Advertisement

ಆಸ್ಪತ್ರೆ ಸಿಬಂದಿ ಕಾಳಜಿ, ಸೇವೆ ಅನನ್ಯ

12:08 PM Apr 12, 2020 | Sriram |

ಕಾಸರಗೋಡು: ಕೋವಿಡ್‌ 19 ಸೋಂಕು ಬಾಧಿತರ ಶುಶ್ರೂಷೆ ನಡೆಸುವಲ್ಲಿ ಕಾಸರಗೋಡು ಸರಕಾರಿ ಜನರಲ್‌ ಆಸ್ಪತ್ರೆಯ ಸಿಬಂದಿಗೆ ಶೇ. 100 ಅಂಕ ನೀಡಬಹುದು ಎಂದು ಮಿನ್‌ಶಾದ್‌ ಹೇಳಿದ್ದಾರೆ.

Advertisement

ಕೋವಿಡ್‌ 19 ಸೋಂಕು ಖಚಿತಗೊಂಡ ಪರಿಣಾಮ ಉದುಮ ಮುಲಚ್ಚೇರಿ ನಿವಾಸಿ, ಎಸ್‌. ಮಿನ್‌ಶಾದ್‌ (31) ಕಾಸರಗೋಡು ಸರಕಾರಿ ಜನರಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಮಾ. 21ರಂದು ತಡರಾತ್ರಿ ಕೊಲ್ಲಿ ರಾಷ್ಟ್ರದ ನೈಫ್‌ ವಲಯದಿಂದ ನಾಲ್ವರು ಗೆಳೆಯರೊಂದಿಗೆ ಮಿನ್‌ಶಾದ್‌ ಅವರು ನೆಡುಂಬಾಶೆÏàರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ಅವರ ರಕ್ತದ ಮಾದರಿ ಸಂಗ್ರಹಿಸಿ ಆ್ಯಂಬುಲೆನ್ಸ್‌ ಮೂಲಕ ಮನೆಗೆ ಕರೆತರಲಾಗಿತ್ತು. ಮಿನ್‌ಶಾದ್‌ ಅವರ ತಾಯಿ, ಸಹೋದರರನ್ನು ಮೊದಲೇ ಸಂಬಂಧಿಕರ ಮನೆಗೆ ಸ್ಥಳಾಂತರಿಸಿ, ಏಕಾಂತ ವಾಸಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರೋಗ ಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ, ಎ. 10ರಂದು ಡಿಸಾcರ್ಜ್‌ ಆಗಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ನಡುವೆಯೂ ಪ್ರತಿ ರೋಗಿಯ ಬಗ್ಗೆ ಕಾಳಜಿ ಹೊಂದಿರುವ ಆಸ್ಪತ್ರೆಯ ಸಿಬಂದಿ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಅವರ ಸೇವೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ತಿಳಿಸಿದ್ದಾರೆ.

ಮಗುವನ್ನೂ ನೋಡಿಲ್ಲ
ಈಗ ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದಮುಲ್ಲಚ್ಚೇರಿಯ ತಮ್ಮ ಮನೆಗೆ ತೆರಳಿದ್ದಾರೆ. ರೋಗದ ಶಂಕೆ ಇರುವ ಇಬ್ಬರು ಗೆಳೆಯರು ಮಾತ್ರ ಅಲ್ಲಿದ್ದಾರೆ. ಕೇವಲ 30 ದಿನಗಳ ಪ್ರಾಯದ ತಮ್ಮ ಎರಡನೇ ಮಗುವನ್ನು ನೋಡುವುದಕ್ಕೂ ಮಿನ್‌ಶಾದ್‌ ಅವರಿಗೆ ಅವಕಾಶವಾಗಿಲ್ಲ, ಅದಕ್ಕೆ ಇನ್ನೂ ಕೆಲವು ದಿನ ಕಳೆಯಬೇಕಿದೆ. ಇನ್ನೂ 14 ದಿನ ರೂಮ್‌ ಕ್ವಾರಂಟೈನ್‌ನಲ್ಲಿ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರ ಪತ್ನಿ, ಮೂರುವರೆ ವರ್ಷದ ಪುತ್ರಿ ಹಾಗೂ ನವಜಾತ ಶಿಶು ಪತ್ನಿಯ ತಾಯಿ ಮನೆಯಲ್ಲೇ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next