Advertisement

ಸಿಪಿಐಎಂ ಕಾರ್ಯಕರ್ತರ ಪ್ರತಿಭಟನೆ

05:03 PM Aug 08, 2019 | Naveen |

ಹೊಸಪೇಟೆ: ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಮತ್ತು 35(ಎ)ಪರಿಚ್ಚೇದದಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ಸಿಪಿಐಎಂ ತಾಲೂಕು ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಶ್ರಮಿಕ ಭನದ ಮುಂಭಾಗದಲ್ಲಿ ಜಮಾವಣೆಗೊಂಡ ಸಿಪಿಐಎಂ ಕಾರ್ಯಕರ್ತರು, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕೇಂದ್ರ ನಿರ್ಧಾರ ಜನ ವಿರೋಧಿಯಾಗಿದೆ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿದರು.

ಕೇಂದ್ರ ಸರಕಾರ ಜಮ್ಮು ಕಾಶ್ಮೀರದ 370ನೇ ವಿಧಿ ಹಾಗೂ 35ಎ ರದ್ದು ಮಾಡಿದೆ. ಇದನ್ನು ತರಾತುರಿಯಲ್ಲಿ ಮಾಡಿದೆ. ಈ ನಡೆ ಅಲ್ಲಿನ ಸ್ವಯತ್ತೆಗೆ ಧಕ್ಕೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಪಾಯದ ಎದುರಾಗುವ ಸ್ಥಿತಿ ಬರಬಹುದು. ಕೇಂದ್ರ ಸರಕಾರದ ಆರ್ಥಿಕ ಬಿಕ್ಕಟ್ಟನ್ನು ಎದುರಿಸದೇ ಭಾವನತ್ಮಕ ವಿಚಾರಗಳನ್ನು ಕೆದುಕುತ್ತಿದೆ ಎಂದು ಸಿಪಿಐ(ಎಂ) ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಭಾಸ್ಕರರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಎ.ಕರುಣಾನಿಧಿ, ಎಂ.ಜಂಬಯ್ಯನಾಯಕ, ಯಲ್ಲಾಲಿಂಗ, ಎಂ.ಗೋಪಾಲ, ಶಿವುಕುಮಾರ ಹಾಗೂ ಯಲ್ಲಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next