Advertisement

ಹಾಸ್ಟೆಲ್‌ ಮಕ್ಕಳಿಗೆ 3 ತಿಂಗಳಿಂದ ಅಕ್ಕಿಯಿಲ್ಲ 

04:09 PM Jan 26, 2022 | Team Udayavani |

ಮಧುಗಿರಿ: ದೇಶದ ಸಂವಿಧಾನದಲ್ಲಿ ಮಕ್ಕಳಿಗೆ ಅನ್ನದ ಹಾಗೂ ಶಿಕ್ಷಣದ ಹಕ್ಕು ನೀಡಿದ್ದರೂ, ಈಗಿನ ಸರ್ಕಾರ 3 ತಿಂಗಳಿಂದ ಬಡವರ ಮಕ್ಕಳೇ ಹೆಚ್ಚಾಗಿವಿದ್ಯಾಭ್ಯಾಸ ಮಾಡುವ ಹಾಸ್ಟೆಲ್‌ಗೆ ಅಕ್ಕಿ ಪೂರೈಕೆ ಮಾಡದೆ ಅನ್ಯಾಯವೆಸಗುತ್ತಿದೆ.

Advertisement

ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ 18 ಹಾಸ್ಟೆಲ್‌ಗ‌ಳಿದ್ದು, 800-900 ವಿದ್ಯಾರ್ಥಿಗಳುಆಶ್ರಯ ಪಡೆದಿದ್ದಾರೆ. ಅಲ್ಪಸಂಖ್ಯಾತ ಮೊರಾರ್ಜಿವಸತಿ ಶಾಲೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳು ದಾಖಲಾ ಗಿದ್ದು, 80 ಹೆಚ್ಚುವರಿ ಮಕ್ಕಳು ಹಾಸ್ಟೆಲ್‌ನಲ್ಲಿದ್ದಾರೆ. ಇನ್ನು ಕ್ರೈಸ್‌ ಸಂಸ್ಥೆಯಡಿ ಬರುವ 3 ಎಸ್ಟಿ, 2 ಎಸ್ಸಿ ಹಾಗೂ1 ಹಿಂದುಳಿದ ವರ್ಗ ಸೇರಿದಂತೆ 2 ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗಳು, 2 ಡಾ. ಬಿ. ಆರ್‌.ಅಂಬೇಡ್ಕರ್‌ ವಸತಿ ಶಾಲೆ, ಹಾಗೂ 2 ಮೊರಾರ್ಜಿ ವಸತಿ ಶಾಲೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ.

ಇವುಗಳಲ್ಲಿ ತಲಾ 250 ಮಕ್ಕಳಿಗೆ ವಿದ್ಯಾಭ್ಯಾಸದಜೊತೆಗೆ ಅನ್ನದಾಸೋಹ ನಡೆಯುತ್ತಿದ್ದು, ಒಟ್ಟು1,500ಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ.ಇವುಗಳಲ್ಲಿ ಸಮಾಜ ಕಲ್ಯಾಣ ಇಲಾಖೆ 18 ವಸತಿನಿಲಯಗಳಿಗೆ ಮಾಹೆಗೆ ತಲಾ 5 ಕ್ವಿಂಟಲ್‌ ಅಕ್ಕಿಯಅವಶ್ಯಕತೆಯಿದ್ದು, 2 ಅಲ್ಪಸಂಖ್ಯಾತ ವಸತಿ ಶಾಲೆಗಳಿಗೆ ದಿನಕ್ಕೆ 5 ಕ್ವಿಂಟಲ್‌ ಅಕ್ಕಿ ಬೇಕಾಗುತ್ತದೆ. ಆದರೆ, ಕ್ರೈಸ್‌ಸಂಸ್ಥೆಯ 1 ವಸತಿ ನಿಲಯಕ್ಕೆ ತಿಂಗಳಿಗೆ 25 ಕ್ವಿಂಟಲ್‌ಅಕ್ಕಿಯ ಅವಶ್ಯಕತೆಯಿದೆ. ಬಡವರ ಪ್ರತಿಭಾವಂತಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಂತಹ ದೂರದೃಷ್ಟಿಯಕಾರ್ಯಕ್ರಮ ಹಿಂದಿನ ಸರ್ಕಾರ ನೀಡಿದ್ದು, ಈಗಿನಸರ್ಕಾರ 3 ತಿಂಗಳಿಂದ ಅಕ್ಕಿ ನೀಡದೆ ಸತಾಯಿಸುತ್ತಿದೆ.

ಶೇ.80ರಷ್ಟು ಮಕ್ಕಳು ದಲಿತರು: ಇಷ್ಟೂ ವಸತಿ ನಿಲಯಗಳಲ್ಲಿನ ಶೇ.80ರಷ್ಟು ಮಕ್ಕಳು ದಲಿತವರ್ಗದಿಂದ ಬಂದಿದ್ದು, ಉಳಿದವರು ಹಿಂದುಳಿದವರ್ಗಕ್ಕೆ ಸೇರಿದವರಾಗಿದ್ದಾರೆ. ಇಲ್ಲಿ ಜಾತಿ,ವಿಚಾರವಲ್ಲದೆ ಬಡತನದಿಂದ ಬಂದರೂ,ಪ್ರತಿಭೆಯನ್ನು ಹೊತ್ತು ಬಂದವರೇ ಹೆಚ್ಚಾಗಿದ್ದಾರೆ.ಇಂತಹ ಕಾರ್ಯಕ್ರಮಕ್ಕೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಅಕ್ಕಿ ನೀಡದೆ ಕಾಲಹರಣಮಾಡುತ್ತಿದೆ. ಆದರೆ, ಹಿಂದುಳಿದ ವರ್ಗಗಳಕಲ್ಯಾಣ ಇಲಾಖೆಯಡಿ(ಬಿಸಿಎಂ) ಬರುವ 8ವಸತಿ ನಿಲಯಗಳ 500 ಮಕ್ಕಳಿಗೆಮಾರ್ಚವರೆಗೂ ಅಕ್ಕಿಯ ಸಮಸ್ಯೆಯಿಲ್ಲ.

ವಾರ್ಡನ್‌ ಸಮಸ್ಯೆ ಕೇಳ್ಳೋರಿಲ್ಲ: ಇಂತಹ ವಸತಿ ಶಾಲೆಗಳಲ್ಲಿ ಮೆನುವಿನ ಪ್ರಕಾರವೇ ಆಹಾರನೀಡಬೇಕು. ಇದಕ್ಕೆಲ್ಲ ಅಕ್ಕಿ ಕಚ್ಚಾ ಪದಾರ್ಥವಾಗಿದ್ದು,ಹಣವೂ ನೀಡದೆ ಅಕ್ಕಿಯನ್ನು ತನ್ನಿ ಎಂದು ವಾರ್ಡನ್‌ಗಳ ಮೇಲೆ ಹಿರಿಯ ಅಧಿಕಾರಿಗಳು ಒತ್ತಡಹಾಕುತ್ತಿದ್ದು, ನಿಲಯ ಪಾಲಕರಿಗೆ ದಿಕ್ಕುತೋಚದಾಗಿದೆ. ಸರಿಯಾಗಿ ವೇತನ ಕೂಡ ನೀಡದೇ, ಈ ರೀತಿ ದವಸಕ್ಕೂ ಹಣ ನೀಡದೆ ಮಕ್ಕಳಿಗೆಅನ್ನ ಹಾಕು ಎಂದರೆ ಹೇಗೆ ಸಾಧ್ಯ. ಮಕ್ಕಳಲ್ಲಿ ನಮ್ಮಮಕ್ಕಳನ್ನು ಕಾಣುವ ನಾವು, ಸಾಲ ಮಾಡಿಕೊಂಡುಅಂಗಡಿಯವರ ಬಳಿ ಸಾಲದಿಂದ ಅಕ್ಕಿ ತಂದುಮಕ್ಕಳಿಗೆ ಅಡುಗೆ ಮಾಡಿ ಹಾಕುತ್ತಿದ್ದೇವೆ.2021 ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿಜಿಲ್ಲೆಯ ಸಗಟು ಮಳಿಗೆಯಲ್ಲಿರುವ ಜಿಒಐದಾಸ್ತಾನನ್ನು ಇತರೆ ಬಳಕೆಗೆ ಬಳಸದೆ ವಸತಿ ನಿಲಯಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲು ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯ ಜಿಲ್ಲಾಅಧಿಕಾರಿಗಳಿಗೆ ಸೂಚಿಸಿದ್ದರೂ, ಯಾವುದೇ ಕ್ರಮಜರುಗಿಸದೆ ಅಕ್ಕಿ ನೀಡುತ್ತಿಲ್ಲ ಎಂದು ವಾರ್ಡ್‌ನ್‌ ಗೋಳು ತೋಡಿಕೊಂಡಿದ್ದಾರೆ.

Advertisement

ಸರ್ಕಾರದ ಮಟ್ಟದಲ್ಲೇ ಸಮಸ್ಯೆ :

ಮೂಲಗಳ ಪ್ರಕಾರ ಹಾಸ್ಟೆಲ್‌ಗ‌ಳಲ್ಲಿನ ಅಕ್ಕಿ ಎತ್ತುವಳಿಯಾಗಿದೆ ಎಂದು ಜಿಲ್ಲಾಮಟ್ಟದಲ್ಲಿದಾಖಲೆಯಿದೆ. ಆದರೆ, ಕೇಂದ್ರ ಆಹಾರ ಇಲಾಖೆ ಪ್ರಕಾರ ಎತ್ತುವಳಿಯಾಗಿಲ್ಲ ಎಂದು ನಮೂದಿಸಿದ್ದು, ಈ ತಿಕ್ಕಾಟದಲ್ಲಿ ಸಮನ್ವಯ ಸಾಧಿಸದ ಕಾರಣ 3 ತಿಂಗಳಿಂದ ಹಾಸ್ಟೆಲ್‌ಗ‌ಳಿಗೆ ಅಕ್ಕಿ ಸರಬರಾಜು ಮಾಡಿಲ್ಲ. ಇದು ಸರ್ಕಾರದ ಮಟ್ಟದಲ್ಲೇ ಬಗೆಹರಿಯಬೇಕಾದ ಸಮಸ್ಯೆಯಾಗಿದ್ದು, ಮಕ್ಕಳಿಗೆ ಅಕ್ಕಿ ನೀಡಲು ಕಾನೂನು ಅಡ್ಡವಾಗಿದ್ದು ಬೇಗ ಪರಿಹಾರ ಕಂಡುಕೊಳ್ಳಬೇಕಿದೆ.

ನಮ್ಮ ಇಲಾಖೆಯ ಹಾಸ್ಟೆಲ್‌ಗ‌ಳಿಗೆ ಅಕ್ಕಿ ಪೂರೈಕೆ ಮಾಡಲು ಸರ್ಕಾರದಆದೇಶವಾಗಬೇಕು. ಇದು ಕೇಂದ್ರಆಹಾರ ಇಲಾಖೆಯಲ್ಲಿ ಕೆಲಗೊಂದಲಗಳು ಉಂಟಾಗಿದ್ದುಸಮಸ್ಯೆಯಾಗಿದೆ. ಇದು ತಿಳಿಯಾದರೆ ಅಕ್ಕಿ ಪೂರೈಕೆ ಎಂದಿನಂತೆ ನಡೆಯಲಿದೆ. -ತ್ಯಾಗರಾಜ್‌, , ಡಿಟಿಡಬ್ಲ್ಯೂ

ಸರ್ಕಾರದಿಂದ ಇಲಾಖೆಗೆ ಆದೇಶ ಬರುವವರೆಗೂ ಪಡಿತರ ಕೇಂದ್ರಗಹೊರತು, ಬೇರೆ ಕಡೆ ಅಕ್ಕಿ ಎತ್ತುವಳಿ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಇದುಸರ್ಕಾರದ ಮಟ್ಟದಲ್ಲೇ ಬಗೆಹರಿಯಬೇಕಿದೆ. -ಶ್ರೀನಿವಾಸಯ್ಯ, ಆಹಾರ ಇಲಾಖೆ, ಜೆಡಿ, ತುಮಕೂರು

-ಮಧುಗಿರಿ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next