Advertisement

ಸಾಂಪ್ರದಾಯಿಕ ದೊಡ್ಡಾಟ ಉಳಿಸಿ, ಬೆಳೆಸಿ: ಬಸವರಾಜ

04:27 PM Aug 17, 2019 | Naveen |

ಹೊಸಪೇಟೆ: ಟಿವಿ ಹಾಗೂ ಸಿನಿಮಾಗಳ ಭರಾಟೆಯ ನಡುವೆ ಕಣ್ಮರೆಯಾಗುತ್ತಿರುವ ಉತ್ತರ ಕರ್ನಾಟಕದ ಸಾಂಪ್ರದಾಯಿಕ ದೊಡ್ಡಾಟ ಕಲೆಯನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಬೇಕಾಗಿದೆ ಎಂದು ಬಳ್ಳಾರಿ ಜಿಲ್ಲಾ ಜಾನಪದ ಪರಿಷತ್‌ ಸದಸ್ಯ ಟಿ.ಎಚ್.ಎಂ. ಬಸವರಾಜ ಹೇಳಿದರು.

Advertisement

ಟಿ.ಪಿ. ಕೈಲಾಸಂ 55ನೇ ದಿನಾಚರಣೆ ಪ್ರಯುಕ್ತ ಟಿ.ಬಿ.ಡ್ಯಾಂ ಕನ್ನಡ ಕಲಾ ಸಂಘ ಇಲ್ಲಿನ ಪಂಪ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಗಿರಿಜಾ ಕಲ್ಯಾಣ ದೊಟ್ಟಾಟ ಪ್ರದರ್ಶನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ವಿನೂತನ ಅಭಿಯಾನದ ಮೂಲಕ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ದೊಡ್ಡಾಟದ ಕಲೆಯನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕು. ಕನ್ನಡ ಕಲಾ ಸಂಘ, ಕೈಲಾಸಂ ದಿನಾಚರಣೆಯನ್ನು ಕಳೆದ 55 ವರ್ಷಗಳಿಂದ ಆಚರಿಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.

ಹಿರಿಯ ರಂಗ ಕಲಾವಿದೆ ಡಾ|| ಕೆ. ನಾಗರತ್ನಮ್ಮ, ಅಧ್ಯಕ್ಷತೆ ವಹಿಸಿದ್ದರು. ಈ ವರ್ಷದ ಕೈಲಾಸಂ ಪ್ರಶಸ್ತಿಯನ್ನು ಎಮ್ಮಿಗನೂರು ಗ್ರಾಮದ, ಕೊತ್ತಲಚಿಂತ ಹೇಮರೆಡ್ಡಿ ಅವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇತ್ತೀಚಿಗೆ ಅಂತರಾಷ್ಟ್ರೀಯ ಟಾರ್ಗೆಟ್ ಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಸ್ಥಳೀಯ ಕ್ರೀಡಾಪಟು ಎಂ.ಎ.ಥಾಮಸ್‌ ಹಾಗೂ ದಿವಂಗತ ಡಾ|| ಬಸವರಾಜ ಮಲಶೇಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಶಾರದಾ ಮಲಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರಂಭದಲ್ಲಿ ಗಣ್ಯರು, ಕೈಲಾಸಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಂಘದ ಅಧ್ಯಕ್ಷ ಟಿ.ಜಿ.ಸದಾನಂದ ವೇದಿಕೆ ಮೇಲೆ ಇದ್ದರು. ಆರ್‌.ಎಸ್‌ ಕುಲಕರ್ಣಿ ಪ್ರಾರ್ಥನಿಸಿದರು. ಗಿರೀಶ್‌ ದೇಸಾಯಿ ಸ್ವಾಗತಿಸಿದರು. ಆನಂದ ಪುರೋಹಿತ ಪ್ರಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಕುಲಕರ್ಣಿ ಪರಿಚಯಿಸಿದರು. ಸಿ.ಹೆಚ್ ರಾಜಗೋಪಾಲ್, ಕೈಲಾಸಂ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ಸವಿತಾ ಕಟಿಗಿ ಕೈಲಾಸಂರವರ “ನಮ್ಮ ತಿಪ್ಪಾರಳ್ಳಿ ಬಲು ದೂರ” ಎಂಬ ಹಾಡು ಹಾಡಿದರು. ಕು|| ಅಂಜಲಿ ಬೆಳಗಳ್‌ ನಿರೂಪಿಸಿದರು. ನಂತರ ಸಂಘದ ಸದಸ್ಯರಿಂದ ಗಿರಿಜಾ ಕಲ್ಯಾಣ ದೊಡ್ಡಾಟ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next