ಹೊಸಪೇಟೆ: ವಿದ್ಯುತ್ ತಂತಿ ಸ್ಪರ್ಶಿಸಿ 17 ಕುರಿಗಳು ಸಾವನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಗ್ರಾಮದ ಜಮೀನು ಪ್ರದೇಶದಲ್ಲಿ ಜು.17 ರ ಸೋಮವಾರ ನಡೆದಿದೆ.
ಹನುಮಜ್ಜರ ಪರಸಪ್ಪ ಎಂಬ ಕುರಿಗಾಹಿಗೆ ಸೇರಿದ 13 ಕುರಿ, 2 ಟಗರು, 2 ಮೇಕೆಗಳು ಸೇರಿ ಒಟ್ಟು 17 ಕುರಿಗಳು ಸಾವನಪ್ಪಿವೆ.
ಮೇಯಲು ಹೋದ ಕುರಿಗಳು, ಜಮೀನಿನಲ್ಲಿ ಹಾದು ಹೋಗಿರುವ 11 ಕೆವಿ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿ ಮೃತಪಟ್ಟಿದ್ದು, ಅದೃಷ್ಟವಶಾತ್ ಕುರಿಗಾಹಿ ಪರಸಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ಪಶು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುರಿ ಸಾಕಾಣಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದ ಕುಗಾಹಿ ಪರಸಪ್ಪಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.