Advertisement

ಕೋವಿಡ್ ನಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ

06:06 PM May 14, 2020 | Naveen |

ಹೊಸಪೇಟೆ: ಪ್ರಧಾನಿ ಮೋದಿಯವರ ಸಮರ್ಥ ಆಡಳಿತದ ಪರಿಣಾಮ ದೇಶದಲ್ಲಿ ಕೋವಿಡ್ ನಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹೇಳಿದರು.

Advertisement

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ವೈರಸ್‌ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ವಿಶ್ವದ ಬಲಾಡ್ಯ ರಾಷ್ಟ್ರಗಳು, ನಲುಗಿಹೋಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ತರುವಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅಮೆರಿಕಾ, ಇಟಲಿಯಂತಹ ಬಲಿಷ್ಠ ರಾಷ್ಟ್ರಗಳು ಕೊರೊನಾ ಹೊಡೆತಕ್ಕೆ ಸಂಕಷ್ಟ ಅನುಭವಿಸಿವೆ. ಬೇರೆ ದೇಶಕ್ಕೆ ಹೋಲಿಕೆ ಮಾಡಿದರೆ, ನಮ್ಮ ದೇಶದಲ್ಲಿ ಹೆಚ್ಚಿನ ಹಾನಿಯಾಗಿಲ್ಲ ಎಂದರು.

ಲಾಕ್‌ಡೌನ್‌ ಜಾರಿ ಹಿನ್ನೆಲೆಯಲ್ಲಿ ಬಡಜನರು, ಮಧ್ಯಮವರ್ಗ, ಕೂಲಿಕಾರರು, ಕಾರ್ಮಿಕರು, ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಶದ ಆರ್ಥಿಕತೆ ಕುಗ್ಗಿದೆ. ಇಂತಹ ಹೊತ್ತಿನಲ್ಲಿ 20 ಲಕ್ಷ ಕೋಟಿ ರೂ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವ ಮೂಲಕ ದೇಶದ ಆರ್ಥಿಕತೆಗೆ ನಾಂದಿ ಹಾಡಿದ್ದಾರೆ ಎಂದರು. ಕೊರೊನಾ ವೈರಸ್‌ನ್ನು ತಂತ್ರಜ್ಞಾನದಿಂದ ಅಳಿಸಲು ಅಸಾಧ್ಯ. ಹಿಂದೂ ಧರ್ಮದ ಆಚಾರ ವಿಚಾರಗಳಿಂದ ಅಳಿಸಲು ಸಾಧ್ಯವಿದೆ. ಪ್ರಕೃತಿ ವಿರುದ್ಧ ಮಾನವ ಹೋದಾಗ ಸಮಸ್ಯೆಗಳು ಉಂಟಾಗುತ್ತದೆ. ಅದನ್ನು ಪಕ್ಷಾತೀತವಾಗಿ ಕೋವಿಡ್ ವೈರಸ್‌ ವಿರುದ್ಧ ಹೋರಾಡಬೇಕಾಗಿದೆ. ಟೀಕೆ ಮಾಡುವುದನ್ನು ಬಿಟ್ಟು ಸಲಹೆ ನೀಡಬೇಕು. ಪ್ರತಿಯೊಬ್ಬರು ಯೋಧರ ರೀತಿಯಾಗಿ ಕೊರೊನಾ ವಿರುದ್ಧ ಹೋರಾಟ ಮಾಡಬೇಕು. ನಿಜವಾದ ಜೀವನ ಇನ್ನ ಮುಂದೆ ಪ್ರಾರಂಭವಾಗುತ್ತದೆ. ಹಿಂದಿನಂತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದರು. ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ, ಮಂಡಲಾಧ್ಯಕ್ಷ ಬಸವರಾಜ ನಲತ್ವಾಡ್‌, ಅನಂತ ಪದ್ಮನಾಭ ಸ್ವಾಮಿ, ಸಂದೀಪ್‌ ಸಿಂಗ್‌, ಶಂಕರ ಮೇಟಿ, ಜೀವರತ್ಮಂ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next