ಕೋಲಾರ: ನಗರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆಗಳಿಲ್ಲ ಎಂಬುದನ್ನು ಖುದ್ದು ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿರುವ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮುಖಂಡರಾದ ವಿ.ಗೀತಾ ಬಹಿರಂಗಪಡಿಸಿದ್ದಾರೆ.
ಕೊರೊನಾ ಸೋಂಕಿತರಾಗಿ ಮಂಗಳವಾರ ಆಸ್ಪತ್ರೆಗೆ ದಾಖಲಾಗಿರುವ ವಿ.ಗೀತಾ, ಈ ಕುರಿತು ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು, ಅವು ವೈರಲ್ ಆಗಿ ಆಸ್ಪತ್ರೆಯ ವಾಸ್ತವ ಚಿತ್ರಣ ಕುರಿತು ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದೆ.ವಿಡಿಯೋದಲ್ಲಿ ಮಾಸ್ಕ್ ಧರಿಸಿಯೇ ಮಾತನಾಡಿರುವ ವಿ.ಗೀತಾ, ತಾವು ಮಂಗಳವಾರ ಆಸ್ಪತ್ರೆಗೆದಾಖಲಾಗಿ ನಾಲ್ಕು ಗಂಟೆ ಆಗಿತ್ತು.
ಹಾಸಿಗೆ ಕೊಟ್ಟುಮುಖಕ್ಕೆ ಆಮ್ಲಜನಕ ಮಾಸ್ಕ್ ಹಾಕಿ ಹೋದ ನಂತರ ಯಾರೂ ಸೋಂಕಿತರತ್ತ ತಿರುಗಿ ನೋಡುತ್ತಿಲ್ಲ. ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಆರು ವಾರ್ಡ್‌ಗಳಲ್ಲಿ ಕೊರೊನಾ ಸೋಂಕಿತರಿದ್ದು, ಕೇವಲ ಮೂವರುಮಾತ್ರವೇ ನರ್ಸ್‌ಗಳಿದ್ದಾರೆ, ತಾವು ಪರಿಚಯವಿದ್ದ ಸಿಬ್ಬಂದಿಗೆ ಹೇಳಿದ ನಂತರವಷ್ಟೇ ತಮಗೆ ಇಂಜೆಕ್ಷನ್ ನೀಡಿ ಹೋಗಿದ್ದಾರೆ.
ಉಳಿದಂತೆ ಬೇರೆ ಯಾವ ಸೋಂಕಿತರನ್ನು ಗಮನಿಸುತ್ತಿಲ್ಲ. ಇದರಿಂದಲೇ ಇಡೀ ರಾಜ್ಯದಲ್ಲಿಯೇ ಕೋಲಾರ ಆಸ್ಪತ್ರೆಯಲ್ಲಿ ಸೋಂಕಿತರ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ.ವಾರ್ಡ್‌ನಲ್ಲಿ ಸಂಗ್ರಹಿಸಿರುವ ಕಸದ ಬುಟ್ಟಿಗಳನ್ನು ಅದೇ ವಾರ್ಡ್‌ನ ಮೂಲೆಯಲ್ಲಿಯೇ ಇಡಲಾಗಿದೆ.ಸ್ವತ್ಛಗೊಳಿಸು ಯಾರೂ ಬರುತ್ತಿಲ್ಲ. ಈ ಕುರಿತು ಡೀಸಿ ಸೇರಿದಂತೆ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿದರೂ ಯಾರೂ ಸ್ಪೀಕರಿಸುತ್ತಿಲ್ಲ.
ರಾತ್ರಿಯಷ್ಟೇ ಸಚಿವರೊಬ್ಬರು ಬಂದು ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಒಂದಿಬ್ಬರು ಅಮಾನತು ಮಾಡಿದಷ್ಟಕ್ಕೆ ವ್ಯವಸ್ಥೆ ಸರಿ ಹೋಗುವುದಿಲ್ಲ. ಸಚಿವರುಮತ್ತು ಅಧಿಕಾರಿಗಳು ಆಸ್ಪತ್ರೆಯ ಲೋಪಗಳನ್ನುಸರಿಪಡಿಸಿ ಎಲ್ಲಾ ಸಾಮಾನ್ಯ ಸೋಂಕಿತರಿಗೂ ಸೂಕ್ತಚಿಕಿತ್ಸೆ ಸಿಗುವಂತೆ ಮಾಡಬೇಕಾಗಿದೆ ಎಂದು ಮನವಿಮಾಡಿದ್ದಾರೆ.
ಕೋಲಾರ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿಸೋಂಕಿತರ ಸಾವುಗಳು ಸಂಭವಿಸಿದ ನಂತರ ಆರೋಗ್ಯಸಚಿವ ಡಾ.ಸುಧಾಕರ್, ಡೀಸಿಎಂ ಡಾ.ಅಶ್ವತ್ಥ ನಾರಾಯಣ ಭೇಟಿ ಕೊಟ್ಟು ಹೋದ ಕೆಲವೇ ಹೊತ್ತಿನಲ್ಲಿ ವಿ.ಗೀತಾರ ವಿಡಿಯೋ ವೈರಲ್ ಆಗಿತ್ತು.