Advertisement

Gaza: ಒತ್ತೆಯಾಳು,ಕೈದಿಗಳ ಬಿಡುಗಡೆ ಪ್ರಕ್ರಿಯೆ ಶುರು- ಗಾಜಾದಲ್ಲಿ 4 ದಿನಗಳ ಕದನ ವಿರಾಮ ಜಾರಿ

09:30 PM Nov 24, 2023 | Team Udayavani |

ದೇರ್‌ ಅಲ್‌-ಬಾಲಾ: ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಬಹು ನಿರೀಕ್ಷಿತ ನಾಲ್ಕು ದಿನಗಳ ಕದನ ವಿರಾಮ ಶುಕ್ರವಾರದಿಂದ ಜಾರಿಯಾಗಿದೆ. ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಪ್ಯಾಲೆಸ್ತೀನಿ ಕೈದಿಗಳನ್ನು ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೂ ಮುನ್ನ ಇಸ್ರೇಲ್‌ ದಾಳಿಯನ್ನು ಸ್ಥಗಿತಗೊಳಿಸಿದೆ. ಅದಕ್ಕೆ ಪೂರಕವಾಗಿ 13 ಮಂದಿ ಒತ್ತೆಯಾಳುಗಳನ್ನು ಹಮಾಸ್‌ ಉಗ್ರರು ಬಿಡುಗಡೆ ಮಾಡುವ ಸಾಧ್ಯತೆ ಇದೆ.

Advertisement

ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕುಡಿವ ನೀರು, ಔಷಧ, ಶಸ್ತ್ರಚಿಕಿತ್ಸಾ ಉಪಕರಣಗಳು, ಆಹಾರ ಸೇರಿದಂತೆ ಹಲವು ಗಾಜಾ ಪಟ್ಟಿಯ ಜನರಿಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಹೊತ್ತಿರುವ ಕನಿಷ್ಠ 200 ಟ್ರಕ್‌ಗಳು ಯುದ್ಧದಿಂದ ಜರ್ಝರಿತವಾಗಿರುವ ಪ್ರದೇಶವನ್ನು ಪ್ರವೇಶ ಮಾಡಿವೆ. ಇದರಿಂದಾಗಿ ಗಾಜಾ ಪಟ್ಟಿಯಲ್ಲಿರುವ 23 ಲಕ್ಷ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಇದೇ ವೇಳೆ, ಹಮಾಸ್‌ ಉಗ್ರ ಸಂಘಟನೆ ಕೂಡ ಕದನ ವಿರಾಮ ನಿಯಮಗಳಿಗೆ ಬದ್ಧವಾಗಿರುವುದಾಗಿಯೂ ಹೇಳಿದೆ. ಇನ್ನೊಂದೆಡೆ, ನಾಲ್ಕು ದಿನಗಳಿಗೆ ಮಾತ್ರ ಕದನ ವಿರಾಮ ಎಂದು ಹೇಳಿಕೊಂಡಿರುವ ಇಸ್ರೇಲ್‌ ಸೇನಾ ಪಡೆ, ಯುದ್ಧ ಇನ್ನೂ ಮುಕ್ತಾಯವಾಗಿಲ್ಲ ಎಂದು ಸುಳಿವು ನೀಡಿದೆ. ಹಮಾಸ್‌ ಜತೆಗೆ ಮಾಡಿಕೊಂಡ ಕದನ ವಿರಾಮ ಮಾತ್ರ ಇದಾಗಿದ್ದು, ಲೆಬನಾನ್‌ನ ಉಗ್ರ ಸಂಘಟನೆ ಹೆಜ್ಬುಲ್ಲಾ ಜತೆಗೆ ಇಂಥ ಒಪ್ಪಂದ ಆಗಿಲ್ಲದಿರುವುದರಿಂದ ಅಲ್ಲಿ ಯುದ್ಧ ಮುಂದುವರಿಯುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next