಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಹಾಸ್ಟೆಲ್‌ನಲ್ಲಿ ಮಕ್ಕಳು ಸ್ಪರ್ಧಾತ್ಮಕ ವಿಷಯಗಳಿಗೆ ಅಣಿ ಮಾಡಲು ಗ್ರಂಥಾಲಯ ಸ್ಥಾಪಿಸಿ ಅಪಾರ ಪುಸ್ತಕ ಭಂಡಾರದ ಸಂಗ್ರಹವಿದೆ. ಹಾಸ್ಟೆಲ್‌ನ “ದಾರಿ ದೀಪ’ ಎಂಬ ವೇದಿಕೆ ಮೂಲಕ 2 ತಿಂಗಳಿಗೊಮ್ಮೆ ಸಂಪನ್ಮೂಲ ವ್ಯಕ್ತಿಗಳಿಂದ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕೆಂಬ ಮಾರ್ಗದರ್ಶನ ನೀಡಲಾಗುತ್ತಿದೆ. ಇಲ್ಲಿನ ವಾರ್ಡ್‌ ಚಂದ್ರಪ್ಪ ಅವರು ಪ್ರತಿ ಮಕ್ಕಳ ಬಗ್ಗೆ ಕಾಳಜಿವಹಿಸಿ ಹೆಚ್ಚಿನ ಅಂಕ ಪಡೆಯುವಂತೆ ಪ್ರೇರಣೆ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next