Advertisement

ಹೊಸಪೇಟೆ: 90 ಸಾವಿರ ರೂ. ಮೌಲ್ಯದ ಬೈಕ್ ಸಹಿತ ಕಳ್ಳರಿಬ್ಬರ ಬಂಧನ

08:14 PM Oct 23, 2022 | Team Udayavani |

ಹೊಸಪೇಟೆ: ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿರುವ ನಗರದ ಪಟ್ಟಣ ಠಾಣೆ ಪೊಲೀಸರು, 89,300 ರೂ ಮೌಲ್ಯದ ಬೈಕ್ ಭಾನುವಾರ ವಶಪಡಿಸಿಕೊಂಡಿದ್ದಾರೆ.

Advertisement

ನಗರದ ೧೦ ನೇ ವಾರ್ಡ್ ನಿವಾಸಿ ಮೌಲಾಹುಸೇನ್ (26) ಹಾಗೂ 9 ನೇ ವಾರ್ಡ್ ನಿವಾಸಿ ಮಂಜುನಾಥ (22) ಬಂಧಿತ ಆರೋಪಿಗಳು.
ಗುರುಕೃಪ ಟೆಕ್ಸಟೈಲ್ಸ್ ಮಾಲೀಕ ಆರ್. ಚೇತನ್ ಕುಮಾರ್ ಅವರಿಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಳೆದ ಅ.22 ರಂದು ಬೈಕ್ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರು ನಗರದ ಮೀರಾಲಂ ಟಾಕೀಸ್ ಹತ್ತಿರ ಬೈಕ್ ಕಳ್ಳರನ್ನು ಬಂಧಿಸಿ, ಬೈಕ್ ವಶಪಡಿಸಿಕೊಂಡಿದ್ದಾರೆ.

ಡಿವೈಎಸ್‌ಪಿ ವಿಶ್ವನಾಥ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಪಿಐ ಎಂ. ಶ್ರೀನಿವಾಸ ರಾವ್ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ನಾಗರಾಜ್, ಬಿ.ರಾಘವೇಂದ್ರ, ಶ್ರೀರಾಮರೆಡ್ಡಿ, ಪರಶುನಾಯ್ಕ, ಲಿಂಗರಾಜ್, ಜೆ. ಪಕ್ಕೀರಪ್ಪ ಕಾರ್ಯಚರಣೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next