ಹೊಸಪೇಟೆ: ಬಿಸಿಲು, ಮಳೆ, ಚಳಿ ಇದ್ಯಾವುದನ್ನೂ ಲೆಕ್ಕಿಸದೆ ಕಾಲ್ನಡಿಗೆಯಲ್ಲೇ ನಿತ್ಯ ನಾಲ್ಕಾರು ಕಿ.ಮೀ ದೂರ ಸಾಗಿ ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಹಂಪಿ ಗ್ರಾಮ ಪಂಚಾಯತಿ ಈಗ ಆಟೋ ಭಾಗ್ಯ ಕರುಣಿಸಿದೆ.
Advertisement
ಹಂಪಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂಗನಾಥನಹಳ್ಳಿ ಗ್ರಾಮದಲ್ಲಿ ಶಾಲೆ ಇಲ್ಲ. ಬೇರೆ ಕಡೆ ಇರುವ ಶಾಲೆಗೆ ತೆರಳಿ ಓದಬೇಕೆಂದರೆ ಬಸ್ ಸಂಚಾರವೂ ಇಲ್ಲ. ಹೀಗಾಗಿ ಇಲ್ಲಿಯ ಮಕ್ಕಳು ಅನಿವಾರ್ಯವಾಗಿ ನಿತ್ಯ ಕಾಲ್ನಡಿಗೆ ಮೂಲಕ ನಾಲ್ಕು ಕೀಮಿ ದೂರದಲ್ಲಿರುವ ಕಡ್ಡಿ ರಾಂಪುರ ಗ್ರಾಮದ ಸರಕಾರಿ ಶಾಲೆಗೆ ಬಂದು ಓದುತ್ತಿದ್ದಾರೆ. ಶಾಲೆ ಅವಧಿ ಮುಗಿದ ನಂತರ ಪುನಃ ನಾಲ್ಕು ಕೀಮಿ ನಡೆದು ಮನೆ ಸೇರುತ್ತಾರೆ. ಮಕ್ಕಳ ಕಷ್ಟಕ್ಕೆ ಸ್ಪಂದಿಸಿರುವ ಹಂಪಿ ಗ್ರಾಮ ಪಂಚಾಯ್ತಿ ತನ್ನ ಸ್ವಂತ ಸಂಪನ್ಮೂಲದಲ್ಲಿ ಆಟೋ ವ್ಯವಸ್ಥೆ ಕಲ್ಪಿಸಿದೆ.
Related Articles
ಮತ್ತೆ ಚಿಂತೆಗೀಡಾಗಿದ್ದಾರೆ. ಕೂಡಲೇ ಈ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
Advertisement
ಸಿಂಗನಾಥ ಹಳ್ಳಿ ಮಕ್ಕಳು ಕಾಲ್ನಡಿಗೆಯಲ್ಲಿ ಶಾಲೆಗೆ ತೆರುಳುತ್ತಿರುವುದು ಕಂಡು ಬಂತು. ಕೂಡಲೇ ಈ ಮಕ್ಕಳಿಗೆ ಆಟೋ ವ್ಯವಸ್ಥೆ ಮಾಡ ಬೇಕು ಎಂದೆನ್ನಿಸಿ ಆಟೋ ಗೊತ್ತು ಮಾಡಿದೆ. ಕಳೆದ ಅಕ್ಟೋಬರ್ ತಿಂಗಳಿಂದ ಆಟೋ ಮೂಲಕ ಮಕ್ಕಳು ಕಡ್ಡಿ ರಾಂಪುರದ ಸರ್ಕಾರಿ ಶಾಲೆಗೆ ಬಂದು ಹೋಗುವುದು ಮಾಡುತ್ತಿದ್ದಾರೆ.ಟಿ.ಎ.ರಾಜೇಶ್ವರಿ,
ಪಿಡಿಒ, ಹಂಪಿ. ಹಂಪಿ ಗ್ರಾಮ ಪಂಚಾಯ್ತಿ ತಾಲೂಕಿನ ಸಿಂಗನಾಥ ನಹಳ್ಳಿಯ ಮಕ್ಕಳಿಗೆ ಆಟೋ ವ್ಯವಸ್ಥೆ ಮಾಡಿರುವುದು ಅಭಿನಂದನಾರ್ಹ. ಇದು ಇತರೆ ಗ್ರಾಮ ಪಂಚಾಯ್ತಿಗೆ ಮಾದರಿಯಾಗಿದೆ. ಬೇರೆ ಗ್ರಾಮ ಪಂಚಾಯ್ತಿಗಳು ಇಂಥ ಕಾರ್ಯವನ್ನು ಮಾಡುವ ಮೂಲಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಬೇಕು.
ಎಲ್. ಡಿ. ಜೋಷಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸಪೇಟ ಕಳೆದ ಎರಡು-ಮೂರು ತಿಂಗಳಿಂದ ನನ್ನ ಮೂರು ಮಕ್ಕಳು ಆಟೋದಲ್ಲಿ ಕಡ್ಡಿರಾಂಪುರ ಶಾಲೆಗೆ ತೆರಳುತ್ತಿದ್ದಾರೆ. ಆಟೋ ಬಾಡಿಗೆಯನ್ನು ಹಂಪಿ ಗ್ರಾಮ ಪಂಚಾಯ್ತಿ ನೀಡುತ್ತಿದೆ. ಆದರೆ ಗ್ರಾಮ ಪಂಚಾಯ್ತಿ ಆಟೋ ಚಾಲಕನಿಗೆ ಒಂದು ತಿಂಗಳು ಮಾತ್ರ ಬಾಡಿಗೆ ನೀಡಿದೆ. ಹೀಗಾದರೆ, ನಾನು ಮಕ್ಕಳನ್ನು ಕರೆದ್ಯೊಯುದನ್ನು ನಿಲ್ಲಿಸುತ್ತೇನೆ ಎಂದು ಚಾಲಕ ಹೇಳುತ್ತಿದ್ದಾನೆ.
ಮಾರೆಪ್ಪ,
ಪಾಲಕ, ಸಿಂಗತನ ಹಳ್ಳಿ ಗ್ರಾಮ ಸಿಂಗನಾಥನ ಹಳ್ಳಿ ಹಾಗೂ ಕಡ್ಡಿ ರಾಂಪುರ ಗ್ರಾಮಕ್ಕೆ ಶಾಲಾ ಮಕ್ಕಳ ಅನುಕೂಲಕ್ಕಾಗಿ
ಬೆಳಗ್ಗೆ ಮತ್ತು ಸಂಜೆ ಹೊತ್ತು ಬಸ್ ಸಂಚಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಜಿ.ಶೀ ನಯ್ಯ, ವಿಭಾಗೀಯ ನಿಯಂತ್ರಣಾಧಿಕಾರಿ,
ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ, ಉಪ ವಿಭಾಗ, ಹೊಸಪೇಟೆ ಸಿಂಗನಾಥ ಹಳ್ಳಿ ಗ್ರಾಮದ 11 ಮಕ್ಕಳನ್ನು ಕಡ್ಡಿ ರಾಂಪುರದ ಶಾಲೆಗೆ ಆಟೋದಲ್ಲಿ ಕಳೆದ ಮೂರು ತಿಂಗಳಿಂದ ಕರೆ ದೊಯ್ಯುತ್ತಿದ್ದೇನೆ. ಗ್ರಾಮ ಪಂಚಾಯ್ತಿ ನನಗೆ ಒಂದು ತಿಂಗಳ ಬಾಡಿಗೆ ನೀಡಿದೆ. ಇನ್ನೆರಡು ತಿಂಗಳ ಬಾಡಿಗೆ ನೀಡಬೇಕಿದೆ.
ಪಳನಿ,
ಆಟೋ ಚಾಲಕ ಹಂಪಿ