Advertisement

ವಿಜಯನಗರ ವಸಂತ ವೈಭವ

12:52 PM Jan 10, 2020 | Naveen |

ಹೊಸಪೇಟೆ: ಹಂಪಿ ಉತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಿರುವ ವಿಜಯನಗರ ವಸಂತ ವೈಭವ ಮೆರವಣಿಗೆಗೆ ಗುರುವಾರ ಸಂಜೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದರು.

Advertisement

ಶ್ರೀಕೃಷ್ಣ ದೇವರಾಯನ ಪ್ರತಿಮೆ ವಾಹನ, ನಂದಿಧ್ವಜ, ಶಂಖ, ಕಹಳೆ, ಉದ್ದದ ಮನುಷ್ಯರು, ವಿಚಿತ್ರ ಮನುಷ್ಯರು, ಸುಲ್ತಾನ್‌ ಹೋರಿಗಳು, ಗೂಳಿ ಮತ್ತು ಕಟ್ಟಪ್ಪ, ಪಾಂಚ್‌ ಪಂಟರ್, ಬಣ್ಣ ಬಣ್ಣದ ಕೊಡೆ ಹಿಡಿದ ಕಲಾವಿದರು, ಡೈನಾಸರ್‌, ಊಸರವಲ್ಲಿ, ನಾಸಿಕ್‌ ಬ್ಯಾಂಡ್‌, ಹಗಲು ವೇಷಗಾರರು, ಮರಗಾಲು ಕಲಾವಿದರು. ಚಿತ್ರದುರ್ಗದ ಬ್ಯಾಂಡ್‌ ಸೆಟ್‌, ಗೊರವರ ಕುಣಿತ, ಸೋಮನ ಕುಣಿತ, ತೆಯ್ಯಮ್‌, ತಮಿಳುನಾಡು ವಾದ್ಯ, ಪುರುಲಿಯಾ, ಯಕ್ಷಗಾನ ವೇಷ, ಕಾರ್ಟೂನ್ಸ್‌, ಪ್ರಾಣಿ ಪಕ್ಷಿಗಳು, ಮರಾಠಾ ಸೈನಿಕರು, ಸಾಮಾನ್ಯ ಸೈನಿಕರು, ಮಂಗಲ್‌ ಪಾಂಡೆ ಸೈನಿಕರು, ಬಾಹುಬಲಿ ಸೈನಿಕರು, ಮಿಲಿಟಿರಿ ಸೈನಿಕರು, ಜೋಕರ್, ಶಾಲಾ ಬ್ಯಾಂಡ್‌, ಹೊನ್ನಾವರ ಬ್ಯಾಂಡ್‌, ಡೊಳ್ಳು ಕುಣಿತ, ಜಗ್ಗಳಿಕೆ ಮೇಳ, ತಾಷಾರಾಮ್‌ಡೋಲು, ಪಟದ ಕುಣಿತ, ಲಂಬಾಣಿ ಕುಣಿತ, ಕಂಸಾಳೆ, ವೀರಗಾಸೆ, ಅಲಾಯಿ ಹೆಜ್ಜೆ ಮೇಳ, ದೊಡ್ಡ ಮೋಹನಿಯಾಟಂ, ಧೋಲ್‌ ಚಲೋಮ್‌, ಕೊಂಚಾಡಿ ಚೆಂಡೆ, ಅರ್ದನಾರೇಶ್ವರ, ವೀರಭದ್ರ ಕುಣಿತ, ಕೀಲುಕುದುರೆ, ಶಿಲ್ಪಾಗೊಂಬೆ ಬಳಗ, ಚಿಲಿಪಿಲಿ ಬೊಂಬೆ, ವಂಶಿಕಾ ಗೊಂಬೆ ಬಳಗ, ಕಿಂಗ್‌ ಕೋಂಗ್‌, ಕೇರಳದ ದೈವ ವೇಷ, ಪೂಜಾ ಕುಣಿತ, ಕುಂದಾಪುರ ಡೊಲು, ಹುಲಿವೇಷ, ಬೆಂಡರಕುಣಿತ, ಕೇರಳ ಚಿಟ್ಟೆ ವೇಷ, ಕೆರಳ ಕಾಳಿ ವೇಷ, ಕೇರಳ ದೇವರ ವೇಷ, ಪಂಜಾಬ್‌ ಬ್ಯಾಂಡ್‌, ಸೇರಿದಂತೆ ಸ್ಥಳೀಯ ಶಾಲಾ-ಕಾಲೇಜಿಗಳಿಂದ ಸ್ತಬ್ದ ಚಿತ್ರಗಳು ನಗರದಲ್ಲಿ ನಡೆದ ಮೆರವಣಿಗೆಗೆ ಮೆರಗು ನೀಡಿದವು.

ರಸ್ತೆಯ ಎರಡು ಬದಿಯಲ್ಲಿ ನಾನಾ ಚಿತ್ತಾರದ ರಂಗೋಲಿ, ತಳಿರು ತೋರಣಗಳಿಂದ ಮೇನ್‌ ಬಜಾರ್‌ ರಸ್ತೆಯನ್ನು ಸಿಂಗಾರಗೊಳಿಸಲಾಗಿತ್ತು. ಮೇನ್‌ ಬಜಾರ್‌ ರಸ್ತೆ ಮೂಲಕ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ಮಾರ್ಡನ್‌ ವೃತ್ತ, ರೋಟರಿ ವೃತ್ತ, ತಹಶೀಲ್ದಾರ್‌ ಕಚೇರಿ ಮೂಲಕ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕಾಲೇಜು ರಸ್ತೆ ಮೂಲಕ ತಾಲೂಕು ಕ್ರೀಡಾಂಗಣದಲ್ಲಿ ಕಲಾ ತಂಡಗಳು ಸಮಾವೇಶಗೊಂಡವು. ನಂತರ ಕ್ರೀಡಾಂಗಣದಲ್ಲಿ ಬಾಣ ಬಿರಿಸು ಪ್ರದ ರ್ಶನ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಶಾಸಕ ಆನಂದ ಸಿಂಗ್‌,
ಸಂಸ ದ ವೈ. ದೇವೇಂದ್ರ, ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ, ಜಿಪಂ ಸಿಇಒ ನಿತೀಶ್‌, ಸಹಾಯಕ ಆಯುಕ್ತ ಶೇಖ್‌ ತನ್ವೀರ್‌ ಅಸೀಫ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ, ಹಿಂಪಿ ವಿಶ್ವಪಂರಪರೆ ಪರಂಪರೆ
ನಿರ್ವಾಹಣಾ ಪ್ರಾಧಿಕಾರದ ಆಯುಕ್ತ ಪಿ.ಎಲ್‌. ಲೋಕೇಶ್‌, ತಾಪಂ
ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕುಮಾರ್‌, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರು ಬಸವರಾಜ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next