Advertisement

ಕಲುಷಿತ ನೀರು ಸೇವನೆ; ವಾಂತಿ-ಭೇದಿ ಉಲ್ಬಣ

05:07 PM May 05, 2019 | Naveen |

ಹೊಸಪೇಟೆ: ಕಲುಷಿತ ನೀರು ಸೇವನೆಯಿಂದ ನಗರದಲ್ಲಿ ವಾಂತಿ-ಭೇದಿ ಪ್ರಕರಣ ಬೆಳಕಿಗೆ ಬಂದಿದ್ದು, ನಗರದ ಸಾರ್ವಜನಿಕ ಸರ್ಕಾರಿ (ನೂರು ಹಾಸಿಗೆ)ಉಪವಿಭಾಗೀಯ ಆಸ್ಪತ್ರೆಯಲ್ಲಿ ಕಳೆದ ಹತ್ತು ದಿನಗಳ ಅವಧಿಯಲ್ಲಿ ನೂರಾರು ಜನರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ನಗರದ ವಿವಿಧ ವಾರ್ಡ್‌ಗಳಲ್ಲಿ ಕಳೆದ ಹಲವಾರು ದಿನಗಳಿಂದ ಕುಡಿಯುವ ನೀರಿನ ಪೈಪ್‌ನಲ್ಲಿ ಕಲುಷಿತ ಮಿಶ್ರಣಗೊಂಡ ಪರಿಣಾಮ ನೂರಾರು ಜನರು ವಾಂತಿ-ಭೇದಿಯಿಂದ ಬಳಲಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶನಿವಾರ ಒಂದೇ ದಿನವೇ ವಾಂತಿ-ಭೇದಿ ಪ್ರಕರಣಕ್ಕೆ 20ಕ್ಕೂ ಜನ ಅಧಿಕ ಜನರು ದಾಖಲಾಗಿ ಚಿಕಿತ್ಸೆ ಹೊಂದಿದ್ದಾರೆ. ಕೆಲವರು ತಮ್ಮ ಮನೆಗಳಿಗೆ ತೆರಳಿದರೆ, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ಸಿದ್ದಲಿಂಗಪ್ಪ ಚೌಕಿ, ಬಾಣದಕೇರಿ, ಚಿತ್ತವಾಡ್ಗಿ ವರಕೇರಿ, ಛಲವಾದಿ ಕೇರಿ, ಎಸ್‌.ಆರ್‌.ನಗರ, ಚಪ್ಪರದಳ್ಳಿ, ಅಮರಾವತಿಯ ಭಾರತಿನಗರ, ಗಾಂಧಿ ನಗರ, ಚಿತ್ರಕೇರಿ, ಪಟೇಲ್ ನಗರ, ಕಂಚುಗಾರ ಪೇಟೆ, ಊರಮ್ಮ ಬಯಲು ವ್ಯಾಪ್ತಿಯ ನಾಗರಿಕರು, ಕಲಷಿತ ನೀರು ಸೇವನೆಯಿಂದ ವಾಂತಿ-ಭೇದಿಗೆ ಬಳಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅಲ್ಲದೇ ತಾಲೂಕಿನ ವರದಾಪುರ, ಲಡಕನಬಾವಿ ಸೇರಿದಂತೆ ತಾಲೂಕಿನ ಇತರೆ ಗ್ರಾಮಸ್ಥರು ವಾಂತಿ-ಭೇದಿ ಪ್ರಕರಣಕ್ಕೆ ದಾಖಲಾಗಿದ್ದಾರೆ. ಆಸ್ಪತ್ರೆ ತಜ್ಞವೈದ್ಯ ಡಾ.ಸೋಮಶೇಖರ್‌ ಮಾತನಾಡಿ, ಕಳೆದ ಹತ್ತು ದಿನಗಳಿಂದ ವಾಂತಿ ಭೇದಿ ಪ್ರಕರಣಗಳಿಗೆ ಆಸ್ಪತ್ರೆಯಲ್ಲಿ ನೂರಾರು ಜನರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಚಿಕಿತ್ಸೆ ಹೊಂದಿ ಈಗಾಗಲೇ ಗುಣಮುಖವಾಗಿ ತಮ್ಮ ಮನೆಗಳಿಗೆ ಮರಳಿದ್ದಾರೆ. ಇನ್ನು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನಗರಸಭೆ ಹಾಗೂ ತಾಲೂಕು ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಅವರು ನೀರಿನ ಮಾದರಿ ಪಡೆದು ಪರೀಕ್ಷೆಗೆ ಕಳಹಿಸಿದ್ದಾರೆ ಎಂದು ತಿಳಿಸಿದರು.

ಕಳೆದ ನಾಲ್ಕಾರು ದಿನಗಳಿಂದ ನಗರದ ಕೆಲವೆಡೆ, ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿ ಪ್ರಕರಣಗಳಿಗೆ ಸ್ಥಳೀಯ ನೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಕುಡಿಯಲು ನೀರು ಯೋಗ್ಯವಾಗಿಲ್ಲ. ಈಗಾಗಲೇ ಸ್ಥಳೀಯ ಪೌರಾಯುಕ್ತರಿಗೆ ಪತ್ರ ಬರೆದಿದೆ.
ಡಾ.ಭಾಸ್ಕರ್‌, ತಾಲೂಕು ಆರೋಗ್ಯಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next