ಹೊಸಪೇಟೆ: ಮಕರ ಸಂಕ್ರಾತಿ ಪ್ರಯುಕ್ತ ಇಲ್ಲಿನ ನೆಹರು ಕಾಲೋನಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜ.14ರ ಮಂಗಳವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನದ ಹಿನ್ನೆಲೆಯಲ್ಲಿ ಅಯ್ಯಪ್ಪ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಪಂಚಾಮೃತ ಅಭಿಷೇಕ, ತುಪ್ಪದ ಅಭಿಷೇಕ, ಭಸ್ಮಾಭಿಷೇಕಗೈದು, ವಿಶೇಷ ಪೂಜೆ ಸಲ್ಲಿಸಿದರು. ಶಬರಿಮಲೆಯಲ್ಲಿ ಜ್ಯೋತಿ ದರ್ಶನವಾಗುತ್ತಿದಂತೆ ಇಲ್ಲಿ ಮಣಿಕಂಠ ಸ್ವಾಮಿಗೆ ಮಹಾಮಂಗಳಾರತಿಗೈದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೀಪಾರಾಧನೆ ನಡೆಯಿತು.
ಬೆಳಿಗ್ಗೆಯಿಂದಲೇ ಅಯ್ಯಪ್ಪ ಭಕ್ತರು, ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹೂ,ಹಣ್ಣು, ಕಾಣಿಕೆ ಸಲ್ಲಿಸಿ, ಪ್ರಾರ್ಥಿಸಿದರು. ಬಳಿಕ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತರು ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಪ್ರಧಾನ ಆರ್ಚಕ ಶಂಕರ್ ಎನ್.ನಂಬೂದರಿ, ಅಯಪ್ಪ ಸ್ವಾಮಿಗೆ ಅಯ್ಯಪ್ಪ ಸ್ವಾಮಿ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಜನಾರ್ಧನ ರೆಡ್ಡಿ, ಕಾರ್ಯದರ್ಶಿ ಗಣಪತಿ ಸ್ವಾಮಿ, ಪ್ರಲ್ಹಾದ್ ಭೂಪಾಳ್, ಉಪಾಧ್ಯಕ್ಷ ಡಿ.ವೆಂಕಟೇಶ್, ಖಜಾಂಚಿ ರವೀಂದ್ರನಾಥ ಗುಪ್ತ, ನಿರ್ದೇಶಕರಾದ ಮಹಾಂತೇಶ್, ಶಿವುಕುಮಾರ್, ರಾಜೇಶ್, ಪ್ರಸನ್ನ ಹಾಗೂ ಭಕ್ತರು ಭಾಗವಹಿಸಿದ್ದರು.