ಮೂರನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಜು.9ರಿಂದ 16ರವರೆಗೆ ನಡೆಯಲಿದೆ ಎಂದು ಜಿ20 ಶೆರ್ಪಾದ
ಮುಖ್ಯಸ್ಥ ಅಮಿತಾಭ್ ಕಾಂತ್ ತಿಳಿಸಿದರು.
Advertisement
ವಿಶ್ವವಿಖ್ಯಾತ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ನಡೆಯಲಿರುವ ಶೆರ್ಪಾ ಸಭೆಗೆ ಸಂಬಂಧಿಸಿದಂತೆ ಭಾನುವಾರಖಾಸಗಿ ಹೊಟೇಲ್‌ನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ಕೈಗೊಂಡ ಸಿದ್ಧತಾ ಸಭೆಯ ನಂತರ ಸುದ್ದಿಗಾರರೊಂದಿಗೆ
ಮಾತನಾಡಿದರು. ಸಿದ್ಧತಾ ಸಭೆಗೂ ಮುನ್ನ ಭಾರತದ ಜಿ-20 ಉನ್ನತ ಮಟ್ಟದ ಅಧಿಕಾರಿಗಳ ತಂಡ ಬೆಳಿಗ್ಗೆ ವಿಶ್ವವಿಖ್ಯಾತ ಹಂಪಿಗೆ ತೆರಳಿ ಜಿ20 ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳು ಭೇಟಿ ನೀಡಲಿರುವ ಸ್ಥಳಗಳ ಪರಿಶೀಲಿಸಿ, ಮಾಹಿತಿ ಪಡೆದರು.
ಘೋಷವಾಕ್ಯದಡಿ ಶೃಂಗಸಭೆ ಆಯೋಜನೆ ಮಾಡಲಾಗುತ್ತಿದೆ. ಇಲ್ಲಿ 43 ದೇಶಗಳ ಉನ್ನತಮಟ್ಟದ ಅಧಿಕಾರವುಳ್ಳ ಪ್ರತಿನಿಧಿಗಳು
ಭಾಗವಹಿಸಲಿದ್ದು,ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ನಡೆಯಲಿದೆ ಎಂದು ತಿಳಿಸಿದರು.
Related Articles
ಕರಕುಶಲತೆ, ಕೈಮಗ್ಗ, ಸಾಂಪ್ರದಾಯಿಕತೆ ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ ಅದರಲ್ಲೂ ವಿಶೇಷವಾಗಿ ಸಿರಿಧಾನ್ಯಗಳ
ಮಹತ್ವ ಸಾರುವ ಜೊತೆಗೆ ಇವುಗಳ ಜಾಗತಿಕ ಪರಿಚಯ ಹಾಗೂ ಮಾರುಕಟ್ಟೆ ಕಂಡುಕೊಳ್ಳಲು ವಿಪುಲ ಅವಕಾಶ
ಜಿ20ಯಿಂದ ದೊರೆಯುತ್ತದೆ ಎಂದರು.
Advertisement
ಶೃಂಗಸಭೆ ವೇಳೆ ಹಂಪಿಯ ಐತಿಹಾಸಿಕ ಮಹತ್ವ ಸಾರಲಾಗುತ್ತದೆ.ಸಾಂಸ್ಕೃತಿಕ ಪ್ರದರ್ಶನದ ಮೂಲಕ ಗತವೈಭವ ಸಾರುವ ಸಿದ್ಧತೆ ನಡೆಯಲಾಗುತ್ತದೆ. ಕೇರಳದಲ್ಲಿ ಇರುವ ಪ್ರವಾಸೋದ್ಯಮ, ನೈಸರ್ಗಿಕತೆಯಂತೆ ಕರ್ನಾಟಕ ರಾಜ್ಯದಲ್ಲಿ ಸಹ ಅತ್ಯಧಿಕ ಪ್ರವಾಸಿ ತಾಣಗಳು ಇದ್ದು, ಇವುಗಳೂ ಸಹ ರಾಜ್ಯವನ್ನು ಒಗ್ಗೂಡಿಸಲು ಸಾಧ್ಯವಾಗುತ್ತಿದೆ ಎಂದರು.
ಸಭೆಯ ಜೊತೆಗೆ ತೆರೆದ ವಸ್ತು ಸಂಗ್ರಹಾಲಯವಾಗಿರುವ ಹಂಪಿಯ ಐತಿಹಾಸಿಕ ಮಹತ್ವವನ್ನು ಪ್ರತಿನಿಧಿಗಳಿಗೆ ಸಾರಲಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಕಲಾ ಪ್ರದರ್ಶನದ ಮೂಲಕ ಗತವೈಭವ ಪ್ರಸ್ತುತಪಡಿಸಲು ಸಿದ್ಧತೆ ಸಹ ಕೈಗೊಳ್ಳಲಾಗುತ್ತಿದೆ ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಸಭೆ ಆಯೋಜನೆಗೊಳ್ಳುತ್ತಿದೆ ಎಂದರು.
ಪ್ರವಾಸೋದ್ಯಮ ಹಾಗೂ ಸಂಸ್ಕೃತಿಯ ಜಾಗತೀಕರಣಕ್ಕೆ ಶೆರ್ಪಾ ಸಭೆಯು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಅವಕಾಶದೊರಕಿಸಿಕೊಡಲಿದ್ದು,ಕರ್ನಾಟಕ ರಾಜ್ಯ ಹಾಗೂ ಹಂಪಿ ವಿಶ್ವ ಭೂಪಟದಲ್ಲಿ ಕರ್ನಾಟಕದಲ್ಲಿ ಮೂಡಿಬರುತ್ತದೆ. ಜಾಗತಿಕ
ಮಟ್ಟದಲ್ಲಿ ಅನಾವರಣ ಶೆರ್ಪಾಸಭೆಯ ಮೂಲಕ ಹೆಚ್ಚಿನ ಅವಕಾಶ ಕಲ್ಪಿಸಲಿದೆ ಎಂದರು. ಜಂಟಿ ಕಾರ್ಯದರ್ಶಿ ಆಶಿಶ್ ಸಿನ್ಹಾ, ಜಂಟಿ ಕಾರ್ಯದರ್ಶಿ (ಭದ್ರತೆ) ಭಾವನಾ ಸಕ್ಸೇನಾ, ಅಧೀನ ಕಾರ್ಯದರ್ಶಿ ಆಸಿಮ್ ಅನ್ವರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾತ್
ಮನೋಹರ್ ವಿ., ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್.,
ಜಿಪಂ ಸಿಇಒ ಸದಾಶಿವಪ್ರಭು ಇತರರು ಇದ್ದರು. ಹೊಸಪೇಟೆ: ಜುಲೈ ತಿಂಗಳ 3ನೇ ವಾರ ನಡೆಯಲಿರುವ ಜಿ20 ಶೃಂಗಸಭೆಗೆ ಸಂಬಂಧಿಸಿದಂತೆ ವಿಶ್ವವಿಖ್ಯಾತ ಹಂಪಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳನ್ನು ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಭಾನುವಾರ ಬೆಳಗ್ಗೆ ವಿಶ್ವಪಾರಪಂರಿಕ ಪ್ರದೇಶ ಹಂಪಿಯ ಚಕ್ರತೀರ್ಥ ಬಳಿಯ ನದಿ ದಂಡೆಯಲ್ಲಿ ಜಿ20 ಸಭೆಗೆ ಆಗಮಿಸುವ ಪ್ರತಿನಿ ಧಿಗಳು ಕೈಗೊಳ್ಳಲಿರುವ ಹರಿಗೋಲು ಸವಾರಿಯ(ಕೊರಾಕಲ್ ರೈಡ್) ಪ್ರಾರಂಭಿಕ ಸ್ಥಳದ ಪರಿಶೀಲನೆ ನಡೆಸಿದರು.