Advertisement
ಬಂದ ಮೊದಲ ದಿನ ಯಾರು ಪರಿಚಯವಿಲ್ಲವೇ, ಎಲ್ಲರೂ ಅಪರಿಚಿತರು ನಿಜವಾಗಿಯೂ ಆಗ ನೆನಪಾಗೋದು ಅಮ್ಮನ ಕೈ ರುಚಿ ಮತ್ತೆ ಅಪ್ಪನ ಕಾಳಜಿ. ಹಾಸ್ಟೆಲಿನ ಕೆಲವು ನಿಯಮ ಗೊತ್ತಿಲ್ಲದೇ ಮೊದಲ ದಿನವೇ ಮಾಡಿದ ಅನೇಕ ತಪ್ಪುಗಳು, ಈ ನಿಯಮಗಳಿಗೆ ಹೊಂದಿಕೊಂಡು ಹೋದರೆ ನಿಜವಾಗಿಯೂ ಹಾಸ್ಟೆಲ್ ಒಂದು ಅದ್ಬುತ ಜೀವನ. ನನ್ನ ಜೀವನದ ಪಠ್ಯದಲ್ಲಿ ಹಾಸ್ಟೆಲ್ ಅನುಭವ ಒಂದು ಹೊಸ ಅಧ್ಯಯವೇ ಸರಿ.
Related Articles
Advertisement
ಅಷ್ಟೇ ಅಲ್ಲದೆ, ಹಾಸ್ಟೆಲ್ ನಲ್ಲಿ ಆಚರಿಸುವ ಕೆಲವೊಂದು ಹಬ್ಬಗಳು, ಅಲ್ಲಿ ನಾವು ಸೇರಿಕೊಂಡು ಮಾಡಿದ ಕಿತಾಪತಿಗಳು, ತರ್ಲೆಯಿಂದ ಮಾಡಿದ ಆಯೋಜನೆಗಳು ಎಲ್ಲವೂ ಒಂದು ರೀತಿಯ ಅವಿಸ್ಮರಣೀಯ ನೆನಪುಗಳು, ಸಿಹಿತಿಂಡಿ ಯನ್ನು ಹಂಚಿ ತಿಂದು ಕೊಂಡು ಖುಷಿಯಿಂದ ಕಳೆಯುತ್ತಿದ್ದ ದಿನ. ಮನೆಯೆಂಬ ಒಂದೇ ಸೂರಿನಡಿ ಎಲ್ಲಾ ಪಾತ್ರಗಳು ಮನಸ್ಸಿಗೆ ಸನಿಹ .
ಇದು ಹಾಸ್ಟೆಲ್ ಅಂತ ತಿಳಿದಿದ್ದರೂ ನಾವೆಲ್ಲರೂ ಒಂದೇ, ಎಲ್ಲರೂ ನಮ್ಮವರೇ ಎನ್ನುವ ಅರಿವು. ಕಷ್ಟನೋ, ಸುಖಾನೋ ದಿನ ಬೆಳಗಾದರೆ ಒಬ್ಬರನ್ನು ಒಬ್ಬರು ನೋಡಿಕೊಂಡು ದಿನನಿತ್ಯದ ಕೆಲಸದಲ್ಲಿ ತೊಡಗಿಕೊಂಡು ತಾನು ಕಂಡಂತಹ ಹಾಗೂ ಮನೆಯವರು ಹೆಗಲೇರಿಸಿ ಕೊಟ್ಟಂತಹ ಕನಸಿಗೆ ಪ್ರತಿದಿನವೂ ಹಿಡಿಯಷ್ಟು ಪ್ರಯತ್ನ ಹಾಕಿ ಜೀವನದ ಗುರಿಯ ಮೆರೆಯನ್ನು ದಾಟುವ ತವಕ ಒಂದೆಡೆಯಾದರೆ ತನ್ನದಲ್ಲದ ಊರಿನಲ್ಲಿ ತನ್ನತನವನ್ನು ಕಾಪಾಡಿಕೊಂಡು ತನ್ನವರಿಗಾಗಿ ನಿತ್ಯವೂ ಹಂಬಲಿಸಿದೆ ಮನ.
ಹಾಗೆಂದ ಮಾತ್ರಕ್ಕೆ ಹಾಸ್ಟೆಲ್ ಜೀವನವೆಂದರೆ ಕೇವಲ ಭಾವನೆಯನ್ನ ವ್ಯಕ್ತಪಡಿಸುವುದಲ್ಲ ಬದಲಾಗಿ ಇಂಚಿಂಚು ಭಾವನೆಗಳನ್ನು ನಾಲ್ಕು ಗೋಡೆಯ ಮಧ್ಯದಲ್ಲಿ ಇದ್ದುಕೊಂಡು ಯಾರಿಗೂ ಗೊತ್ತಾಗದ ಹಾಗೇ ಅನುಭವಿಸುವುದು.
ಅಷ್ಟೇ ಅಲ್ಲದೇ ಹಾಸ್ಟೆಲ್ ಜೀವನ ಎಂದರೆ ಅಲ್ಲಿ ಬರುವುದು ಹೋಗುವುದು ಇದ್ದಿದ್ದೆ. ಏನು ಮಾಡುವುದು ಜೀವನವೆಂಬುವುದು ಮತ್ತು ಸಮಯವೆಂಬುವುದು ಯಾರಿಗಾಗಿಯೂ ಕಾಯುವುದಿಲ್ಲ.
ಜೀವನ ಎಂಬುದು ಒಂದು ಬಸ್ ಪ್ರಯಾಣ ಇದ್ದಂತೆ ನಾವು ತಲುಪುವ ನಿಲ್ದಾಣ ಬಂದಂತೆ ಯಾರಿಗೂ ಕಾಯದೇ ಇಳಿದು ಹೋಗುತ್ತಾ ಇರಬೇಕು ಹಾಗೆಯೇ ಹಾಸ್ಟೆಲ್ ಜೀವನ ಯಾರನ್ನೂ ಎಷ್ಟು ಹಚ್ಚಿಕೊಂಡಿದ್ದರೂ, ಮುದ್ದು ಮಾಡಿ ನೋಡಿಕೊಂಡಿದ್ದರು ನಾವು ಹೋಗುವ ಸಮಯ ಬಂದಾಗ ಎದೆಯಲ್ಲಿ ನೋವಿನ ಬಾರವನ್ನು ಹೊತ್ತುಕೊಂಡು ಕಣ್ಣಲ್ಲಿ ನೀರನ್ನು ತುಂಬಿಕೊಂಡು ಭಾರವಾದ ಮನಸ್ಸಿನಿಂದ ಹೋಗಲೇಬೇಕು.
ಏಕೆಂದರೆ, ಅಗಲಿಕೆ ಎಂಬುದು ಅನಿವಾರ್ಯ ಹಾಗಾಗಿ ಯಾವ ವಿಶ್ವವಿದ್ಯಾನಿಲಯವು ಕಲಿಸಿಕೊಡದಂತಹ ಪಾಠ ಹಾಸ್ಟೆಲ್ ಕಲಿಸಿಕೊಡುತ್ತದೆ ಹೆಮ್ಮೆಯಿಂದ ಹೇಳುತ್ತೇನೆ ಗರ್ವದಿಂದ ಬೀಗುತ್ತೇನೆ.ಮತ್ತೂಮ್ಮೆ ಈ ಹಾಸ್ಟೆಲ್ ಜೀವನದ ಪಯಣಕ್ಕೆ ನಾನೆಂದೂ ಚಿರಋಣಿ.
-ನಾಗಮಣಿ ಈ.
ಎಂಜಿಎಂ ಕಾಲೇಜು ಉಡುಪಿ